ಗಾಲೆ: ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಆಲ್ರೌಂಡರ್ ಧನಂಜಯ ಡಿ ಸಿಲ್ವಾ (Dhananjaya de Silva) ವಿಚಿತ್ರವಾಗಿ ಔಟಾಗುವ ಮೂಲಕ ನಗೆಪಾಟಲಿಗೆ ಪಾತ್ರರಾಗಿದ್ದಾರೆ.
ಮೊದಲ ಟೆಸ್ಟ್ ಎರಡನೇ ದಿನ ಧನಂಜಯ ಡಿ ಸಿಲ್ವಾ ದಿನದ 5ನೇ ಓವರ್ನಲ್ಲಿ ಹಿಟ್ ವಿಕೆಟ್ (Hit wicket) ಆದರು. ಶನ್ನಾನ್ ಗೇಬ್ರಿಯಲ್ ಎಸೆದ 95ನೇ ಓವರ್ನ 4ನೇ ಎಸೆತದಲ್ಲಿ ಚೆಂಡು ಬ್ಯಾಟ್ ತಾಗಿ ನೆಲಕ್ಕೆ ಬಡಿದು ಚಿಮ್ಮಿತು. ಆ ಚೆಂಡು ವಿಕೆಟ್ಗೆ ತಗುಲಬಹುದೆಂದು ತಡೆಯುವ ಬರದಲ್ಲಿ ಸ್ವತಃ ಬ್ಯಾಟ್ನಿಂದಲೇ ಸ್ಟಂಪ್ಗಳಿಗೆ ಅಪ್ಪಳಿಸಿದರು. ತಮ್ಮ ಈ ಆತುರದ ನಿರ್ಧಾರದಿಂದ ವಿಕೆಟ್ ಒಪ್ಪಿಸಿದ್ದಕ್ಕೆ ನಾಚಿಕೆಯಿಂದ ಮುಖ ಮುಚ್ಚಿಕೊಂಡು ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಸಿಲ್ವಾ ಔಟಾಗುವ ಮುನ್ನ ನಾಯಕ ಕರುಣರತ್ನೆ (145) ಜೊತೆಗೆ 4ನೇ ವಿಕೆಟ್ಗೆ 121 ರನ್ಗಳ ಜೊತೆಯಾಟ ನಡೆಸಿದ್ದರು. 95 ಎಸೆತಗಳನ್ನೆದುರಿಸಿದ್ದ ಅವರು 61 ರನ್ಗಳಿಸಿ ತಮ್ಮದೇ ಎಡವಟ್ಟಿನಿಂದ ಎದುರಾಳಿಗೆ ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದರು.
-
In the Sri Lanka v West Indies Test match, Dhananjaya de Silva was dismissed hit wicket. The Cricinfo description is one thing. The vision is even better. #SLvWI pic.twitter.com/PIFmBV3UUH
— Andrew Donnison (@Donno79) November 22, 2021 " class="align-text-top noRightClick twitterSection" data="
">In the Sri Lanka v West Indies Test match, Dhananjaya de Silva was dismissed hit wicket. The Cricinfo description is one thing. The vision is even better. #SLvWI pic.twitter.com/PIFmBV3UUH
— Andrew Donnison (@Donno79) November 22, 2021In the Sri Lanka v West Indies Test match, Dhananjaya de Silva was dismissed hit wicket. The Cricinfo description is one thing. The vision is even better. #SLvWI pic.twitter.com/PIFmBV3UUH
— Andrew Donnison (@Donno79) November 22, 2021
ಆದರೂ ಶ್ರೀಲಂಕಾ 133.5 ಓವರ್ಗಳಲ್ಲಿ 386 ರನ್ಗಳಿಸಿ ಆಲೌಟ್ ಆಯಿತು. ಪತುಮ್ ನಿಸಾಂಕ 56, ಕರುಣರತ್ನೆ 147, ಡಿ ಸಿಲ್ವಾ 61, ಚಂಡಿಮಾಲ್ 45 ರನ್ಗಳಿಸಿದರು.
ವಿಂಡೀಸ್ ಪರ ರಾಸ್ಟನ್ ಚೇಸ್ 83ಕ್ಕೆ 5, ಜೊಮೆಲ್ ವಾರಿಕಾನ್ 87ಕ್ಕೆ 3 ವಿಕೆಟ್ ಪಡೆದು ಮಿಂಚಿದರು.
386 ರನ್ಗಳನ್ನು ಹಿಂಬಾಲಿಸುತ್ತಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 6 ವಿಕೆಟ್ ಕಳೆದುಕೊಂಡು 2ನೇ ದಿನದಂತ್ಯಕ್ಕೆ 113 ರನ್ಗಳಿಸಿದೆ. ನಾಯಕ ಕ್ರೈಗ್ ಬ್ರಾತ್ವೇಟ್ 46 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪ್ರಸ್ತುತ ಕೈಲ್ ಮೇಯರ್ ಅಜೇಯ 22, ಹೋಲ್ಡ್ ಅಜೇಯ 1 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ರಮೇಶ್ ಮೆಂಡಿಸ್ 23 ರನ್ ನೀಡಿ 3 ವಿಕೆಟ್ ಪಡೆದರೆ, ಪ್ರವೀಣ್ ಜಯವಿಕ್ರಮ 25 ರನ್ ನೀಡಿದ 2 ವಿಕೆಟ್ ಪಡೆದು ಲಂಕಾಗೆ ಮುನ್ನಡೆ ಒದಗಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಆರಂಭಿಕ ಸ್ಥಾನದಿಂದ ಶುಬ್ಮನ್ ಗಿಲ್ಗೆ ಹಿಂಬಡ್ತಿ, ಹೊಸ ಜವಾಬ್ದಾರಿ ನೀಡಿದ ಮ್ಯಾನೇಜ್ಮೆಂಟ್