ETV Bharat / sports

Smriti Mandhana: ಕಾಮನ್‌ವೆಲ್ತ್‌, ಏಷ್ಯಾಕಪ್, ಏಷ್ಯನ್​ ಗೇಮ್ಸ್​ ಪಂದ್ಯಗಳಲ್ಲಿ ​ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್​..

ಭಾರತದ ವನಿತೆಯರ ತಂಡದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಕಾಮನ್‌ವೆಲ್ತ್‌, ಏಷ್ಯಾಕಪ್ ಮತ್ತು ಏಷ್ಯನ್​ ಗೇಮ್ಸ್​ನ ಪ್ರಮುಖ ಪಂದ್ಯದಲ್ಲಿ ತಂಡಕ್ಕೆ ನೆರವಾಗುವ ಪ್ರದರ್ಶನ ನೀಡಿದ್ದಾರೆ.

Smriti Mandhana
Smriti Mandhana
author img

By ETV Bharat Karnataka Team

Published : Sep 25, 2023, 7:49 PM IST

ನವದೆಹಲಿ: ಭಾರತದ ವನಿತೆಯರ ತಂಡ ಸತತ ಉತ್ತಮ ಸಾಧನೆ ಮಾಡುತ್ತಾ ಬರುತ್ತಿದೆ. ಏಷ್ಯಾಕಪ್ 2022 ಚಾಂಪಿಯನ್​. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ರನ್ನರ್​ ಅಪ್​ ಆಗಿದ್ದ ತಂಡ ಈಗ ಏಷ್ಯನ್​ ಗೇಮ್ಸ್​ 2023ರಲ್ಲಿ ಚಿನ್ನದ ಪದಕ ಗೆದ್ದು ಚಾಂಪಿಯನ್​ ಆಗಿದೆ. 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ವನಿತೆಯರು ಗೆದ್ದುಕೊಟ್ಟಿದ್ದಾರೆ.

ಈ ಎಲ್ಲಾ ಪ್ರಮುಖ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಮೃತಿ ಮಂಧಾನ ಅವರನ್ನು ವನಿತೆಯರ ಕ್ರಿಕೆಟ್​ ತಂಡದಲ್ಲಿ ವಿರಾಟ್​ ಕೊಹ್ಲಿ ಎಂಬಂತೆ ಬಿಂಬಿಸಲಾಗುತ್ತದೆ. ಚೇಸಿಂಗ್​ ವೇಳೆ ಉತ್ತಮ ಪ್ರದರ್ಶನ ನೀಡಿರುವುದು ಅವರನ್ನು ಹೀಗೆ ಕರೆಯಲು ಕಾರಣವಾಗಿತ್ತು. ಅಲ್ಲದೇ ಅವರು ತಮ್ಮ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಪಡೆದಿದ್ದಾರೆ.

ಅಂತಿಮ ಹಂತದ ಪಂದ್ಯಗಳಲ್ಲಿ ಭಾರತಕ್ಕೆ ಯಾವಾಗಲೂ ಮಂಧಾನ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಅವರು ದೊಡ್ಡ ಸಂದರ್ಭಗಳಲ್ಲಿ ತಂಡಕ್ಕೆ ಟ್ರಬಲ್‌ಶೂಟರ್ ಆಗಿ ಕೆಲಸ ಮಾಡುತ್ತಾರೆ. ಆರಂಭಿಕ ಬ್ಯಾಟರ್​ ಆಗಿ ಮಂಧಾನ ತಂಡಕ್ಕೆ ರನ್​ನ ಕೊಡುಗೆಗಳನ್ನು ನೀಡುವುದಲ್ಲದೇ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ, ಮಂಧಾನ ತಂಡವನ್ನು ಅದ್ಭುತವಾಗಿ ಮುನ್ನಡೆಸಿ ಫೈನಲ್‌ಗೆ ಕೊಂಡೊಯ್ದರು. ಅಲ್ಲದೇ ಏಷ್ಯನ್ ಗೇಮ್ಸ್ 2023ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 46 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

  • Smriti Mandhana:

    46 (45) - Asian Games Final 2023.

    51* (25) - Asia Cup Final 2022.

    61 (32) - Commonwealth Games Semi-Final 2022. pic.twitter.com/Acm6tpweWx

    — Mufaddal Vohra (@mufaddal_vohra) September 25, 2023 " class="align-text-top noRightClick twitterSection" data=" ">

ಪ್ರಮುಖ ಪಂದ್ಯದಲ್ಲಿ ಅದ್ಭುತ ಪ್ರದರ್ಶನ: ಈ ಅತ್ಯುತ್ತಮ ಇನ್ನಿಂಗ್ಸ್‌ನೊಂದಿಗೆ, ಮಂಧಾನ ಫೈನಲ್​ ಪಂದ್ಯಗಳಲ್ಲಿ ಅದ್ಭುತವಾಗಿ ಆಡಿದ್ದಾರೆ. ಅವರು ಕಾಮನ್‌ವೆಲ್ತ್ ಗೇಮ್ಸ್ 2022ರ ಸೆಮಿಫೈನಲ್ಸ್​ನಲ್ಲಿ ಭಾರತ ಸಂಕಷ್ಟದಲ್ಲಿದ್ದಾಗ ಇಂಗ್ಲೆಂಡ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಮಂಧಾನ 32 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಇದರ ನಂತರ, ಏಷ್ಯಾಕಪ್ 2022ರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 25 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 51 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದ್ದರು.

  • •Team India won Silver Medal in CWG 2022.

    •Team India won Gold Medal in Asian Games 2023.

    - The Domination of Team India...!!!🇮🇳 pic.twitter.com/IO1gmZhP53

    — CricketMAN2 (@ImTanujSingh) September 25, 2023 " class="align-text-top noRightClick twitterSection" data=" ">

ಇದೀಗ ಸ್ಮೃತಿ ಮತ್ತೊಮ್ಮೆ 2023ರ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮಂಧಾನ ಅವರ ಸ್ಟ್ರೈಕ್ ರೇಟ್ 102.22 ಆಗಿತ್ತು. ಅವರ ಈ ಮೂರು ಅತ್ಯುತ್ತಮ ಇನ್ನಿಂಗ್ಸ್‌ಗಳು ಪ್ರಮುಖ ಪಂದ್ಯಗಳಲ್ಲಿ ಭಾರತಕ್ಕೆ ಮಂಧಾನ ಬ್ಯಾಟಿಂಗ್​ನಿಂದ ನೆರವಾಗುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಏಷ್ಯನ್ ಗೇಮ್ಸ್ 2023 ರ ಫೈನಲ್‌ನಲ್ಲಿ ಭಾರತ ನೀಡಿದ 117 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 97 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ 19 ರನ್‌ಗಳಿಂದ ಚಿನ್ನದ ಪದಕವನ್ನು ಕಳೆದುಕೊಂಡಿತು.

ಇದನ್ನೂ ಓದಿ: Asian Games Womens T20I 2023: ಫೈನಲ್​ನಲ್ಲಿ ಮಿಂಚಿದ ಭಾರತದ ವನಿತೆಯರು.. ಶ್ರೀಲಂಕಾ ಮಣಿಸಿ ಚಿನ್ನಕ್ಕೆ ಮುತ್ತಿಟ್ಟ ನಾರಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.