ಕೊಲಂಬೊ: ಲಂಡನ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಬಯೋಬಬಲ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಶ್ರೀಲಂಕಾದ ಮೂವರು ಪ್ಲೇಯರ್ಸ್ ಎರಡು ವರ್ಷ ನಿಷೇಧಕ್ಕೊಳಗಾಗಿದ್ದಾರೆ. ಆದರೆ ಒಂದು ವರ್ಷ ಅಮಾನತಿನಲ್ಲಿ ಇಡಲಾಗಿದೆ.
ಲಂಡನ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾದ ಉಪ ನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಆಟಗಾರ ದನುಷ್ಕಾ ಗುಣತಿಲಕ ಹಾಗೂ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಕೋವಿಡ್ ನಿಯಮ ಉಲ್ಲಂಘನೆ ಮಾಡಿ, ಲಂಡನ್ನ ವಿವಿಧ ಸ್ಥಳಗಳಲ್ಲಿ ಸುತ್ತಾಡಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಶ್ರೀಲಂಕಾ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಪ್ಲೇಯರ್ಸ್ಗಳಿಗೆ $50 000 ಡಾಲರ್ ದಂಡ ವಿಧಿಸಿದೆ.
ಇದನ್ನೂ ಓದಿ: ಬಯೋಬಬಲ್ ಉಲ್ಲಂಘನೆ: ಮೆಂಡಿಸ್ ಸೇರಿ ಲಂಕಾದ ಮೂವರು ಕ್ರಿಕೆಟರ್ಸ್ ಅಮಾನತು
ಮೂವರು ಪ್ಲೇಯರ್ಸ್ಗಳನ್ನು ಎರಡು ವರ್ಷ ಬ್ಯಾನ್ ಮಾಡಿರುವ ಲಂಕಾ ಬೋರ್ಡ್, ಒಂದು ವರ್ಷಗಳ ಕಾಲ ಅಮಾನತು ಮಾಡಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಬೇಕಾಗಿದ್ದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಉಪನಾಯಕ ಕುಶಾಲ್ ಮೆಂಡಿಸ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿರೋಷನ್ ಡಿಕ್ವೆಲ್ಲಾ ಹಾಗೂ ಧನುಷ್ಕಾ ಗುಣತಿಲಕ್ ಬಯೋಬಬಲ ಉಲ್ಲಂಘನೆ ಮಾಡಿದ್ದರು.