ನವದೆಹಲಿ: ಶಾರ್ದೂಲ್ ಠಾಕೂರ್ ಈಗಾಗಲೇ ತಾನೊಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ ಎಂಬುದನ್ನು ನಿರೂಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದಾಗಿನಿಂದ ತಂಡಕ್ಕೆ ಅಗತ್ಯವಾಗಿದ್ದ ಸ್ಥಾನಕ್ಕೆ ಠಾಕೂರ್ ಸೂಕ್ತವಾದ ಆಯ್ಕೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.
ಸೀಮಿತ ಓವರ್ಗಳ ತಂಡದಲ್ಲಿ ಅವಕಾಶ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸ್ಥಾನದಲ್ಲಿ ಇಲ್ಲದಿರುವುದರಿಂದ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಅವರನ್ನು ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ನಾವು ಎದುರು ನೋಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿತ್ತು.
ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ. ನಾವು ಅಂತಹ ಆಲ್ ರೌಂಡರ್‌ಗಳನ್ನು ಅಭಿವೃದ್ಧಿಪಡಿಸಬಹುದು. ಶಾರ್ದೂಲ್ ತಾನು ಆಲ್ರೌಂಡರ್ ಆಗಬಲ್ಲೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿದ ರೀತಿ ಅದ್ಭುತವಾಗಿತ್ತು," ಎಂದು ಐರನ್ವುಡ್ ಶೈಕ್ಷಣಿಕ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅರುಣ್ ತಿಳಿಸಿದ್ದಾರೆ.
ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಠಾಕೂರ್ ಪ್ರದರ್ಶನ ಪ್ರಭಾವಶಾಲಿಯಾಗಿದೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿರುವ ಟೆಸ್ಟ್ ಒಂದೇ ವಿದೇಶದಲ್ಲಿ ಆಡಿರುವುದಾಗಿದೆ. ಆದರೆ ಆ ಪಂದ್ಯದಲ್ಲೇ 7 ವಿಕೆಟ್ ಮತ್ತು ಒಂದು ಅರ್ಧಶತಕ ಕೂಡ ಸಿಡಿಸಿದ್ದರು.
ಹಾರ್ದಿಕ್ ಕೂಡ ಒಬ್ಬ ಅತ್ಯುತ್ತಮ ಪ್ರತಿಭೆ, ಆದರೆ ದುರದೃಷ್ಟವಶಾತ್, ಅವರು ಬೆನ್ನು ಆಪರೇಷನ್‌ಗೆ ಒಳಗಾಗಬೇಕಾಯಿತು. ಆ ನಂತರ ಹಿಂತಿರುಗುವುದು ತುಂಬಾ ಸುಲಭವಲ್ಲ. ಆದರೆ ಅವರು ಇಂಗ್ಲೆಂಡ್ ವಿರುದ್ದ ಉತ್ತಮ ಪ್ರದರ್ಶನ ತೋರಿದ್ದರು, ಆದರೆ, ಅವರು ಇನ್ನಷ್ಟು ಬಲಿಷ್ಟರಾಗುವುದನ್ನು ನಾವು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯಕ್ಕಾಗಿ ₹70 ಲಕ್ಷದೇಣಿಗೆ ನೀಡಿದ ಪಂಜಾಬ್ ಕಿಂಗ್ಸ್