ETV Bharat / sports

ಐಪಿಎಲ್​​ ಹರಾಜಿನಲ್ಲಿ ಭಾಗಿಯಾಗದಿರುವುದಕ್ಕೆ ದುಃಖವಿದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದ ಸ್ಯಾಮ್​ ಕರ್ರನ್​​ - 2022ರ ಐಪಿಎಲ್​ನಿಂದ ಸ್ಯಾಮ್ ಕರ್ರನ್ ಔಟ್​

Sam Curran will miss IPL : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೆಗಾ ಹರಾಜಿನಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಸ್ಯಾಮ್​ ಕರ್ರನ್​ ಮಾಹಿತಿ ನೀಡಿದ್ದು, ಹರಾಜಿನಲ್ಲಿ ಭಾಗಿಯಾಗುತ್ತಿರುವ ಎಲ್ಲರಿಗೂ ವಿಶ್ ಮಾಡಿದ್ದಾರೆ.

Sam Curran will miss IPL
Sam Curran will miss IPL
author img

By

Published : Jan 22, 2022, 10:56 PM IST

ಮುಂಬೈ: 2022ರ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಭಾಗಿಯಾಗಲು ಸಾವಿರಾರು ಕ್ರಿಕೆಟರ್ಸ್​ ತಮ್ಮ ಹೆಸರು ನೋಂದಣಿ ಮಾಡಿದ್ದಾರೆ. ಫೆ. 12 ಮತ್ತು 13ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದೃಷ್ಟ ಲಕ್ಷ್ಮೀ ಯಾರಿಗೆಲ್ಲ ಒಲಿಯಲಿದ್ದಾಳೆಂಬುದು ಕುತೂಹಲ ಮೂಡಿಸಿದೆ. ಇದರ ಮಧ್ಯೆ ಈ ಹಿಂದಿನ ಆವೃತ್ತಿಗಳಲ್ಲಿ ಮಿಂಚು ಹರಿಸಿರುವ ಕೆಲ ಪ್ಲೇಯರ್ಸ್​ ತಮ್ಮ ಹೆಸರು ಹರಾಜು ಪ್ರಕ್ರಿಯೆಗಾಗಿ ನೋಂದಣಿ ಮಾಡಿಕೊಂಡಿಲ್ಲ. ಈ ಸಾಲಿನಲ್ಲಿ ಇಂಗ್ಲೆಂಡ್​ ಸ್ಟಾರ್​ ಆಲ್​ರೌಂಡರ್​ ಸ್ಯಾಮ್ ಕರ್ರನ್​ ಸಹ ಸೇರಿಕೊಂಡಿದ್ದಾರೆ.

ಬೆನ್ನು ನೋವಿನ ತೊಂದರೆಗೊಳಗಾಗಿರುವ ಇಂಗ್ಲೆಂಡ್​ ಆಲ್​ರೌಂಡರ್​ ಸ್ಯಾಮ್ ಕರ್ರನ್​ ಈಗಾಗಲೇ ದುಬೈನಲ್ಲಿ ನಡೆದ ಟಿ-20 ವಿಶ್ವಕಪ್ ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಬಿದ್ದಿದ್ದರು. ಇದೀಗ 2022ರ ಐಪಿಎಲ್​​ನಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿರಿ: ಭಾರತ-ವೆಸ್ಟ್ ಇಂಡೀಸ್​ ಕ್ರಿಕೆಟ್​​​ ಸರಣಿಗೆ ಸ್ಥಳ ನಿಗದಿ.. ಅಹ್ಮದಾಬಾದ್​, ಕೋಲ್ಕತ್ತಾದಲ್ಲಿ ಟೂರ್ನಿ

ಕಳೆದ ವರ್ಷದ ಐಪಿಎಲ್​​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಬೆನ್ನು ನೋವಿನ ತೊಂದರೆಗೊಳಗಾಗಿದ್ದ ಅವರು, ಟೂರ್ನಿಯಿಂದ ಹೊರಬಿದ್ದಿದ್ದರು. ಅದೇ ಕಾರಣಕ್ಕಾಗಿ ಇದೀಗ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಡಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈ ವರ್ಷದ ಐಪಿಎಲ್​​ ಹರಾಜಿನಲ್ಲಿ ಭಾಗಿಯಾಗದಿರುವುದು ತುಂಬಾ ದುಃಖಕರವಾಗಿದ್ದು, ಇದೀಗ ತರಬೇತಿ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆದಷ್ಟು ಬೇಗ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಟೂರ್ನಿಯಲ್ಲಿ ಹಾಗೂ ಹರಾಜು ಪ್ರಕ್ರಿಯೆಲ್ಲಿ ಭಾಗಿಯಾಗುವ ಎಲ್ಲ ಪ್ಲೇಯರ್ಸ್​ಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಕಳೆದ ಎರಡು ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮಿಂಚು ಹರಿಸಿದ್ದ ಈ ಪ್ಲೇಯರ್​ ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಆದರೆ, ಬೆನ್ನು ನೋವಿನ ಕಾರಣ ತಾವು ಮೆಗಾ ಹರಾಜಿನಲ್ಲಿ ಭಾಗಿಯಾಗುತ್ತಿಲ್ಲ ಎಂದು ಖುದ್ದಾಗಿ ತಿಳಿಸಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ 32 ಪಂದ್ಯಗಳನ್ನಾಡಿರುವ ಸ್ಯಾಮ್​​ 32 ವಿಕೆಟ್ ಪಡೆದುಕೊಂಡಿದ್ದು, 337ರನ್​ಗಳಿಕೆ ಮಾಡಿದ್ದಾರೆ.

ಇವರ ಜೊತೆಗೆ ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮಿಚೆಲ್ ಸ್ಟಾರ್ಕ್ ಕೂಡ ಐಪಿಎಲ್​ ಮೆಗಾ ಹರಾಜಿನಿಂದ ಹೊರಬಿದ್ದಿದ್ದಾರೆ. ಈ ಸಲದ ಐಪಿಎಲ್​ ಮೆಗಾ ಹರಾಜಿನಲ್ಲಿ ಭಾಗಿಯಾಗಲು 19 ರಾಷ್ಟ್ರಗಳ 1,214 ಪ್ಲೇಯರ್ಸ್​ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.