ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಚೊಚ್ಚಲ ಐದು ವಿಕೆಟ್ ಪಡೆದುಕೊಂಡಿದ್ದಾರೆ.
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ದಕ್ಷಿಣ ಆಫ್ರಿಕಾ ಬ್ಯಾಟರ್ಗಳನ್ನು ಕಾಡಿದ ಶಾರ್ದೂಲ್, ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 202 ರನ್ಗಳಿಗೆ ಆಲೌಟ್ ಆಗಿದೆ. ಬೃಹತ್ ರನ್ ಕಲೆ ಹಾಕುವ ದಕ್ಷಿಣ ಆಫ್ರಿಕಾದ ಯೋಜನೆಗೆ ಶಾರ್ದೂಲ್ ಠಾಕೂರ್ ತಣ್ಣೀರೆರಚಿದ್ದು, ಈಗಾಗಲೇ 5 ವಿಕೆಟ್ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ಯಾಪ್ಟನ್ ಎಲ್ಗರ್(28), ಪಿಟರ್ಸನ್(68), ದುಸ್ಸೆನ್(1), ಬುವಂ(51), ಕೈಲೆ(21) ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಒಂದೇ ಕಾಲಲ್ಲಿ 750 ಕಿಮೀ ದೂರ ಸಾಗಿಬಂದು ಅಯ್ಯಪ್ಪನ ದರ್ಶನ ಪಡೆದ ವಿಶೇಷಚೇತನ!
- ವಾಂಡರರ್ಸ್ ಮೈದಾನದಲ್ಲಿ 5 ವಿಕೆಟ್ ಪಡೆದ ಭಾರತೀಯರು
6/53 ಅನಿಲ್ ಕುಂಬ್ಳೆ 1992/93
5/104 ಜಾವಗಲ್ ಶ್ರೀನಾಥ್ 1996/97
5/40 ಎಸ್.ಶ್ರೀಶಾಂತ್ 2006/07
5/54 ಜಸ್ಪ್ರೀತ್ ಬುಮ್ರಾ 2017/18
5/29 ಮೊಹಮ್ಮದ್ ಶಮಿ 2017/18
5/37 ಶಾರ್ದೂಲ್ ಠಾಕೂರ್ 2021/22
ಟೀ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 195 ರನ್ಗಳಿಕೆ ಮಾಡಿ 7 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 7 ರನ್ಗಳ ಹಿನ್ನಡೆಯಲ್ಲಿದೆ.