ಮುಂಬೈ : ಭಾರತ ತಂಡ ಸೀಮಿತ ಓವರ್ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿದೆ. ರಾಹುಲ್ ದ್ರಾವಿಡ್ 7 ವರ್ಷಗಳ ದೀರ್ಘ ಸಮಯದ ನಂತರ ಭಾರತದ ಡ್ರೆಸ್ಸಿಂಗ್ ರೂಮ್ಗೆ ಮರಳಲಿದ್ದಾರೆ. 2014ರಲ್ಲಿ ಭಾರತದ ಮಾಜಿ ನಾಯಕ ಕೆಲವು ಸಮಯ ಭಾರತ ತಂಡದೊಂದಿಗೆ ಕಳೆದಿದ್ದರು.
ಇದೀಗ ಭಾರತ ಸೀನಿಯರ್ ಆಟಗಾರರಿರುವ ಟೆಸ್ಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಅಲ್ಲೇ ಇದ್ದಾರೆ. ಹಾಗಾಗಿ, ಸೀಮಿತ ಓವರ್ಗಳ ಸರಣಿಗಾಗಿ ಲಂಕಾ ಪ್ರವಾಸ ಕೈಗೊಳ್ಳುವ ಭಾರತದ ಯುವ ಪಡೆಗೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಅವರು ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಪ್ರವಾಸಕ್ಕೆ ಹೊಸ ಕೋಚ್ ಮಾತ್ರವಲ್ಲದೆ, ಹೊಸ ನಾಯಕರಾಗಿ ಶಿಖರ್ ಧವನ್ಗೆ ಪಟ್ಟ ಕಟ್ಟಲಾಗಿದೆ. ಇಂದು ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ನಡೆದ ಪತ್ರಿಗೋಷ್ಠಿಯಲ್ಲಿ ಇಬ್ಬರು ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಭಾರತ ತಂಡದ ಮುಖ್ಯ ಕೋಚ್ ಆಗುತ್ತಿರುವುದು, ಕಲಿಯಲು ನನಗೆ ಒಳ್ಳೆಯ ಅವಕಾಶನ ಸಿಕ್ಕಿದಂತಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಇದೊಂದು ಅನುಭವಿ ಮತ್ತು ಹೊಸ ಆಟಗಾರರ ಅದ್ಭುತ ತಂಡ. ತರಬೇತಿದಾರನಾಗಿರುವುದು ನನಗೆ ರೋಮಾಂಚನಕಾರಿಯಾದ ಸನ್ನಿವೇಶವಾಗಿದೆ. ಏಕೆಂದರೆ, ನೀವು ಇಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತೀರಾ ಮತ್ತು ಇಲ್ಲಿ ಎಲ್ಲರೂ ಬಹಳಷ್ಟು ಕಲಿಯಲಿದ್ದಾರೆ ಎಂದು ನಿಮಗೆ ತಿಳಿದಿರುತ್ತದೆ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವು ಒಂದು ದೊಡ್ಡ ಗುಂಪಾಗಿ ಒಟ್ಟಾಗಿರಬೇಕು, ಆಗ ಕಲಿಯಲು ಮತ್ತು ಬೆಳೆಯಲು ಅವಕಾಶಗಳಿವೆ. ತರಬೇತುದಾರರಾಗಿ ನೀವು ಪ್ರತಿ ಅನುಭವದಿಂದಲೂ ಕಲಿಯುತ್ತೀರಿ.. ನಿಮ್ಮ ಬಗ್ಗೆ ಮತ್ತು ಕ್ರಿಕೆಟ್ ಬಗ್ಗೆ ನೀವು ಕಲಿಯುತ್ತೀರಿ. ಹಾಗಾಗಿ, ಕಲಿಯಲು ಮತ್ತು ಸುಧಾರಿಸಲು ನನಗೆ ಇದು ಮತ್ತೊಂದು ಅವಕಾಶ. ಇದಕ್ಕಾಗಿ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ" ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ. ದ್ರಾವಿಡ್ ಈ ಹಿಂದೆ ಭಾರತ ಎ, ಅಂಡರ್ -19 ಮತ್ತು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನು ಓದಿ:ಭಾರತದ ಸ್ವಿಂಗ್ ಸ್ಪೆಷಲಿಸ್ಟ್ರನ್ನು ಇಂಗ್ಲೆಂಡ್ ಪ್ರವಾಸದಿಂದ ಕೈಬಿಟ್ಟಿದ್ದು ದೊಡ್ಡ ತಪ್ಪು: ಮಾಜಿ ಆಯ್ಕೆಗಾರ