ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಂಬೈ ಇಂಡಿಯನ್ಸ್ ನಡುವೆ ಲೀಗ್ನ 19ನೇ ಪಂದ್ಯ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಯಕ್ವದ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಉಭಯ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಮುಂಬೈ ಇಂಡಿಯನ್ಸ್ ಆಡುವ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಟಾಸ್ ನಂತರ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್,"ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಇಂದು ನಾವು ಟಾಸ್ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಕ್ರಿಕೆಟ್ನಲ್ಲಿ ಟಾಸ್ ಪ್ರಮುಖವಾಗುತ್ತದೆ. ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ನೇರ ಫೈನಲ್ ಪ್ರವೇಶಿಸುವ ಉದ್ದೇಶ ಇದೆ ಎಂದು ಹೇಳಿದ್ದಾರೆ.
-
🚨 Toss Update 🚨@mipaltan win the toss and elect to field first against @RCBTweets.
— Women's Premier League (WPL) (@wplt20) March 21, 2023 " class="align-text-top noRightClick twitterSection" data="
Follow the match ▶️ https://t.co/BQoiFCRPhD#TATAWPL | #RCBvMI pic.twitter.com/AfbXXSf7la
">🚨 Toss Update 🚨@mipaltan win the toss and elect to field first against @RCBTweets.
— Women's Premier League (WPL) (@wplt20) March 21, 2023
Follow the match ▶️ https://t.co/BQoiFCRPhD#TATAWPL | #RCBvMI pic.twitter.com/AfbXXSf7la🚨 Toss Update 🚨@mipaltan win the toss and elect to field first against @RCBTweets.
— Women's Premier League (WPL) (@wplt20) March 21, 2023
Follow the match ▶️ https://t.co/BQoiFCRPhD#TATAWPL | #RCBvMI pic.twitter.com/AfbXXSf7la
ಸ್ಮೃತಿ ಮಂಧಾನ ಮಾತನಾಡಿ, "ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ಟಾಸ್ ಗೆಲ್ಲುವ ಬಗ್ಗೆ ಹೆಚ್ಚು ಚರ್ಚೆ ನಡೆದಿರ ಬೇಕು. ಇಂದು ನಾವು ಕೂಡ ಮೊದಲು ಬೌಲಿಂಗ್ ಮಾಡಬೇಕು ಎಂದು ಭಾವಿಸಿದ್ದೆವು. ಏಕೆಂದರೆ ನಾವು ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಚೇಸ್ ಮಾಡಿದ್ದೇವೆ. ಇದು ಒಣ ಪಿಚ್‌ನಂತೆ ಕಾಣುತ್ತಿದೆ ಮತ್ತು ನಮ್ಮ ಸ್ಪಿನ್ನರ್‌ಗಳು ದ್ವಿತೀಯಾರ್ಧದಲ್ಲಿ ಪಿಚ್ನ ಉತ್ತಮ ಸಹಾಯ ಪಡೆಯಬೇಕು" ಎಂದರು
ಸತತ ಎರಡು ಸೋಲು ಕಂಡ ಕೌರ್ ಪಡೆ: ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ಐದು ಪಂದ್ಯದಲ್ಲಿ ಸೋಲನ್ನೇ ಕಾಣದೇ ಕ್ವಾಲಿಫೈ ಆಗಿತ್ತು. ನಂತರ ಆಡಿದ ಎರಡು ಪಂದ್ಯದಲ್ಲಿ ಬ್ಯಾಂಟಿಗ್ ವೈಫಲ್ಯದಿಂದ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತ್ತು. ಯುಪಿ ವಾರಿಯರ್ಸ್ ಎದುರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಮುಂಬೈ ಅಗ್ರಸ್ಥಾನವನ್ನು ಕಳೆದುಕೊಂಡಿತು. ಇಂದು ಆರ್ಸಿಬಿ ವಿರುದ್ಧ ಗೆದ್ದಲ್ಲಿ ಮತ್ತೆ ಅಗ್ರ ಪಟ್ಟ ದೊರೆಯುತ್ತದೆ. ಆದರೆ, ಡೆಲ್ಲಿ ರಾತ್ರಿಯ ಪಂದ್ಯದಲ್ಲಿ ಯುಪಿಯನ್ನು ಮಣಿಸಿದರೆ ರನ್ ರೇಟ್ ಆಧಾರದಲ್ಲಿ ಯಾವ ತಂಡ ನೇರ ಫೈನಲ್ ಪ್ರವೇಶಿಸುತ್ತದೆ ಎಂಬುದು ತಿಳಿಯಲಿದೆ.
ಆರ್ಸಿಬಿ ಕೊನೆಯ ಎರಡು ಪಂದ್ಯದಲ್ಲಿ ಗೆಲುವು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಐದು ಪಂದ್ಯದಲ್ಲಿ ಸಂಪೂರ್ಣ ಸೋತು ನಂತರ ಗೆಲುವಿನ ಟ್ರ್ಯಾಕ್ಗೆ ಮರಳಿತು. ಕೊನೆಯ ಎರಡು ಪಂದ್ಯ ಗೆದ್ದ, ಆರ್ಸಿಬಿ 4 ಅಂಕದಿಂದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು.
ಇದನ್ನೂ ಓದಿ: ನೇರ ಫೈನಲ್ ಟಿಕೆಟ್ ಯಾರಿಗೆ? ಮುಂಬೈ-ಡೆಲ್ಲಿ ನಡುವೆ ಅಗ್ರಸ್ಥಾನಕ್ಕಿಂದು ಫೈಟ್