ಬಾರ್ಬಡೊಸ್: ನಾಯಕ ಮೊಯೀನ್ ಅಲಿ ಅವರ ಆಲ್ರೌಂಡರ್ ಆಟದ ನೆರವಿನಿಂದ ಇಂಗ್ಲೆಂಡ್ ತಂಡ 4ನೇ ಟಿ20 ಪಂದ್ಯವನ್ನು 34 ರನ್ಗಳ ಅಂತರದಿಂದ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು, ಟಿ20 ಸರಣಿಯನ್ನು 2-2ರಲ್ಲಿ ಸಮಬಲ ಸಾಧಿಸಿದೆ.
5 ಪಂದ್ಯಗಳ ಸರಣಿಯನ್ನು ಉಳಿಸಿಕೊಳ್ಳಬೇಕಾಗಿದ್ದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಜೇಸನ್ ರಾಯ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಬೌಂಡರಿಗಳ ನೆರವಿನಿಂದ 52 ರನ್ಗಳಿಸಿದರೆ, ಜೇಮ್ಸ್ ವಿನ್ಸ್ 26 ಎಸೆತಗಳಲ್ಲಿ 34, ಮೊಲೀನ್ ಅಲಿ 18ನೇ ಓವರ್ನಲ್ಲಿ 28 ರನ್ ಸೇರಿದಂತೆ ಕೇವಲ 28 ಎಸೆತಗಳಲ್ಲಿ ಒಂದು ಬೌಂಡರಿ 7 ಸಿಕ್ಸರ್ಗಳ ಸಹಿತ 63 ರನ್ಗಳಿಸಿದರು.
ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 44 ರನ್ ನೀಡಿ 3 ವಿಕೆಟ್ ಪಡೆದರೆ, ಅಕೀಲ್ ಹೊಸೈನ್ 23ಕ್ಕೆ 1, ಪೊಲಾರ್ಡ್ 23ಕ್ಕೆ 1 ಶೆಫರ್ಡ್ 40ಕ್ಕೆ 1 ವಿಕೆಟ್ ಪಡೆದರು.
ಇನ್ನು 194 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಪವರ್ ಪ್ಲೇನಲ್ಲಿ ಕೈಲ್ ಮೇಯರ್ಸ್(40) ಅಬ್ಬರದಿಂದ 7 ಓವರ್ಗಳಲ್ಲಿ 64 ರನ್ಗಳನ್ನು ಸೇರಿಸಿತ್ತು. ಆದರೆ ಮೊಯೀನ್ ಅಲಿ ಆರಂಭಿಕರ ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಅವರು 23 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ನೆರವಿನಿಂದ 40 ರನ್ಗಳಿಸಿದ್ದ ಮೇಯರ್ಸ್ ಮತ್ತು ತಮ್ಮ ಕೊನೆಯ ಓವರ್ನಲ್ಲಿ 27 ಎಸೆತಗಳಲ್ಲಿ 26 ರನ್ಗಳಿಸಿ ಪರದಾಡುತ್ತಿದ್ದ ಬ್ರೆಂಡನ್ ಕಿಂಗ್ರನ್ನು ಕೂಡ ಪೆವಿಲಿಯನ್ಗಟ್ಟಿದರು.ಮೊದಲ 6 ಓವರ್ನಲ್ಲಿ ಅಬ್ಬರಿಸಿದ್ದ ವಿಂಡೀಸ್ ನಂತರ 6 ಓವರ್ಗಳಲ್ಲಿ ಒಂದು ಬೌಂಡರಿ ಸಿಡಿಸಲಾಗದೆ ಪರದಾಡಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರಂಭಿಕರ ಪತನದ ನಂತರ ಬಂದ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೊವ್ಮನ್ ಪೊವೆಲ್ 6 ಎಸೆತಗಳಲ್ಲಿ 5 ರನ್ಗಳಿಸಿ ರಶೀದ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ನಿರಂತರ ವಿಕೆಟ್ ಕಳೆದುಕೊಳ್ಳುತ್ತಿದ್ದರಿಂದ ಒತ್ತಡಕಕ್ಕೊಳಗಾದ ಪೂರನ್(22) 13 ಎಸೆತಗಳಲ್ಲಿ 10 ರನ್ಗಳಿಸಿದ್ದ ಸಂದರ್ಭದಲ್ಲಿ ಲಿವಿಂಗ್ಸ್ಟೋನ್ ಓವರ್ನಲ್ಲಿ ಅನಿವಾರ್ಯವಾಗಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರಾದರೂ ನಂತರದ ಎಸೆತದಲ್ಲಿ ಔಟಾದರೆ, ಹೋಲ್ಡರ್ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 36 ರನ್ಗಳಿಸಿ ಟಾಪ್ಲೆಗೆ ವಿಕೆಟ್ ಒಪ್ಪಿಸಿದರು. ಪೊಲಾರ್ಡ್ 16 ಎಸೆತಗಳಲ್ಲಿ ಕೇವಲ 18 ಮತ್ತು ಡರೇನ್ ಬ್ರಾವೋ 8 ಎಸೆತಗಳಲ್ಲಿ 3 ರನ್ ಮಾತ್ರಗಳಿಸಿದರು. ಒಟ್ಟಾರೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ಗಳಿಸಿ ಸೋಲು ಕಂಡಿತು.
ರೀಸ್ ಟಾಪ್ಲೆ 21ಕ್ಕೆ 1, ಮೊಯೀನ್ ಅಲಿ 28ಕ್ಕೆ 2, ಆದಿಲ್ ರಶೀದ್ 28ಕ್ಕೆ1, ಲಿವಿಂಗ್ಸ್ಟೋನ್ 18ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸರಣಿಯನ್ನು ನಿಯಂತ್ರಿಸುವ ಕೊನೆಯ ಪಂದ್ಯ ಸೋಮವಾರ ನಡೆಯಲಿದೆ.
ಇದನ್ನೂ ಓದಿ:Under 19 World Cup: ಬಾಂಗ್ಲಾದೇಶ ಮಣಿಸಿ ಸೆಮೀಸ್ ತಲುಪಿದ ಯಶ್ ಪಡೆ