ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗ ಇರುವ ನಿಯಮಗಳು ನಮ್ಮ ಕಾಲದಲ್ಲಿ ಜಾರಿಯಲ್ಲಿದ್ದಿದ್ದರೆ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಲಕ್ಷ ರನ್ ಸಿಡಿಸುತ್ತಿದ್ದರು ಎಂದು ಪಾಕ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
ನೇರ ಮಾತುಗಳಿಂದ ಹೆಚ್ಚು ಖ್ಯಾತಿಯಾಗಿರುವ ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯೆಬ್ ಅಖ್ತರ್, ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಜೊತೆಗಿನ ಚಾಟ್ ಸೆಷನ್ ವೇಳೆ ಈ ರೀತಿಯಾಗಿ ಹೇಳಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜಾರಿಯಲ್ಲಿರುವ ಡಿಆರ್ಎಸ್ ನಿಯಮಗಳು ಬ್ಯಾಟರ್ಗಳಿಗೆ ಹೆಚ್ಚು ಅನುಕೂಲವಾಗಿವೆ. ಈ ನಿಯಮ ನಮ್ಮ ಕಾಲದಲ್ಲಿ ಇದ್ದಿದ್ದರೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 1 ಲಕ್ಷ ರನ್ ಸಿಡಿಸುತ್ತಿದ್ದರು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
![Akhtar on ICC DRS](https://etvbharatimages.akamaized.net/etvbharat/prod-images/14318225_wdfdfdfd.jpg)
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಐಸಿಸಿ ನಿಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅಖ್ತರ್, ಇತ್ತೀಚಿನ ದಿನಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗ್ತಿದ್ದು, ಒಂದೇ ಇನ್ನಿಂಗ್ಸ್ನಲ್ಲಿ ಮೂರು ಸಲ ರಿವ್ಯೂವ್ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ಈ ರೀತಿಯ ರಿವ್ಯೂವ್ ಸಚಿನ್ ಕಾಲದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಇನ್ನೂ ಹೆಚ್ಚಿನ ರನ್ ಗಳಿಸಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್, ವಾಸೀಂ ಅಕ್ರಂ, ವಖಾರ್ ಯೂನಿಸ್ ಜೊತೆಗೆ ಶೇನ್ ವಾರ್ನ್ ಮತ್ತು ಶೋಯೆಬ್ ಅಖ್ತರ್ ಬೌಲಿಂಗ್ ಎದುರಿಸಿದ್ದಾರೆ. ಇದರ ಜೊತೆಗೆ ಇಂದಿನ ತಲೆಮಾರಿನ ಬೌಲರ್ಗಳನ್ನು ಅವರು ಎದುರಿಸಿದ್ದು, ಅವರೊಬ್ಬ ಕಠಿಣ ಬ್ಯಾಟರ್ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿರುವ ರವಿಶಾಸ್ತ್ರಿ, ಬೌಲರ್ಗಳ ಪರವಾಗಿ ಇದೀಗ ಕಠಿಣ ನಿಯಮ ಸ್ಥಾಪಿಸಲು ಒಂದೇ ಓವರ್ನಲ್ಲಿ ಎರಡಕ್ಕಿಂತಲೂ ಹೆಚ್ಚಿನ ಬೌನ್ಸರ್ ಎಸೆಯುವ ಅವಕಾಶ ನೀಡಬೇಕು. ಈ ರೀತಿ ಮಾಡುವುದರಿಂದ ಆಟ ಮತ್ತಷ್ಟು ರೋಮಾಂಚನಕಾರಿಯಾಗುತ್ತದೆ ಎಂದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ