ETV Bharat / sports

SL vs PAK Test: ಪಾಕ್​ ವಿರುದ್ಧ 246ರನ್​​ಗಳ ಜಯ ಸಾಧಿಸಿದ ಲಂಕಾ

author img

By

Published : Jul 28, 2022, 3:46 PM IST

ಗಾಲೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ಆತಿಥೇಯ ಲಂಕಾ ತಂಡ ಭರ್ಜರಿ 246ರನ್​​ಗಳ ಅಂತರದ ಗೆಲುವು ದಾಖಲು ಮಾಡಿದೆ.

SL vs PAK Test
SL vs PAK Test

ಗಾಲೆ(ಶ್ರೀಲಂಕಾ): ಪ್ರವಾಸಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲು ಕಂಡಿದ್ದ ಶ್ರೀಲಂಕಾ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದು, 246ರನ್​​ ಅಂತರದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದರ ಜೊತೆಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಸಿಂಹಳೀಯರ ತಂಡ ಲಗ್ಗೆ ಹಾಕಿದೆ.

ಶ್ರೀಲಂಕಾದ ಗಾಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಶ್ರೀಲಂಕಾ 378ರನ್​​​ಗಳ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕ್​ ಕೇವಲ 231ರನ್​​ಗಳಿಗೆ ಆಲೌಟ್​ ಆಗಿತ್ತು. 147ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆತಿಥೇಯ ಲಂಕಾ ಪಡೆ ಎರಡನೇ ಇನ್ನಿಂಗ್ಸ್​​ನಲ್ಲಿ 360ರನ್​​ಗಳಿಕೆ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ ಪಾಕ್​ಗೆ 508ರನ್​​ಗಳ ಗೆಲುವಿನ ಗುರಿ ನೀಡಿತ್ತು.

508ರನ್​​ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕ್​ ತಂಡ ಲಂಕಾ ಬೌಲಿಂಗ್ ದಾಳಿಗೆ ಸಂಪೂರ್ಣ ತತ್ತರಿಸಿ ಹೋಯಿತು. 261ರನ್​​ಗಳಿಕೆ ಮಾಡುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು, 246ರನ್​ಗಳ ಸೋಲು ಕಂಡಿತು.ಸ್ಪಿನ್ನರ್ ಜಯಸೂರ್ಯ ಹಾಗೂ ರಮೇಶ್ ಮೆಂಡಿಸ್ ಬೌಲಿಂಗ್​ ಎದುರು ಪಾಕ್ ಬ್ಯಾಟರ್​​ಗಳು ಮಕಾಡೆ ಮಲಗಿದರು.

ಈ ಸೋಲಿನೊಂದಿಗೆ ಪಾಕಿಸ್ತಾನ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ವರ್ಷ ನಡೆಯಲಿರುವ ಫೈನಲ್​ ಪಂದ್ಯಕ್ಕೆ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಮತ್ತಷ್ಟು ಕಷ್ಟವಾಗಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪಾಕ್​ ಭರ್ಜರಿ ಗೆಲುವು ದಾಖಲು ಮಾಡಿ 3ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಆದರೆ, ಎರಡನೇ ಟೆಸ್ಟ್​​ ಪಂದ್ಯದಲ್ಲಿ ಸೋತು ಇದೀಗ 5ನೇ ಸ್ಥಾನಕ್ಕೆ ಕುಸಿತಗೊಂಡಿದೆ.

SL vs PAK Test
ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಲಂಕಾ ಲಗ್ಗೆ

ಇದನ್ನೂ ಓದಿರಿ: ವೆಸ್ಟ್​ ಇಂಡೀಸ್​ ವಿರುದ್ಧ ಕ್ಲೀನ್​ ಸ್ವೀಪ್ ಸಾಧನೆ.. ಏಕದಿನ ರ್‍ಯಾಂಕಿಂಗ್‌ ಭಾರತಕ್ಕೆ 3ನೇ ಸ್ಥಾನ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ ಪಾಯಿಂಟ್​ ಪಟ್ಟಿ

1. ದಕ್ಷಿಣ ಆಫ್ರಿಕಾ - 71.43 ಪಾಯಿಂಟ್​​

2. ಆಸ್ಟ್ರೇಲಿಯಾ - 70 ಪಾಯಿಂಟ್​

3. ಶ್ರೀಲಂಕಾ - 53.33 ಪಾಯಿಂಟ್​

4. ಭಾರತ - 52.08 ಪಾಯಿಂಟ್​

5. ಪಾಕಿಸ್ತಾನ - 51.85 ಪಾಯಿಂಟ್​

6. ವೆಸ್ಟ್ ಇಂಡೀಸ್ - 50 ಪಾಯಿಂಟ್​

7. ಇಂಗ್ಲೆಂಡ್ - 33.33 ಪಾಯಿಂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.