ETV Bharat / sports

ಆರ್​ಸಿಬಿ ನಾಯಕ ಯಾರು? 'ಮಾರ್ಚ್​ 12ಕ್ಕೆ ಉತ್ತರ ಸಿಗಲಿದೆ'- ಕುತೂಹಲ ಹೆಚ್ಚಿಸಿದ ಫ್ರಾಂಚೈಸಿ

ಈಗಾಗಲೇ 2022 ಐಪಿಎಲ್​ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್​ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್​ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

Royal Challengers Bangalore likely to announce new captain on march 12
ಆರ್​ಸಿಬಿ ನಾಯಕ
author img

By

Published : Mar 8, 2022, 4:48 PM IST

ಬೆಂಗಳೂರು: ನಾಯಕನ ಹುಡುಕಾಟದಲ್ಲಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರ್ಚ್​ 12ರಂದು ದೊಡ್ಡ ಘೋಷಣೆ ಮಾಡುವುದಾಗಿ ತಿಳಿಸಿದ್ದು ಅಭಿಮಾನಿಗಳ ಕುತೂಹಲವನ್ನು ದ್ವಿಗುಣಗೊಳಿಸಿದೆ.

ಈಗಾಗಲೇ 2022 ಐಪಿಎಲ್​ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್​ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್​ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ.

ಮೂಲಗಳ ಪ್ರಕಾರ, ಅಂದೇ ಫ್ರಾಂಚೈಸಿ ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್​ರನ್ನು ನಾಯಕನಾಗಿ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ಮಾರ್ಚ್​ 12, ಸಂಜೆ 4 ಗಂಟೆಗೆ ಆರ್​ಸಿಬಿ ಮಾಧ್ಯಮ ಗೋಷ್ಠಿ ಕರೆದಿದೆ. ನಾಯಕತ್ವ ಸ್ಥಾನಕ್ಕೆ ಮ್ಯಾಕ್ಸ್​ವೆಲ್​ ನೆಚ್ಚಿನ ಆಯ್ಕೆಯಾಗಿದ್ದರೂ ಕೂಡಾ ಫ್ರಾಂಚೈಸಿ ಡುಪ್ಲೆಸಿಸ್​ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ ಎನ್ನಲಾಗಿದೆ. ಇವರಲ್ಲದೆ ತಂಡದಲ್ಲಿ ದಿನೇಶ್ ಕಾರ್ತಿಕ್ ಮತ್ತೊಬ್ಬ ಅನುಭವಿ ಕ್ರಿಕೆಟಗರಾಗಿದ್ದು, ಆರ್​ಸಿಬಿ ನಾಯಕನನ್ನಾಗಿ ಮಾಡಿದರೂ ಆಶ್ಚರ್ಯವೇನಿಲ್ಲ.

ಮಾರ್ಚ್​ 12 ರಂದು ಹೊಸ ನಾಯಕನ ಘೋಷಣೆ ಜೊತೆಗೆ 2022ರ ಐಪಿಎಲ್​ಗೆ ಹೊಸ ಜರ್ಸಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ:ವಿಶೇಷ ಚೇತನ ವ್ಯಕ್ತಿಗೆ ಜೆರ್ಸಿ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.