ಹೊಸದಿಲ್ಲಿ : ಟೀಂ ಇಂಡಿಯಾ ಆಲ್‌ರೌಂಡರ್, ಮಿಡಲ್ ಬ್ಯಾಟರ್ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಕೊರತೆಯಿಂದ ಹೊರ ಬಂದಿದ್ದಾರೆ. ತಮ್ಮ ಮುಂದಿನ ಗುರಿಯ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದ ಪಾಂಡ್ಯ ಹೆಚ್ಚು ಬೌಲಿಂಗ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಆಯ್ಕೆ ಸಮಿತಿ ಸೇರಿದಂತೆ ತಂಡದ ಸಹ ಆಟಗಾರರಿಗೂ ಇವರ ನಿರ್ಧಾರ ಅಚ್ಚರಿ ತಂದಿತ್ತು. ಸದ್ಯ ಈ ಸಮಸ್ಯೆಯಿಂದ ಹೊರ ಬಂದಿರುವ ಮಿಡಲ್ ಬ್ಯಾಟರ್ ಪಾಂಡ್ಯ, ತಮ್ಮ ಮುಂದಿನ ಕನಸು ಏನು ಅನ್ನೋದನ್ನು ಬಹಿರಂಗ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ 1000ನೇ ಏಕದಿನ ಪಂದ್ಯಕ್ಕೆ ಸಕಲ ಸಿದ್ದತೆ : ಈ ಐತಿಹಾಸಿಕ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ?
ಫ್ರಾಂಚೈಸಿಯ ಸಂವಾದದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬುವುದು (ಫ್ರಾಂಚೈಸಿ) ಅವರಿಗೆ ಗೊತ್ತಿದೆ. ಸದ್ಯ ನನ್ನ ಫಿಟ್‌ನೆಸ್ ಬಗ್ಗೆ ನಾನು ಅವರಲ್ಲಿ ಮನವರಿಕೆ ಮಾಡಿಕೊಂಡಿರುವೆ. ಅವರು ನನ್ನ ನಿಲುವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.
ಅಹ್ಮದಾಬಾದ್ ತಂಡದ ನಾಯಕ : ಪಾಂಡ್ಯ ಬೆನ್ನಿನ ಸಮಸ್ಯೆಯಿಂದ ಕಳೆದ 2 ವರ್ಷಗಳಿಂದ ಹೆಚ್ಚು ಬೌಲಿಂಗ್ ಮಾಡದೇ ಇರಬಹುದು. ಆದರೆ, ಮುಂಬರುವ ಲೀಗ್‌ನಲ್ಲಿ ಅವರು ಅಹಮದಾಬಾದ್ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದು, ಇದು ಹಲವರಿಗೆ ಅಚ್ಚರಿ ತಂದಿದೆ. ಹೊಸ ಉತ್ಸಾಹದಲ್ಲಿರುವ ಪಾಂಡ್ಯ ಬದಲಾವಣೆ ಮಾಡಲಿದ್ದಾರೆ ಅನ್ನೋದನ್ನು ತೆಗಳುವಂತಿಲ್ಲ.
ಸ್ವದೇಶಿ ಸರಣಿಯಿಂದ ದೂರ : ಫೆಬ್ರವರಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ನಡೆಯಲಿದೆ. ಭಾರತ ತಂಡದಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸಲಾಗಿಲ್ಲ. ಬೌಲಿಂಗ್ನಲ್ಲಿ ಇನ್ನೂ ಫಿಟ್‌ನೆಸ್ ಕಾಯ್ದುಕೊಳ್ಳುವ ಉದ್ದೇಶದಿಂದ ಅವರನ್ನು (ಹಾರ್ದಿಕ್ ಪಾಂಡ್ಯ) ಕೈಬಿಡಲಾಗಿದೆ.
ಆಲ್ರೌಂಡರ್ಗೆ ಹೆಚ್ಚು ಒತ್ತು : ಕೇವಲ ಬ್ಯಾಟರ್ ಆಗುವುದಕ್ಕಿಂತಲೂ ಬೌಲಿಂಗ್ ಮಾಡಲು ನಾನು ಬಯಸುತ್ತೇನೆ. ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆ ನೀಡುವುದು ನನ್ನ ಮೊದಲ ಆಯ್ಕೆ. ಯಾವುದೂ ಸಾಧ್ಯವಾಗದಿದ್ದಾಗ ಮಾತ್ರ ಬ್ಯಾಟರ್ ಆಗಿ ಮುಂದುವರೆಯುತ್ತೇನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆದರೆ, ಟಿ20 ವಿಶ್ವಕಪ್ ಬಳಿಕ ಕೇಳಿ ಬಂದ ಟೀಕೆಗಳಿಂದ ಆಲ್‌ರೌಂಡರ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿರುವುದು ಸವಾಲಿನ ಸಂಗತಿಯಾಗಿದೆ. ಆರೋಗ್ಯಕರ ಟೀಕೆಗಳು ಯಾವಾಗಲೂ ಒಳ್ಳೆಯದು. ಆದರೆ, ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಗೊತ್ತಿರುವುದರಿಂದ ಆ ಟೀಕೆಗಳು ಸಾಮಾನ್ಯವಾಗಿ ನನ್ನನ್ನು ಕಾಡುವುದಿಲ್ಲ ಎಂದಿದ್ದಾರೆ.
ಮೊದಲ ಬಾರಿಗೆ ನಾಯಕತ್ವ : ತಂಡದ ನಾಯಕತ್ವ ವಹಿಸಿಕೊಂಡಿರುವ ಪಾಂಡ್ಯ ಅವರಿಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ. ಈ ವರೆಗೆ (U-16 ಮಟ್ಟ ಹೊರತುಪಡಿಸಿ) ಅವರು ಯಾವುದೇ ಮಾದರಿಯ ನಾಯತ್ವ ವಹಿಸಿಕೊಂಡವರಲ್ಲ. ಹಾಗಾಗಿ, ಇದು ಅವರ ಮೊದಲ ಜವಾಬ್ದಾರಿಯಾಗಿದೆ. ಸದ್ಯ ಹೊಸ ತಂಡದ ನಾಯತ್ವ ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವ ಹೊಗಳಿದ್ದರಿಂದ ಅವರ ಮೇಲೆ ಧೋನಿ ಪ್ರಭಾವ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅಗ್ರ ಆಟಗಾರರನ್ನು ನೆನೆದು ಟೀಂ ಇಂಡಿಯಾದ ಮುಂದಿನ ಗುರಿ ಮತ್ತು ಹಿರಿಯರಿಂದ ತಾವು ಕಲಿತ ಪಾಠದ ಬಗ್ಗೆ ಮಾತನಾಡಿದರು.
ಪಾಂಡ್ಯ ಈ ಹಿಂದೆ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಸದ್ಯ ಅಹ್ಮದಾಬಾದ್ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.