ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 47 ರನ್ಗಳಿಸಿದರೆ ಐಪಿಎಲ್ನಲ್ಲಿ ಗರಿಷ್ಠ ರನ್ ಬಾರಿಸಿದ 2ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 196(192 ಇನ್ನಿಂಗ್ಸ್) ಪಂದ್ಯಗಳಿಂದ 39 ಅರ್ಧಶತಕ ಮತ್ತು 1 ಶತಕದ ಸಹಿತ 5,448 ರನ್ಗಳಿಸಿ ಐಪಿಎಲ್ನಲ್ಲಿ ಗರಿಷ್ಠ ರನ್ ಬಾರಿಸಿದ ಪಟ್ಟಿಯಲ್ಲಿ ಕೊಹ್ಲಿ(5,949) ನಂತರದ ಸ್ಥಾನದಲ್ಲಿದ್ದಾರೆ. ಇಂದು ಮುಂಬೈ - ಡೆಲ್ಲಿ ತಂಡಗಳು ಎದುರು ಬದರಾಗಲಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಆರಂಭಿಕರಾಗಿರುವ ಶಿಖರ್ ಧವನ್ ಮತ್ತು ಮುಂಬೈ ಆರಂಭಿಕ ಮತ್ತು ನಾಯಕ ರೋಹಿತ್ ಶರ್ಮಾ ರೈನಾರನ್ನು ಹಿಂದಿಕ್ಕುವ ಅವಕಾಶ ಪಡೆದಿದ್ದಾರೆ.
ಡೆಲ್ಲಿ ಡ್ಯಾಶರ್ ಈಗಾಗಲೇ 179 ಪಂದ್ಯಗಳಿಂದ 2 ಶತಕ ಮತ್ತು 43 ಅರ್ಧ ಶತಕಗಳ ಸಹಿತ 5,383 ರನ್ಗಳಿಸಿ ಗರಿಷ್ಠ ರನ್ಗಳಿಸಿದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇವರಿಗೆ ರೈನಾರನ್ನು ಹಿಂದಿಕ್ಕಲು 65 ರನ್ಗಳ ಅವಶ್ಯಕತೆಯಿದೆ.
ರೋಹಿತ್ ಶರ್ಮಾ 203(198 ಇನ್ನಿಂಗ್ಸ್) ಪಂದ್ಯಗಳಿಂದ 5,324 ರನ್ಗಳಿಸಿದ್ದಾರೆ. ಈ ಪಂದ್ಯದಲ್ಲಿ 23 ರನ್ಗಳಿಸಿದರೆ ಸನ್ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್(5,347) ರನ್ನು ಹಿಂದಿಕ್ಕಿ ಐಪಿಎಲ್ನ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಳ್ಳಲಿದ್ದಾರೆ.
ಇದನ್ನು ಓದಿ: ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದೇನೆ: ಧವನ್