ಕೇಪ್ಟೌನ್: ಕೀಗನ್ ಪೀಟರ್ಸನ್ ಅವರ ಅಜೇಯ 40 ರನ್ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 100 ರನ್ಗಳಿಸಿದೆ. ಇನ್ನು ಆತಿಥೇಯ ತಂಡದ ಕೈಯಲ್ಲಿ 7 ವಿಕೆಟ್ಗಳು ಬಾಕಿಯಿದ್ದು ಇನ್ನೂ 123 ರನ್ಗಳ ಹಿನ್ನಡೆ ಹೊಂದಿದೆ.
ಮೊದಲ ದಿನ ಭಾರತವನ್ನು 223 ರನ್ಗಳಿಗೆ ಕಟ್ಟಿಹಾಕಿದ ಆತಿಥೇಯರು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 17 ರನ್ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದರು. ಇಂದು ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆ ಎರಡನೇ ದಿನದ 2ನೇ ಎಸೆತದಲ್ಲಿ ಮಾರ್ಕ್ರಮ್ ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್ನಲ್ಲಿ ಮಾರ್ಕ್ರಮ್ ಕ್ಲೀನ್ ಬೌಲ್ಡ್ ಆದರು.
-
South Africa go to lunch at 100/3 with the partnership between Keegan Petersen and Rassie van der Dussen reviving them 👌🏻
— ICC (@ICC) January 12, 2022 " class="align-text-top noRightClick twitterSection" data="
Watch #SAvIND live on https://t.co/CPDKNxoJ9v (in select regions)#WTC23 | https://t.co/Wbb1FE1P6t pic.twitter.com/ifhJ1X87uU
">South Africa go to lunch at 100/3 with the partnership between Keegan Petersen and Rassie van der Dussen reviving them 👌🏻
— ICC (@ICC) January 12, 2022
Watch #SAvIND live on https://t.co/CPDKNxoJ9v (in select regions)#WTC23 | https://t.co/Wbb1FE1P6t pic.twitter.com/ifhJ1X87uUSouth Africa go to lunch at 100/3 with the partnership between Keegan Petersen and Rassie van der Dussen reviving them 👌🏻
— ICC (@ICC) January 12, 2022
Watch #SAvIND live on https://t.co/CPDKNxoJ9v (in select regions)#WTC23 | https://t.co/Wbb1FE1P6t pic.twitter.com/ifhJ1X87uU
ನೈಟ್ ವಾಚ್ಮನ್ ಆಗಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಕೇಶವ್ ಮಹಾರಾಜ್ 45 ಎಸೆತಗಳಲ್ಲಿ 4 ಬೌಂಡರಿ ಸಹಿತ 25 ರನ್ಗಳಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
ಆದರೆ, 4ನೇ ವಿಕೆಟ್ಗೆ ಜೊತೆಯಾದ ಕೀಗನ್ ಪೀಟರ್ಸನ್ ಮತ್ತು ವ್ಯಾನ್ ಡರ್ ಡಸೆನ್ 55 ರನ್ಗಳ ಜೊತೆಯಾಟ ನೀಡಿ ಕುಸಿಯುತ್ತಿದ್ದ ತಂಡಕ್ಕೆ ಚೇತರಿಕೆ ನೀಡಿದ್ದಾರೆ. ಪೀಟರ್ಸನ್ 86 ಎಸೆತಗಳಲ್ಲಿ 40 ಮತ್ತು ಡಸೆನ್ 32 ಎಸೆತಗಳಲ್ಲಿ 17 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 16ಕ್ಕೆ 2 ಮತ್ತು ಉಮೇಶ್ ಯಾದವ್ 29ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ವಿರಾಟ್ ಕೊಹ್ಲಿ ಅವರ ಏಕಾಂಗಿ ಆಟದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 77.3 ಓವರ್ಗಳಲ್ಲಿ ಆಲೌಟ್ ಆಗಿತ್ತು.
ಇದನ್ನೂ ಓದಿ: India vs SA: ವಿರಾಟ್ ಕೊಹ್ಲಿ ಅರ್ಧಶತಕ, ಮೊದಲ ಇನ್ನಿಂಗ್ಸ್ನಲ್ಲಿ ಭಾರತ 223ಕ್ಕೆ ಆಲೌಟ್