ETV Bharat / sports

ಸೋಲು ಒಗ್ಗಟ್ಟಾಗಿ ಹಿಮ್ಮೆಟ್ಟಿಸಿ: ಭಾರತದ ಬ್ಲೂ ಬಾಯ್ಸ್​ಗೆ ಧೈರ್ಯ ನೀಡಿದ ಸಚಿನ್ ತೆಂಡೂಲ್ಕರ್ - ICC T20 World Cup

ಕ್ರೀಡೆಯಲ್ಲಿ ಈ ರೀತಿಯ ಏರಿಳಿತಗಳು ಸಹಜ. ನಾವು ಇದರಲ್ಲಿ ಒಟ್ಟಾಗಿರಬೇಕು ಎಂದು ಸಚಿನ್ ತೆಂಡೂಲ್ಕರ್ ಭಾರತಕ್ಕೆ ಧೈರ್ಯ ತುಂಬಿದ್ದಾರೆ.

Sachin Tendulkar backs Team India after T20 WC disappointment

author img

By

Published : Nov 12, 2022, 8:12 PM IST

ಮುಂಬೈ (ಮಹಾರಾಷ್ಟ್ರ): ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯವಾಗಿ ಸೋತ ಟೀಂ ಇಂಡಿಯಾ ತಂಡಕ್ಕೆ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಧೈರ್ಯ ತುಂಬಿದ್ದಾರೆ. ಸೋಲಿನ ಬಳಿಕ ಭಾರತದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಅವರು, ಬ್ಲೂ ಬಾಯ್ಸ್​ಗೆ ಧೃತಿಗೆಡದಂತೆ ಅಭಯ ನೀಡಿದ್ದಾರೆ.

ಸೋಲು ತುಂಬಾ ನಿರಾಶಾದಾಯಕ. ಈ ಸೋಲಿನ ಆಧಾರದ ಮೇಲೆ ತಂಡದ ಸಾಮರ್ಥ್ಯವನ್ನು ನಿರ್ಧರಿಸಬಾರದು. ಯಾವುದೇ ಆಟವಾದರೂ ಸೋಲು - ಗೆಲವು ಸಹಜ ಎಂದು ಟೀಂ ಇಂಡಿಯಾ ಬಗ್ಗೆ ಟೀಕೆ ಮಾಡುತ್ತಿರುವ ಟೀಕಾಕಾರರಿಗೆ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸೋಲಿನ ಹತಾಶೆಯಲ್ಲಿರುವ ತಂಡಕ್ಕೆ ಧೈರ್ಯದ ಮಾತುಗಳನ್ನು ಸಹ ಆಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಸೋಲು ತುಂಬಾ ನಿರಾಶಾದಾಯಕವಾಗಿದೆ. ಅಡಿಲೇಡ್ ಓವಲ್‌ ಮೈದಾನದಲ್ಲಿ 168 ರನ್‌ಗಳ ಗುರಿ ಸಾಕಾಗಲಿಲ್ಲ, ಏಕೆಂದರೆ ಮೈದಾನದ ಆಕಾರ ಹೀಗಿದೆ. ಗಾತ್ರದ ಬೌಂಡರಿ ಚಿಕ್ಕದಾಗಿದೆ. 190 ಮತ್ತು ಅದರ ಹತ್ತಿರ ಸ್ಕೋರ್ ನೀಡಿದ್ದರೆ ಚೆನ್ನಾಗಿರುತ್ತಿತ್ತು. ದೊಡ್ಡ ಮೊತ್ತವನ್ನು ಕಲೆ ಹಾಕದಿರುವುದು ಮತ್ತು ನಮಗೆ ವಿಕೆಟ್ ಪಡೆಯಲು ಸಾಧ್ಯವಾಗದಿರುವುದು ದುರಂತ. ಎರಡಲ್ಲೂ ನಾವು ವಿಫಲರಾಗಿದ್ದೇವೆ. ಭಾರತಕ್ಕೆ 10 ವಿಕೆಟ್‌ಗಳ ಸೋಲು ನೀಡಿದೆ ಅಂದರೆ, ಇಂಗ್ಲೆಂಡ್ ಶಕ್ತಿಯುತ ತಂಡವಾಗಿದೆ ಎಂದರ್ಥ ಎಂದು ಹೇಳಿದ್ದಾರೆ.

ಕೇವಲ ಒಂದು ಪಂದ್ಯದ ಆಧಾರದ ಮೇಲೆ ಭಾರತ ತಂಡದ ಪ್ರದರ್ಶನವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಟಿ-20 ಕ್ರಿಕೆಟ್‌ನಲ್ಲಿ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇದು ರಾತ್ರೋರಾತ್ರಿ ಪಡೆದ ಸ್ಥಾನವಲ್ಲ. ಇಲ್ಲಿಗೆ ತಲುಪಲು ದೀರ್ಘಕಾಲದವರೆಗೆ ಉತ್ತಮ ಕ್ರಿಕೆಟ್ ಆಡಬೇಕು. ಆಟಗಾರರು ಸಹ ವಿಕೆಟ್ ನೀಡುವ ಮೂಲಕ ವಿಫಲರಾಗಲು ಬಯಸಲಿಲ್ಲ.

ಕ್ರೀಡೆಯಲ್ಲಿ ಈ ರೀತಿಯ ಏರಿಳಿತಗಳು ಸಹಜ. ನಾವು ಇದರಲ್ಲಿ ಒಟ್ಟಾಗಿರಬೇಕು ಎಂದು ಟೀಂ ಇಂಡಿಯಾಗೆ ಧೈರ್ಯ ತುಂಬಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಹೊರಬಿದ್ದ ನಂತರ ಅವರ ಹೇಳಿಕೆಗಳನ್ನು ಕೇಳಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಅಡಿಲೇಡ್‌ನಲ್ಲಿ ನಡೆದ T20 ವಿಶ್ವಕಪ್‌ನ 2ನೇ ಸೆಮಿಫೈನಲ್‌ನಲ್ಲಿ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತು. ಈ ಪ್ರಮಾಣದ ಸೋಲಿನ ಬಳಿಕ ತಂಡದ ಬಗ್ಗೆ ಎಲ್ಲೆಡೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ತಂಡದ ಹಿರಿಯ ಆಟಗಾರರಿಗೆ ಕೋಟ್​ ನೀಡುವ ಮತ್ತು ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿಯಬೇಕು ಎಂಬ ಮಾತುಗಳು ಚಾಲ್ತಿಯಲ್ಲಿವೆ. ಈ ಟೀಕೆಗಳ ಬಳಿಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಧೈರ್ಯ ತುಂಬಿದ್ದು, ಹಲವರು ಪುಟಿದೇಳುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಕಳಚಿತೇ ಸಾನಿಯಾ ಶೋಯೆಬ್​ರ 12 ವರ್ಷಗಳ ಪ್ರೀತಿಯಬಂಧ..ಭಾರತ ಪಾಕ್​ ಆಟಗಾರರ ಮಧ್ಯೆ ಪ್ರೀತಿ ಬೆಳೆದಿದ್ದೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.