ETV Bharat / sports

ಶಕಿಬ್ ಅಲ್ ಹಸನ್​ 4 ಪಂದ್ಯಗಳಿಂದ ನಿಷೇಧ: 4.24 ರೂ ಲಕ್ಷ ದಂಡ

author img

By

Published : Jun 12, 2021, 10:59 PM IST

ಶುಕ್ರವಾರ ಅಬಹಾನಿ ಲಿಮಿಟೆಡ್ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡದ ನಾಯಕನಾಗಿರುವ ಶಕೀಬ್ ಅಲ್ ಹಸನ್ ಅನುಚಿತವಾಗಿ ವರ್ತಿಸಿದ್ದರು. ಆದರೂ ಪಂದ್ಯವನ್ನು ಡೆಕ್ವರ್ತ್​ ನಿಯಮದ ಅನ್ವಯ ಶಕಿಬ್ ನೇತೃತ್ವದ ಮೊಹಮ್ಮದಿನ್ ಸ್ಪೋರ್ಟಿಂಗ್ ಕ್ಲಬ್ ಜಯ ಸಾಧಿಸಿತ್ತು.

ಶಕಿಬ್ ಅಲ್ ಹಸನ್
ಶಕಿಬ್ ಅಲ್ ಹಸನ್

ಢಾಕಾ: ಢಾಕಾ ಪ್ರಿಮಿಯರ್ ಲೀಗ್ ವೇಳೆ ಅಂಪೈರ್​ ತೀರ್ಮಾನದಿಂದ ಕುಪಿತಗೊಂಡು ಸ್ಟಂಪ್ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದ ಬಾಂಗ್ಲಾದೇಶದ ಆಲ್​ರೌಂಡರ್​ ಶಕಿಬ್ ಅಲ್ ಹಸನ್​ಗೆ 4 ಪಂದ್ಯಗಳ ನಿಷೇಧ ಹೇರಲಾಗಿದೆ. ಜೊತೆಗೆ 5,800 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ.

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮುಶ್ಫೀಕರ್ ರಹೀಮ್​ ವಿರುದ್ಧ ಎಲ್​ಬಿಡಬ್ಲ್ಯೂಗೆ ಶಕಿಬ್ ಮನವಿ ಮಾಡಿದ್ದರು. ಇದನ್ನು ಅಂಪೈರ್​ ತಿರಸ್ಕಸಿದ್ದರಿಂದ ಕುಪಿತಗೊಂಡು ಸ್ಟಂಪ್​ಗಳನ್ನು ಒದ್ದರು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಅಂಪೈರ್​ಗಳ ಜೊತೆ ವಾಗ್ವಾದ ನಡೆಸಿ ಕೈಗಳಿಂದ ಸ್ಟಂಪ್​ಗಳನ್ನು ಕಿತ್ತೆಸಿದ್ದರು. ಇದೀಗ ವಿಚಾರಣೆ ನಡೆಸಿರುವ ಕ್ರಿಕೆಟ್ ಮಂಡಳಿ 3ನೇ ಹಂತದ ಉಲ್ಲಂಘನೆ ಮಾಡಿರುವುದಕ್ಕೆ 4 ಪಂದ್ಯಗಳ ನಿಷೇಧದ ಜೊತೆಗೆ 4.24 ಲಕ್ಷ ರೂ ದಂಡವ ವಿಧಿಸಿದೆ.

ಶುಕ್ರವಾರ ಅಬಹಾನಿ ಲಿಮಿಟೆಡ್ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡದ ನಾಯಕನಾಗಿರುವ ಶಕೀಬ್ ಅಲ್ ಹಸನ್ ಅನುಚಿತವಾಗಿ ವರ್ತಿಸಿದ್ದರು. ಆದರೂ ಪಂದ್ಯವನ್ನು ಡೆಕ್ವರ್ತ್​ ನಿಯಮದ ಅನ್ವಯ ಶಕಿಬ್ ನೇತೃತ್ವದ ಮೊಹಮ್ಮದಿನ್ ಸ್ಪೋರ್ಟಿಂಗ್ ಕ್ಲಬ್ ಜಯ ಸಾಧಿಸಿತ್ತು.

"ಪ್ರೀತಿಯ ಅಭಿಮಾನಿಗಳೇ ಮತ್ತು ಹಿಂಬಾಲಕರೆ, ವಿಶೇಷವಾಗಿ ಪಂದ್ಯವನ್ನು ಮನೆಯಲ್ಲಿ ಕುಳಿತು ಟಿವಿಯಲ್ಲಿ ನೋಡುತ್ತಿರುವವರಿಗೆ ನಾನು ಮೈದಾನದಲ್ಲಿ ತೋರಿದ ವರ್ತನೆಗೆ ಕ್ಷಮೆ ಕೋರುತ್ತಿದ್ದೇನೆ. ನನ್ನಂತಹ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅನುಭವವುಳ್ಳಂತಹ ಕ್ರಿಕೆಟಿಗ ಈ ರೀತಿ ವರ್ತಿಸಬಾರದಿತ್ತು, ದುರಾದೃಷ್ಟವಶಾತ್ ನಡೆದು ಹೋಗಿದೆ" ಎಂದು ಘಟನೆಯ ನಂತರ ತನ್ನ ಸಾಮಾಜಿಕ ಜಾಲತಾಣದ ಮೂಲಕ ಶಕಿಬ್ ಅಲ್ ಹಸನ್ ಕ್ಷಮೆ ಕೋರಿದ್ದರು.

ಎರಡು ತಂಡಗಳಿಗೂ, ಮ್ಯಾನೇಜ್​ಮೆಂಟ್ , ಪಂದ್ಯದ ಅಧಿಕಾರಿಗಳು ಮತ್ತು ಟೂರ್ನಿ ಆಯೋಜಕರಿಗೂ ಈ ತಪ್ಪಿಗೆ ಕ್ಷಮೆ ಕೋರುತ್ತೇನೆ. ಆಶಾದಾಯಕವಾಗಿ , ಇನ್ನು ಮುಂದೆ ಎಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರವಹಿಸುತ್ತೇನೆ. ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ.

ಇದನ್ನು ಓದಿ: ಅಂಪೈರ್ ಔಟ್​ ನೀಡದ್ದಕ್ಕೆ ಸ್ಟಂಪ್​ಗೆ ಒದ್ದ ಶಕಿಬ್, ಟೀಕೆಗಳ ಸುರಿಮಳೆ ನಂತರ ಕ್ಷಮೆಯಾಚನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.