ಹ್ಯಾಮಿಲ್ಟನ್, ನ್ಯೂಜಿಲೆಂಡ್ : ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಶತಕ ಬಾರಿಸಿದ್ದಾರೆ. ಶತಕ ಪೂರೈಸಿ ಆಡುತ್ತಿದ್ದ ಭರವಸೆಯ ಆಟಗಾರ್ತಿ ಮಂದಾನ 123 ರನ್ಗಳನ್ನು ಕಲೆ ಹಾಕಿ ಪೆವಿಲಿಯನ್ ಸೇರಿದ್ದಾರೆ.
-
Smriti Mandhana's outstanding innings has set India up for a big total against West Indies 🙌#CWC22 pic.twitter.com/XuvyJBdH62
— ICC (@ICC) March 12, 2022 " class="align-text-top noRightClick twitterSection" data="
">Smriti Mandhana's outstanding innings has set India up for a big total against West Indies 🙌#CWC22 pic.twitter.com/XuvyJBdH62
— ICC (@ICC) March 12, 2022Smriti Mandhana's outstanding innings has set India up for a big total against West Indies 🙌#CWC22 pic.twitter.com/XuvyJBdH62
— ICC (@ICC) March 12, 2022
ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ 108 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಇದು ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಐದನೇ ಶತಕವಾಗಿದೆ.
ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಸ್ಮೃತಿ ಮಂಧಾನ ಎರಡನೇ ಬಾರಿಗೆ ವೆಸ್ಟ್ವಿಂಡೀಸ್ ವಿರುದ್ಧವೇ ಶತಕ ಸಿಡಿಸಿದ್ದಾರೆ. ಇನ್ನು ಮಂಧಾನ ಔಟಾದಾಗ ಭಾರತ ಮಹಿಳಾ ತಂಡ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 262 ರನ್ಗಳನ್ನು ಕಲೆ ಹಾಕಿತ್ತು.
ಓದಿ: ಸೋಮನಾಥ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ, ಮೂಲಸೌಕರ್ಯಗಳ ಕುರಿತು ಚರ್ಚೆ
2017ರ ವಿಶ್ವಕಪ್‌ನಲ್ಲಿ ಇದೇ ವೆಸ್ಟ್ಇಂಡೀಸ್ ಶತಕ ಸಿಡಿಸಿ ಮಿಂಚಿದ್ದರು. ನ್ಯೂಜಿಲೆಂಡ್‌ನಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2022ರಲ್ಲಿ ಇದು ಭಾರತದಿಂದ ಮೊದಲ ಶತಕವಾಗಿದೆ. 2013ರಲ್ಲಿ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ಗೆ ಕಾಲಿರಿಸಿದ್ದ ಮಂಧಾನ 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೂ ಕಾಲಿರಿಸಿದ್ದರು. ಇದಾದ ಬಳಿಕ ಕೆಲವೇ ವರ್ಷಗಳಲ್ಲಿ ಮೈದಾನದ ಒಳಗೂ ಹೊರಗೂ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡರು.
2019ರಲ್ಲಿ ಭಾರತ ಟಿ20 ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಂಡ ಮಹಿಳಾ ಆಟಗಾರ್ತಿ ಎನಿಸಿಕೊಂಡರು. ಇವರ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಐಸಿಸಿ 2021-22ನೇ ಸಾಲಿನ ವರ್ಷದ ಮಹಿಳಾ ಆಟಗಾರ್ತಿ ಎಂಬ ಗೌರವ ನೀಡಿತ್ತು. ಈಗ ಮಂಧಾನ 5 ಶತಕಗಳನ್ನು ಪೂರೈಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.