ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಕೆ.ಎಲ್.ರಾಹುಲ್ ಅವರ ಸೊಗಸಾದ ಶತಕದಾಟದ ನೆರವಿನಿಂದ ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 245 ರನ್ ಕಲೆಹಾಕಿತು. ಕಗಿಸೊ ರಬಾಡ 5 ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಬಲವನ್ನು ಕಾಡಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಮೊದಲನೇ ದಿನ ರೋಹಿತ್ ಶರ್ಮಾ (5), ಯಶಸ್ವಿ ಜೈಸ್ವಾಲ್ (17) ಮತ್ತು ಶುಭಮನ್ ಗಿಲ್ (2) ಅವರ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡಿತು. ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ (38) ಮತ್ತು ಶ್ರೇಯಸ್ ಅಯ್ಯರ್ (31) ಬವುಮಾ ಪಡೆಯ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ಜೊತೆಯಾಟ ಕಟ್ಟಿದರು. ಆದರೆ ಹೆಚ್ಚು ಹೊತ್ತು ಇವರ ಆಟ ನಡೆಯಲಿಲ್ಲ. ಕೆಳ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ (8), ಶಾರ್ದೂಲ್ ಠಾಕೂರ್ (24) ಮತ್ತು ಜಸ್ಪ್ರೀತ್ ಬುಮ್ರಾ (1) ತಂಡಕ್ಕೆ ದೊಡ್ಡ ಕೊಡುಗೆ ನೀಡಲಿಲ್ಲ. ಮೊದಲ ದಿನದಾಟದಂತ್ಯಕ್ಕೆ ಭಾರತ 208ಕ್ಕೆ 8 ವಿಕೆಟ್ ಕಳೆದುಕೊಂಡಿತ್ತು. ರಾಹುಲ್, ಸಿರಾಜ್ ಕ್ರೀಸ್ನಲ್ಲಿದ್ದರು.
-
India put on a competitive total on board, courtesy of another KL Rahul special in Centurion 👏
— ICC (@ICC) December 27, 2023 " class="align-text-top noRightClick twitterSection" data="
📝 #SAvIND: https://t.co/REqMWoHhqd | #WTC25 pic.twitter.com/yJg743v9EW
">India put on a competitive total on board, courtesy of another KL Rahul special in Centurion 👏
— ICC (@ICC) December 27, 2023
📝 #SAvIND: https://t.co/REqMWoHhqd | #WTC25 pic.twitter.com/yJg743v9EWIndia put on a competitive total on board, courtesy of another KL Rahul special in Centurion 👏
— ICC (@ICC) December 27, 2023
📝 #SAvIND: https://t.co/REqMWoHhqd | #WTC25 pic.twitter.com/yJg743v9EW
ರಾಹುಲ್ ಶತಕದಾಟ: ಕೆ.ಎಲ್.ರಾಹುಲ್ 2021ರ ಪ್ರವಾಸದಲ್ಲಿ ಇದೇ ಮೈದಾನದಲ್ಲಿ ಶತಕ ದಾಖಲಿಸಿ ತಂಡಕ್ಕೆ ನೆರವಾಗಿದ್ದರು. 2023ರ ಪ್ರವಾಸದಲ್ಲೂ ಇದೇ ರೀತಿಯ ಪ್ರದರ್ಶನ ಅವರ ಬ್ಯಾಟಿಂಗ್ನಲ್ಲಿ ಮೂಡಿಬಂತು. ಮೊದಲ ದಿನದಾಟದ ಅಂತ್ಯದ ವೇಳೆಗೆ ಅವರು 70 ರನ್ ಕಲೆಹಾಕಿದ್ದರು. ಎರಡನೇ ದಿನದ ಪಂದ್ಯ ಆರಂಭವಾಗುತ್ತಿದ್ದಂತೆ ಅದೇ ಲಯ ಮುಂದುವರೆಸಿ, ಟೆಸ್ಟ್ ಕ್ರಿಕೆಟ್ನ 8ನೇ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕಾ ಸೆಂಚುರಿಯನ್ನಲ್ಲಿ ಇದು ಅವರ ಎರಡನೇ ಶತಕವಾಗಿದೆ. ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ಎರಡು ಶತಕ ಗಳಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಖ್ಯಾತಿಗೂ ರಾಹುಲ್ ಪಾತ್ರರಾಗಿದ್ದಾರೆ.
ರಾಹುಲ್ ಶತಕದ ಇನ್ನಿಂಗ್ಸ್ ಸಹಾಯದಿಂದ ಭಾರತ 67.4 ಓವರ್ಗೆ 245 ರನ್ ಗಳಿಸಿ ಆಲೌಟಾಯಿತು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 5, ನಾಂದ್ರೆ ಬರ್ಗರ್ 3 ಮತ್ತು ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ದ.ಆಫ್ರಿಕಾ ಪರಿಸ್ಥಿತಿಯಲ್ಲಿ ಸರಣಿ ಗೆಲ್ಲಲು ಸ್ವಲ್ಪ ಅದೃಷ್ಟ ಬಲ ಬೇಕು: ದ್ರಾವಿಡ್