ಪಲ್ಲೆಕೆಲೆ(ಶ್ರೀಲಂಕಾ): ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತದ ಮಹಿಳಾ ತಂಡ ಏಕದಿನ ಸರಣಿಯಲ್ಲೂ ಪಾರಮ್ಯ ಮುಂದುವರೆಸಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಬಳಗ 4 ವಿಕೆಟ್ಗಳ ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಶ್ರೀಲಂಕಾ ತಂಡ ಭಾರತೀಯ ಬೌಲರ್ಗಳ ಮುಂದೆ ಮಂಡಿಯೂರಿತು. ಹೀಗಾಗಿ 48.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 171ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪೆರೆರಾ(37), ಮಾದ್ವಿ(28) ಹಾಗೂ ಸಿಲ್ವಾ(43)ರನ್ಗಳಿಸಿದರು.
-
📸 📸: Snapshots from #TeamIndia's winning start to the three-match ODI series against Sri Lanka. 👍 👍
— BCCI Women (@BCCIWomen) July 1, 2022 " class="align-text-top noRightClick twitterSection" data="
Pic Courtesy: Sri Lanka Cricket pic.twitter.com/1FRidXr2LI
">📸 📸: Snapshots from #TeamIndia's winning start to the three-match ODI series against Sri Lanka. 👍 👍
— BCCI Women (@BCCIWomen) July 1, 2022
Pic Courtesy: Sri Lanka Cricket pic.twitter.com/1FRidXr2LI📸 📸: Snapshots from #TeamIndia's winning start to the three-match ODI series against Sri Lanka. 👍 👍
— BCCI Women (@BCCIWomen) July 1, 2022
Pic Courtesy: Sri Lanka Cricket pic.twitter.com/1FRidXr2LI
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಿಂಕು ಸಿಂಗ್, ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದುಕೊಂಡರೆ, ಗಾಯಕ್ವಾಡ್, ಹರ್ಮನ್ಪ್ರೀತ್ ತಲಾ 1 ವಿಕೆಟ್ ಹಾಗೂ ಪೂಜಾ ವಸ್ತ್ರಕರ್ 2 ವಿಕೆಟ್ ಕಿತ್ತರು.
ಇದನ್ನೂ ಓದಿ: IND vs ENG 5th ಟೆಸ್ಟ್: ಟಾಸ್ ಗೆದ್ದು ಇಂಗ್ಲೆಂಡ್ ಬೌಲಿಂಗ್, ಭಾರತಕ್ಕೆ ಸರಣಿ ಗೆಲ್ಲುವ ತವಕ
172 ರನ್ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸ್ಮೃತಿ ಮಂದಾನಾ(4) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಭಾಟಿಯಾ(1) ರನ್ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಒಂದಾದ ಶೆಫಾಲಿ ವರ್ಮಾ(35) ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್(44) ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಹರ್ಲಿನ್(34), ದೀಪ್ತಿ ಶರ್ಮಾ ಅಜೇಯ(22)ರನ್ ಪೇರಿಸಿದರು.
ಕೊನೆಯದಾಗಿ ವಸ್ತ್ರಕರ್ 21ರನ್ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಂಡ 38 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ಗಳಿಸಿ, ಗೆಲುವಿನ ನಗೆ ಬೀರಿತು. ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.