ETV Bharat / sports

ಕೊಹ್ಲಿ ಸಾಧನೆ ಯುವ ಕ್ರೀಡಾಪಟುಗಳಿಗೆ ನಿಜಕ್ಕೂ ಸ್ಪೂರ್ತಿ: ಸಚಿನ್​ ತೆಂಡೂಲ್ಕರ್​ ಗುಣಗಾನ - ವಿರಾಟ್​ ಬಗ್ಗೆ ಸಚಿನ್​ ಮಾತು

ಬ್ಯಾಟಿಂಗ್​ ಕಿಂಗ್ ಕೊಹ್ಲಿ ತಮ್ಮ ಟೆಸ್ಟ್​ ಬದುಕಿನ 100ನೇ ಪಂದ್ಯಕ್ಕೆ ಸಿದ್ಧರಾಗಿದ್ದಾರೆ. ಅವರ ಈ ಸಾಧನೆಗೆ ಕ್ರೀಡಾಲೋಕ ಬಹುಪರಾಕ್​ ಹೇಳಿದೆ. ಅಂತೆಯೇ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಕೂಡ ವಿರಾಟ್​ ಕೊಹ್ಲಿಯ ಸಾಧನೆ ಕೊಂಡಾಡಿದ್ದಾರೆ. 'ವಿರಾಟ್​ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ' ಎಂದು ಬಣ್ಣಿಸಿದ್ದಾರೆ.

tendulkar
ಸಚಿನ್​ ತೆಂಡೂಲ್ಕರ್​
author img

By

Published : Mar 3, 2022, 11:47 AM IST

ನವದೆಹಲಿ: ಬ್ಯಾಟಿಂಗ್​ ಕಿಂಗ್ ಕೊಹ್ಲಿ ತಮ್ಮ ಟೆಸ್ಟ್​ ಬದುಕಿನ 100ನೇ ಪಂದ್ಯಕ್ಕೆ ಸಿದ್ಧರಾಗಿದ್ದಾರೆ. ಅವರ ಈ ಸಾಧನೆಗೆ ಕ್ರೀಡಾಲೋಕ ಬಹುಪರಾಕ್​ ಹೇಳಿದೆ. ಅಂತೆಯೇ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಕೂಡ ವಿರಾಟ್​ ಕೊಹ್ಲಿಯ ಸಾಧನೆ ಕೊಂಡಾಡಿದ್ದಾರೆ. 'ವಿರಾಟ್​ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ' ಎಂದು ಬಣ್ಣಿಸಿದ್ದಾರೆ.

ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್​ ಜೊತೆಗಿನ ಕ್ಷಣಗಳನ್ನು ನೆನಪಿಸಿಕೊಂಡ ಸಚಿನ್​, 2007- 08ರಲ್ಲಿ ಮಲೇಷ್ಯಾದಲ್ಲಿ ಅಂಡರ್​-19 ಕ್ರಿಕೆಟ್​ನಲ್ಲಿ ನೀವು ತೋರಿದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದಲ್ಲಿದ್ದ ನಮಗೆ ತಿಳಿಯಿತು. 'ಇವನು ಒಬ್ಬ ಗಮನಾರ್ಹ ಆಟಗಾರ, ಅದ್ಭುತವಾಗಿ ಆಡುತ್ತಾನೆ' ಎಂದು ನಮ್ಮ ಕೆಲ ಆಟಗಾರರು ನಿಮ್ಮ ಬಗ್ಗೆ ಚರ್ಚಿಸಿದರು. ಅದರ ಬಳಿಕ ನಾನು- ವಿರಾಟ್​ ಭಾರತಕ್ಕಾಗಿ ಆಡಿದ್ದೇವೆ. ಅವರು ಕ್ರಿಕೆಟ್​ ಮೈದಾನದಲ್ಲಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ, ಭಾರತ ತಂಡದ ಪ್ರಮುಖ ಆಟಗಾರ ಎಂಬುದಕ್ಕೆ ಅವರ ದಾಖಲೆಗಳೇ ಸಾಕ್ಷಿ. ಅವರಲ್ಲಿ ಇನ್ನೂ ಹಲವು ವರ್ಷಗಳ ಕ್ರಿಕೆಟ್​ ಬಾಕಿ ಇದೆ. ಭಾರತೀಯ ಕ್ರಿಕೆಟ್​ಗೆ ಅವರ ಅಗತ್ಯವಿದೆ ಎಂದು ಹೇಳಿದ್ದಾರೆ.

ಫಿಟ್ನೆಸ್​ ಬಗ್ಗೆ ಮೆಚ್ಚುಗೆ: ವಿರಾಟ್​ ಕೊಹ್ಲಿಯ ಫಿಟ್ನೆಸ್​ ಬಗ್ಗೆ ಮಾತನಾಡಿದ ಸಚಿನ್​, ವಿಶ್ವದ ಸದೃಢ ಕ್ರಿಕೆಟಿಗರಲ್ಲಿ ಕೊಹ್ಲಿ ಒಬ್ಬರು. ಓರ್ವ ಕ್ರೀಡಾಳುವಾಗಿ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ವಿರಾಟ್​ ತೋರಿಸಿಕೊಟ್ಟಿದ್ದಾರೆ. ಇದು ಅನೇಕರಿಗೆ ಸ್ಪೂರ್ತಿ ಕೂಡ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಘಟನೆ ನೆನಪಿಸಿಕೊಂಡ ಸಚಿನ್​, 2011 ರಲ್ಲಿ ನಾವು ಕ್ಯಾನ್​ಬೆರಾದಲ್ಲಿದ್ದಾಗ ಹೋಟೆಲ್​ ಒಂದಕ್ಕೆ ಹೋಗಿ ಊಟ ಮುಗಿಸಿಕೊಂಡು ವಾಪಸ್​ ಬರುತ್ತಿದ್ದಾಗ ವಿರಾಟ್​, 'ಸರ್​ ಇನ್ನು ಹೆಚ್ಚಾಯಿತು. ದೈಹಿಕ ಕ್ಷಮತೆಯ ಕಡೆಗೆ ಗಮನ ನೀಡುವೆ' ಎಂದರು. ಅಂದಿನಿಂದಲೂ ವಿರಾಟ್​ ಎಂದೂ ಫಿಟ್ನೆಸ್​ನಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮೊಹಾಲಿಯಲ್ಲಿ ಶುಕ್ರವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ವಿರಾಟ್​ ಕೊಹ್ಲಿಗೆ 100 ನೇ ಟೆಸ್ಟ್ ಪಂದ್ಯವಾಗಿದೆ. ಈ ವಿಶೇಷ ಪಂದ್ಯಕ್ಕೆ ಬಿಸಿಸಿಐ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ.

ಓದಿ: ವಿರಾಟ್ 100ನೇ ಟೆಸ್ಟ್​: ಕ್ರಿಕೆಟ್‌ ದಿಗ್ಗಜರಿಂದ ಕೊಹ್ಲಿ ಗುಣಗಾನ, ಶುಭಹಾರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.