ETV Bharat / sports

Asian Games: ಏಷ್ಯನ್‌ ಗೇಮ್ಸ್‌ನಲ್ಲಿ ಟೀಂ ಇಂಡಿಯಾಗೆ ಶಿಖರ್ ಧವನ್​ ಸಾರಥ್ಯ ಸಾಧ್ಯತೆ

ವಿಶ್ವಕಪ್​ ಸಂದರ್ಭದಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ಗೆ ಆರಂಭಿಕ ಆಟಗಾರ ಶಿಖರ್​ ಧವನ್​ ನಾಯಕತ್ವದಲ್ಲಿ ತಂಡ ಕಳಿಸಲು ಬಿಸಿಸಿಐ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.

Etv Bharat
Etv Bharat
author img

By

Published : Jun 30, 2023, 5:55 PM IST

ಈ ವರ್ಷ ಚೀನಾದ ಹ್ಯಾಂಗ್‌ಝೌ ನಗರದಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್​ ತಂಡಗಳನ್ನು ಕಳುಹಿಸಲು ಬಿಸಿಸಿಐ ಚಿಂತಿಸಿದೆ. ಪಂದ್ಯಗಳು ವಿಶ್ವಕಪ್​ ಸಂದರ್ಭದಲ್ಲಿ ನಡೆಯಲಿದ್ದು, ತಂಡದ ಆಯ್ಕೆಯ ಬಗ್ಗೆ ಗೊಂದಲಗಳಿದ್ದವು. ಈ ಬಗ್ಗೆ ಸದ್ಯಕ್ಕೆ ಹೊಸ ಅಪ್ಡೇಟ್​ ಬಂದಿದ್ದು, ಆರಂಭಿಕ ಆಟಗಾರ ಶಿಖರ್​ ಧವನ್​ ನಾಯಕತ್ವದಲ್ಲಿ ಟೀಂ ಇಂಡಿಯಾ ಏಷ್ಯನ್​ ಗೇಮ್ಸ್​ ಆಡಲಿದೆ ಎನ್ನಲಾಗಿದೆ.

ಬಿಸಿಸಿಐನ ಮೂಲಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ಏಷ್ಯನ್​ ಗೇಮ್ಸ್​ 2023​ಕ್ಕೆ ಭಾರತದ ಮಾಜಿ ಬ್ಯಾಟರ್ ವಿ.ವಿ.ಎಸ್. ಲಕ್ಷ್ಮಣ್ ತರಬೇತುದಾರರಾಗಿ ಮತ್ತು ಶಿಖರ್​ ಧವನ್​ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆಯಿದೆ. ಆದರೆ ನಿರ್ಧಾರ ಅಂತಿಮವಾಗಿಲ್ಲ ಎಂದು ಹೇಳಲಾಗಿದೆ. ಧವನ್ ಹೊರತಾಗಿ, ಲಕ್ಷ್ಮಣ್ ಪಂದ್ಯಾವಳಿಗೆ ಮುಖ್ಯ ಕೋಚ್ ಆಗಿಯೂ ಭಾರತ ತಂಡ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಟೂರ್ನಿಯಲ್ಲಿ ಆಡಬಹುದಾದ ಆಟಗಾರರ ಪಟ್ಟಿಯನ್ನು ಇಂದು ಫೈನಲ್​ ಮಾಡಿ ಬಿಸಿಸಿಐ ಚೀನಾದಲ್ಲಿನ ಆಯೋಜಕರಿಗೆ ಕಳುಹಿಸಲಿದೆ. ಇದರಲ್ಲಿ ಹೊಸಬರ ಆಯ್ಕೆ ಮಾಡುವ ನಿರೀಕ್ಷೆ ಇದ್ದು ಅನುಭವಿ ಶಿಖರ್​​ ಧವನ್​ಗೆ ಸಾರಥ್ಯ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. 2010 ಮತ್ತು 2014ರಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲಿ ಕ್ರಿಕೆಟ್​ ಪಂದ್ಯ ಆಡಿಸಲಾಗಿತ್ತು. ಬಿಸಿಸಿಐ ಆ ಎರಡೂ ವರ್ಷಗಳಲ್ಲಿ ಭಾರತ ತಂಡವನ್ನು ಕಳುಹಿಸಿರಲಿಲ್ಲ. ಈ ವರ್ಷ ಪುರುಷರ ಮತ್ತು ಮಹಿಳಾ ತಂಡಗಳನ್ನು ಮೊದಲ ಬಾರಿಗೆ ಕಳುಹಿಸಲು ಭಾರತೀಯ ಬಿಸಿಸಿಐ ಒಪ್ಪಿಕೊಂಡಿದೆ.

ಏಷ್ಯಾ ಕಪ್ ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ ಒಂದೇ ಸಮಯದಲ್ಲಿ ನಡೆಯುತ್ತಿರುವುದರಿಂದ ಭಾರತ ಪುರುಷ ಎರಡನೇ ತಂಡವನ್ನು ಚೀನಾಕ್ಕೆ ಕಳುಹಿಸಬೇಕಾಗುತ್ತದೆ. ವಿಶ್ವಕಪ್ ಅನ್ನು ಭಾರತವು ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಆಯೋಜಿಸುತ್ತದೆ ಮತ್ತು ಏಷ್ಯನ್ ಗೇಮ್ಸ್ 2023 ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಏಷ್ಯನ್ ಗೇಮ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಡಿಯಲ್ಲಿ ಬರುವುದಿಲ್ಲ.

ಭಾರತದ ಮಹಿಳೆಯರ ತಂಡ ಈ ಸಂದರ್ಭದಲ್ಲಿ ಕೇವಲ ದೇಶಿ ಟೂರ್ನಿಗಳನ್ನು ಮಾತ್ರ ಒಳಗೊಂಡಿದೆ. ಇದರಿಂದಾಗಿ ವನಿತೆಯರ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. ಈ ಹಿಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಮಹಿಳಾ ತಂಡ ಭಾಗವಹಿಸಿತ್ತು. ಕಾಮನ್​ವೆಲ್ತ್​​ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋಲನುಭವಿಸಿದ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಇದನ್ನೂ ಓದಿ: ಮೊದಲ ಬಾರಿಗೆ ಏಷ್ಯನ್​ ಗೇಮ್​​ನಲ್ಲಿ ಆಡಲಿದೆ ಭಾರತದ ಪುರುಷರ ತಂಡ.. ಮಹಿಳಾ ಕ್ರಿಕೆಟ್​ ತಂಡವೂ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.