ಪುಣೆ: ಆರ್ಸಿಬಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ರಿಯಾನ್ ಪರಾಗ್(56) ಅವರು ಅರ್ಧಶತಕದ ಹೊರತಾಗಿಯೂ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 144 ರನ್ಗಳಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟಿದ್ದ ರಾಯಲ್ಸ್ ತಂಡ ಕೇವಲ 33 ರನ್ಗಳಾಗುವಷ್ಟರಲ್ಲೇ ಪ್ರಮುಖ ಮೂರು ಕಳೆದುಕೊಂಡಿತು. ದೇವದತ್ ಪಡಿಕ್ಕಲ್(7), ರವಿಚಂದ್ರನ್ ಅಶ್ವಿನ್(17) ಮತ್ತು ಕಳೆದ ಪಂದ್ಯದ ಶತಕ ವೀರ ಜಾಸ್ ಬಟ್ಲರ್(8) ಪವರ್ ಪ್ಲೇ ಮುಗಿಯುವುದರೊಳಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸಂಜು ಸಾಮ್ಸನ್ ಅಬ್ಬರದ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು, ಅವರು 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 27 ರನ್ಗಳಿಸಿ ಹಸರಂಗ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾಗಿ ಬೌಲ್ಡ್ ಆದರು. ಇವರ ಬೆನ್ನಲ್ಲೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದ ಡೇರಿಲ್ ಮಿಚೆಲ್ 24 ಎಸೆತಗಳ್ಲಿ ಒಂದೂ ಬೌಂಡರಿ ಬಾರಿಸದೆ ಕೇವಲ 16 ರನ್ಗಳಿಸಿ ಔಟಾದರು.
ನಂತರ ಬಂದಂತಹ ಬ್ಯಾಟರ್ಗಳಾದ ಹೆಟ್ಮಾಯರ್(3), ಟ್ರೆಂಟ್ ಬೌಲ್ಟ್(5) ಪ್ರಸಿಧ್ ಕೃಷ್ಣ(2) ಬಂದ ವೇಗದಲ್ಲೇ ಪೆವಿಲಿಯನ್ ಸೇರಿಕೊಂಡರು. ಆದರೆ ಆರ್ಸಿಬಿ ಬೆಂಕಿಯಂತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ 20 ವರ್ಷದ ರಿಯಾನ್ ಪರಾಗ್ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 56 ರನ್ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಆರ್ಸಿಬಿ ಪರ ಜಾಶ್ ಹೇಜಲ್ವುಡ್ 17ಕ್ಕೆ2, ವನಿಂಡು ಹಸರಂಗ 23ಕ್ಕೆ2, ಮೊಹಮ್ಮದ್ ಸಿರಾಜ್ 30ಕ್ಕೆ2 ಹಾಗೂ ಹರ್ಷಲ್ ಪಟೇಲ್ 33ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಟಾಸ್ ಅಪ್ ಡೇಟ್: ಇನ್ನು ಈ ಪಂದ್ಯದಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಅನುಜ್ ರಾವತ್ ಅವರನ್ನು ತಂಡದಿಂದ ಹೊರಗಿಟ್ಟು, ರಜತ್ ಪಾಟಿದಾರ್ ಅವರಿಗೆ ಅವಕಾಶ ನೀಡಲಾಗಿದೆ. ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಾಯಲ್ಸ್ ತಂಡದಲ್ಲಿ ಕರುಣ್ ನಾಯರ್ ಬದಲಿಗೆ ಮಿಚೆಲ್ ಮಾರ್ಷ್ ಮತ್ತು ಮೆಕಾಯ್ ಬದಲಿಗೆ ಕುಲದೀಪ್ ಸೇನ್ ಕಣಕ್ಕಿಳಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(WK/c), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಡೆರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (c), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್