ನವದೆಹಲಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ವಿಚ್ಛೇದನದ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಟೆನ್ನಿಸ್ ತಾರೆ ಹಾಗೂ ಕ್ರಿಕೆಟ್ ಸ್ಟಾರ್ ನಡುವೆ ಅಧಿಕೃತವಾಗಿ ವಿಚ್ಛೇದನವಾಗಿದೆ, ಅವರಿಬ್ಬರು ಬೇರೆ ಬೇರೆಯಾಗಿದ್ದಾರೆ ಎನ್ನುವ ರೂಮರ್ ಹರಿದಾಡಿತ್ತು. ಆದರೆ ಈ ರೂಮರ್ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಯೊಂದು ಅವರ ವಿಚ್ಛೇದನದ ಬಗ್ಗೆ ಮತ್ತೆ ಗಮನ ಸೆಳೆದಿದೆ.
ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ದೊಡ್ಡ ಬದಲಾವಣೆಯೇ ಇದಕ್ಕೆ ಕಾರಣ. ಶೋಯೆಬ್ ಮಲಿಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಬಯೋದಿಂದ ಸಾನಿಯಾ ಮಿರ್ಜಾ ಅವರು ತಮ್ಮ ಪತ್ನಿ ಎಂಬ ಉಲ್ಲೇಖವನ್ನು ತೆಗೆದು ಹಾಕಿದ್ದಾರೆ. ಇದೇ ಬೆಳವಣಿಗೆ ಇಷ್ಟೆಲ್ಲ ಸುದ್ದಿಯಾಗಲು ಕಾರಣ. ಶೋಯೆಬ್ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ 'ಸಾನಿಯಾ ಮಿರ್ಜಾ ಅವರ ಪತಿ' ಎಂಬುದನ್ನು ಅಳಿಸಿ ಹಾಕಿದ್ದಾರೆ.
ಈ ಹಿಂದೆ, ಪಾಕಿಸ್ತಾನಿ ಕ್ರಿಕೆಟಿಗ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ 'ಸೂಪರ್ ಮಹಿಳೆ ಸಾನಿಯಾ ಮಿರ್ಜಾ ಅವರ ಪತಿ' ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಬಯೋವನ್ನು ಮಲಿಕ್ ಎಡಿಟ್ ಮಾಡಿದ್ದು, 'ಸಾನಿಯಾ ಮಿರ್ಜಾ ಪತಿ' ಎಂಬ ಮಾಹಿತಿ ಕಾಣೆಯಾಗಿದೆ. ಸಾನಿಯಾ ಹಾಗೂ ಶೋಯೆಬ್ ಶ್ರೀಘ್ರದಲ್ಲೇ ಬೇರೆ ಬೇರೆಯಾಗುತ್ತಾರೆ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಯಾಕೆಂದರೆ ಇತ್ತೀಚಿಗೆ ಬೇರೆ ಬೇರೆಯಾಗುವ, ವಿಚ್ಛೇದನ ಪಡೆದ ಸೆಲೆಬ್ರಿಟಿ ಜೋಡಿಗಳೆಲ್ಲ ಮೊದಲು ತಮ್ಮ ಇನ್ಸ್ಟಾಗ್ರಾಂನಿಂದ ತಮ್ಮ ಪಾರ್ಟ್ನರ್ ಫೋಟೋಗಳು, ಹೆಸರನ್ನು ತೆಗದುಹಾಕುತ್ತಾರೆ. ನಂತರ ಸ್ವಲ್ಪ ಸಮಯದ ಬಳಿಕ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಇದು ಇತ್ತೀಚೆಗೆ ಟ್ರೆಂಡ್ ಆಗಿ ಬಿಟ್ಟಿದೆ. ಅದರಂತೆ ಈಗ ಶೋಯೆಬ್ ಮಲಿಕ್ ಕೂಡ ಪತ್ನಿಯ ಹೆಸರನ್ನು ತೆಗೆದು ಹಾಕಿದರಾ ಎಂಬ ಅನುಮಾನ ಅಭಿಮಾನಿಗಳದ್ದು.
ಈ ಹಿಂದೆಯೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎನ್ನುವ ರೂಮರ್ ಹರದಾಡಿತ್ತು. ಆದರೆ ಜೋಡಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದನ್ನು ತಳ್ಳಿ ಹಾಕಿತ್ತು. ಇಬ್ಬರೂ ಸೇರಿ ನಡೆಸುತ್ತಿದ್ದ ಒಟಿಟಿ ಸಿರೀಸ್ 'ದಿ ಮಿರ್ಜಾ ಮಲಿಕ್ ಶೋ' ವನ್ನು ಮೋಡಿ ಮುಂದುವರೆಸಿದ್ದರು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮೊದಲು 5 ತಿಂಗಳು ಪರಸ್ಪರ ಡೇಟಿಂಗ್ ಮಾಡಿ 2010ರಲ್ಲಿ ಮದುವೆಯಾಗಿದ್ದರು. ಮದುವೆಯಾದ 8 ವರ್ಷಗಳ ನಂತರ ಸಾನಿಯಾ 2018 ಅಕ್ಟೋಬರ್ನಲ್ಲಿ ಮಗ ಇಜಾನ್ಗೆ ಜನ್ಮ ನೀಡಿದ್ದರು.
ಇದನ್ನೂ ಓದಿ: ವಿಚ್ಛೇದನ ಘೋಷಿಸಿದ ನಿಹಾರಿಕಾ ಕೊನಿಡೆಲಾ - ಚೈತನ್ಯ!!