ETV Bharat / sports

ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 152ಕ್ಕೆ ನಿಯಂತ್ರಿಸಿದ ಭಾರತದ ಬೌಲರ್ಸ್

author img

By

Published : Oct 20, 2021, 5:29 PM IST

ಸ್ಟೀವ್​ ಸ್ಮಿತ್​ 57, ಸ್ಟೋಯ್ನಿಸ್​ ಅವರ ಅಜೇಯ 41 ರನ್​ಗಳ ನೆರವಿನಿಂದ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯದಲ್ಲಿ 152 ರನ್ ​ಗಳಿಸಿದೆ.

ICC Mens T20 World Cup
ಭಾರತ vs ಆಸ್ಟ್ರೇಲಿಯಾ

ದುಬೈ: ಟಿ20 ವಿಶ್ವಕಪ್​ ಸಿದ್ಧತೆಗಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್​ ಮತ್ತು ಸ್ಟೋಯ್ನಿಸ್​ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತಕ್ಕೆ 153 ರನ್​ಗಳ ಸಾಧಾರಣ ಗುರಿ ನೀಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 2ನೇ ಓವರ್​ನಲ್ಲೇ ಡೇವಿಡ್ ವಾರ್ನರ್(1)​ ಮತ್ತು ಮಿಚೆಲ್ ಮಾರ್ಷ್​(0) ವಿಕೆಟ್ ಕಳೆದುಕೊಂಡಿತು. ಅಶ್ವಿನ್​ ಈ ಇಬ್ಬರನ್ನು ಪೆವಿಲಿಯನ್​ಗಟ್ಟಿದರೆ, ನಾಯಕ ಫಿಂಚ್​ 8 ರನ್​ಗಳಿಸಿ ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಕೇವಲ 11 ರನ್​ಗಳಾಗುವಷ್ಟರಲ್ಲಿ 3 ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಆಸೀಸ್​ಗೆ ಮ್ಯಾಕ್ಸ್​ವೆಲ್​ ಮತ್ತು ಸ್ಮಿತ್​ ಜೊತೆಯಾಟ ಚೇತರಿಕೆ ನೀಡಿತು. ಇವರಿಬ್ಬರು 4ನೇ ವಿಕೆಟ್​ಗೆ 61 ರನ್​ ಸೇರಿಸಿದರು. 12ನೇ ಓವರ್​ನಲ್ಲಿ ರಾಹುಲ್​ ಚಹರ್ ಬೌಲಿಂಗ್​ನಲ್ಲಿ ಬೌಲ್ಡ್ ಆದ ಮ್ಯಾಕ್ಸ್​ವೆಲ್ 28 ಎಸೆತಗಳಲ್ಲಿ 5 ಬೌಂಡರಿ ಸಹಿತ 37 ರನ್​ಗಳಿಸಿದ್ದರು.

ನಂತರ ಸ್ಮಿತ್ ಜೊತೆಗೂಡಿದ ಸ್ಟೋಯ್ನಿಸ್ ಸ್ಫೋಟಕ ಬ್ಯಾಟಿಂಗ್ ಮೂಲಕ​ ರನ್​ ಗತಿ ಹೆಚ್ಚಿಸಿದರು. ಅವರು 25 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 41 ರನ್​ಗಳಿಸಿದರೆ, ಸ್ಮಿತ್​ 48 ಎಸೆತಗಳಲ್ಲಿ 7 ಬೌಂಡರಿ ಸಹಿತ 57 ರನ್​ಗಳಿಸಿ ಕೊನೆಯ ಓವರ್​ನಲ್ಲಿ ಭುವನೇಶ್ವರ್​ಗೆ ವಿಕೆಟ್​ ಒಪ್ಪಿಸಿದರು.

ಭಾರತದ ಪರ ಆರ್ ಅಶ್ವಿನ್ 2 ಓವರ್​ಗಳಲ್ಲಿ 8 ರನ್​ ನೀಡಿ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 27ಕ್ಕೆ1, ಜಡೇಜಾ 35ಕ್ಕೆ 1 ಮತ್ತು ರಾಹುಲ್ ಚಹರ್​ 17ಕ್ಕೆ1 ವಿಕೆಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.