ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ 5 ವಿಕೆಟ್‌ಗಳ ಸೋಲು ಅನುಭವಿಸಿದ್ದು, ಇಂಗ್ಲೆಂಡ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಾಕ್ ಸೋಲಿನ ಬಳಿಕ ಹಾರ್ಟ್ ಬ್ರೋಕನ್ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದ ಪಾಕ್ ವೇಗಿ ಶೋಯಬ್ ಅಖ್ತರ್ಗೆ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದು, ಈ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಶಮಿ ರೀಟ್ವೀಟ್ಗೆ ಪಾಕ್ನ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮೊಹಮ್ಮದ್ ಶಮಿ, 'ಕ್ಷಮಿಸಿ ಸಹೋದರ, ಇದನ್ನು ಕರ್ಮ ಎಂದು ಕರೆಯಲಾಗುತ್ತದೆ' ಎಂದು ರೀಟ್ವೀಟ್ ಮಾಡಿದ್ದರು. ಇದು ಪಾಕ್ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಅಲ್ಲಿನ ಟಿವಿ ಶೋಗಳಲ್ಲಿ ಸುದೀರ್ಘ ಚರ್ಚೆಗಳೂ ನಡೆದಿವೆ. ಟಿವಿ ಶೋವೊಂದರ ವೇಳೆ ಮಾತನಾಡಿರುವ ಶಾಹಿದ್ ಅಫ್ರಿದಿ, ಶಮಿ ಅವರು ಸೆಹ್ವಾಗ್ ಮತ್ತು ಹರ್ಭಜನ್ ಅವರಂತಹ ನಿವೃತ್ತ ಟ್ರೋಲರ್ ಅಲ್ಲ ಎಂದಿದ್ದಾರೆ.
ಅಲ್ಲದೆ, 'ನಾವು ಕ್ರಿಕೆಟಿಗರು, ನಾವು ರಾಯಭಾರಿಗಳು ಮತ್ತು ಮಾದರಿ ಇದ್ದಂತೆ. ಇಂತಹ ವಿಚಾರಗಳಿಗೆ ಅಂತ್ಯಹಾಡಲು ನಾವು ಪ್ರಯತ್ನಿಸಬೇಕು. ನೆರೆಹೊರೆಯವರಾದ ನಾವು ಪರಸ್ಪರ ದ್ವೇಷ ಬಿತ್ತುವ ಕೆಲಸ ಮಾಡಬಾರದು. ನಾವುಗಳೇ ಇಂತಹ ಕೆಲಸ ಮುಂದುವರೆಸಿದರೆ, ಇನ್ನು ಸಾಮಾನ್ಯ ಜನರಿಂದ ಏನು ನಿರೀಕ್ಷಿಸಲು ಸಾಧ್ಯ' ಎಂದು ತೇಪೆ ಹಾಕಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ಗೆ ಇಂಗ್ಲೆಂಡ್ ಕಿಂಗ್.. ಪಾಕ್ ಪುಡಿಗಟ್ಟಿ ಚಾಂಪಿಯನ್
'ಕ್ರೀಡೆಯಿಂದ ನಮ್ಮ ಸಂಬಂಧಗಳು ಸುಧಾರಿಸುತ್ತವೆ. ನಾವು ಭಾರತದೊಂದಿಗೆ ಆಡಲು ಬಯಸುತ್ತೇವೆ, ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದನ್ನು ನಿರೀಕ್ಷಿಸುತ್ತೇವೆ. ಶಮಿ ಮುಂದೊಮ್ಮೆ ನಿವೃತ್ತರಾಗಿದ್ದರೂ, ಇಂತಹ ಕೆಲಸ ಮಾಡಬಾರದು. ಆದರೆ ನೀವು ಪ್ರಸ್ತುತ ತಂಡದ ಆಟಗಾರರಾಗಿದ್ದೀರಿ, ನೀವು ಇಂತಹ ವಿಚಾರಗಳಿಂದ ದೂರವಿರಿ' ಅನ್ನೋದು ಅಫ್ರಿದಿ ಉವಾಚ.
-
And this what you call sensible tweet .. pic.twitter.com/OpVypB34O3
— Shoaib Akhtar (@shoaib100mph) November 13, 2022 " class="align-text-top noRightClick twitterSection" data="
">And this what you call sensible tweet .. pic.twitter.com/OpVypB34O3
— Shoaib Akhtar (@shoaib100mph) November 13, 2022And this what you call sensible tweet .. pic.twitter.com/OpVypB34O3
— Shoaib Akhtar (@shoaib100mph) November 13, 2022
ಇನ್ನು ಮೊಹಮ್ಮದ್ ಶಮಿ ಟ್ವೀಟ್ಗೆ ಶೋಯಬ್ ಅಖ್ತರ್, ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಟ್ವೀಟ್ ಫೋಟೋದೊಂದಿಗೆ ಪ್ರತಿಕ್ರಿಯಿಸಿದ್ದಾರೆ. 'ಇದನ್ನು ಸಂವೇದನಾಶೀಲ ಟ್ವೀಟ್ ಎಂದು ಕರೆಯುತ್ತಾರೆ' ಎಂದು ಟಾಂಗ್ ನೀಡಿದ್ದಾರೆ. 'ಪಾಕಿಸ್ತಾನಕ್ಕೂ ಕ್ರೆಡಿಟ್ ಸಲ್ಲುತ್ತದೆ. ಅವರು 137 ರನ್ಗಳನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಅತ್ಯುತ್ತಮ ಬೌಲಿಂಗ್ ಪಡೆ' ಎಂದು ಹರ್ಷ ಟ್ವೀಟ್ ಮಾಡಿದ್ದರು. ಇದರ ಫೋಟೊದೊಂದಿಗೆ ಶಮಿಗೆ ಅಖ್ತರ್ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕರ್ಮ ಯಾವಾಗಲೂ ಹಿಂತಿರುಗಿಸುತ್ತದೆ: ಶೋಯೆಬ್ ಅಖ್ತರ್ಗೆ ಮೊಹಮದ್ ಶಮಿ ಗುದ್ದು