ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಹೊನಲು ಬೆಳಕಿನ ಪಂದ್ಯದ ಮೊದಲ ದಿನ ಎರಡೂ ಕಡೆಯ ಬೌಲರ್ಗಳು ಮೇಲುಗೈ ಸಾಧಿಸಿದ್ದು, ಮೊದಲ ದಿನವೇ ಬರೋಬ್ಬರಿ 16 ವಿಕೆಟ್ಗಳು ಪತನಗೊಂಡಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 59.1 ಓವರ್ಗಳಲ್ಲಿ 252 ರನ್ಗಳಿಸಿ ತನ್ನಲ್ಲೇ ವಿಕೆಟ್ ಕಳೆದುಕೊಂಡಿತು. ಭಾರತದ ಶ್ರೇಯಸ್ ಅಯ್ಯರ್(98 ಎಸೆತಗಳಲ್ಲಿ 92 ರನ್) ಏಕೈಕ ಅರ್ಧಶತಕ ದಾಖಲಿಸಿದರು. ರಿಷಂತ್ ಪಂತ್ 39, ಹನುಮ ವಿಹಾರಿ 31 ಮತ್ತು ಕೊಹ್ಲಿ 23 ರನ್ಗಳಿಸಿದರು.
ಆರಂಭಿಕ ಮಯಾಂಕ್ ಅಗರ್ವಾಲ್(4), 400ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಾಯಕ ರೋಹಿತ್ ಶರ್ಮಾ ಕೇವಲ 15 ರನ್ಗಳಿಸಿದರೆ,ಕಳೆದ ಪಂದ್ಯದ ಹೀರೋಗಳಾದ ಜಡೇಜಾ(4) ಮತ್ತು ರವಿಚಂದ್ರನ್ ಅಶ್ವಿನ್(13) ಇಂದು ವೈಫಲ್ಯ ಅನುಭವಿಸಿದರು.
-
That's STUMPS on Day 1 of the 2nd Test.
— BCCI (@BCCI) March 12, 2022 " class="align-text-top noRightClick twitterSection" data="
Sri Lanka 86/6, trail #TeamIndia (252) by 166 runs.
Scorecard - https://t.co/t74OLq7xoO #INDvSL @Paytm pic.twitter.com/Xehkffunwn
">That's STUMPS on Day 1 of the 2nd Test.
— BCCI (@BCCI) March 12, 2022
Sri Lanka 86/6, trail #TeamIndia (252) by 166 runs.
Scorecard - https://t.co/t74OLq7xoO #INDvSL @Paytm pic.twitter.com/XehkffunwnThat's STUMPS on Day 1 of the 2nd Test.
— BCCI (@BCCI) March 12, 2022
Sri Lanka 86/6, trail #TeamIndia (252) by 166 runs.
Scorecard - https://t.co/t74OLq7xoO #INDvSL @Paytm pic.twitter.com/Xehkffunwn
ಭಾರತದ 252 ರನ್ಗಳನ್ನು ಹಿಂಬಾಲಿಸಿದ ಶ್ರೀಲಂಕಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 86ರನ್ಗಳಿಸುವಷ್ಟರಲ್ಲಿ ತನ್ನ 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಕುಸಾಲ್ ಮೆಂಡಿಸ್(2), ಲಹಿರು ತಿರುಮನ್ನೆ(5) ಮತ್ತು ಎಂಜೆಯೋ ಮ್ಯಾಥ್ಯೂಸ್(43) ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಶಮಿ ಲಂಕಾ ನಾಯಕ ಕರುಣರತ್ನೆ(4) ಮತ್ತು ಧನಂಜಯ ಡಿ ಸಿಲ್ವಾ(10) ರನ್ನು ಪೆವಿಲಿಯನ್ಗಟ್ಟಿದರು. ಉತ್ತಮ ಲಯದಲ್ಲಿರುವ ಚರಿತ್ ಅಸಲಂಕಾ (10) ವಿಕೆಟ್ ಆಲ್ರೌಂಡರ್ ಅಕ್ಷರ್ ಪಟೇಲ್ ವಿಕೆಟ್ ಪಡೆದುಕೊಂಡರು.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಹರ್ನಿಶಿ ಪಂದ್ಯ ನಡೆಯುತ್ತಿದ್ದು, ಮೊದಲ ದಿನವೇ 16 ವಿಕೆಟ್ಗಳು ಉರುಳಿರುವುದರಿಂದ ಪಂದ್ಯ ಬಹುತೇಕ 3 ದಿನಗಳಲ್ಲೇ ಮುಗಿಯುವ ಸಾಧ್ಯತೆ ಎದ್ದು ಕಾಣುತ್ತಿದೆ.
ಇದನ್ನೂ ಓದಿ:ತಮಗೆ ಸಿಕ್ಕಿದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೌರ್ ಜೊತೆ ಹಂಚಿಕೊಂಡ ಸ್ಮೃತಿ ಮಂಧಾನ