ಮುಂಬೈ: ರೋಹಿತ್ ಶರ್ಮಾ ನನ್ನ ಮೇಲೆ ಅಚಲವಾದ ನಂಬಿಕೆಯಿಟ್ಟಿದ್ದರು. ತಾವೂ ಮುಂಬೈ ಇಂಡಿಯನ್ಸ್ಗೆ ಹೊಸಬರಾಗಿದ್ದಾಗಲೂ ಪ್ರಮುಖ ಓವರ್ಗಳನ್ನು ಬೌಲಿಂಗ್ ಮಾಡಲು ನನಗೆ ನೀಡುತ್ತಿದ್ದರು ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.
ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾವಗಿರುವ ಬುಮ್ರಾ ಇಂದು ವಿಶ್ವದ ಪ್ರೀಮಿಯರ್ ಬೌಲಿಂಗ್ ಆಗಿರುವುದಕ್ಕೆ ರೋಹಿತ್ ಶರ್ಮಾ ನಿರ್ಣಾಯಕ ಪಾತ್ರವಹಿಸಿದ್ದಾರೆ. ನಾನು ಮುಂಬೈ ತಂಡಕ್ಕೆ ಬಂದಂತಹ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ನಾಯಕರಾಗಿದ್ದರು. ಆ ವೇಳೆ ನನಗೆ ಖಾಯಂ ಆಗಿ ಅವಕಾಶ ಸಿಗುತ್ತಿರಲಿಲ್ಲ. ನಾನು ರೋಹಿತ್ ನಾಯಕತ್ವ ವಹಿಸಿಕೊಂಡ ನಂತರ ಸಾಕಷ್ಟು ಆಡಲಾರಂಭಿಸಿದೆ. ಅವರಿಗೆ ನನ್ನ ಮೇಲೆ ವಿಪರೀತ ವಿಶ್ವಾಸವಿದೆ, ಜೊತೆಗೆ ನನ್ನಲ್ಲೂ ತುಂಬಾ ವಿಶ್ವಾಸವನ್ನು ತುಂಬಿಸಿದ್ದಾರೆ" ಎಂದು ಬುಮ್ರಾ ಭಾರತೀಯ ಹಿರಿಯ ಸ್ಪಿನ್ನರ್ ಅಶ್ವಿನ್ ಅವರ ಡಿಆರ್ಎಸ್ ವಿತ್ ಆ್ಯಶ್ ಯೂಟ್ಯೂಬ್ ಚಾನೆಲ್ನ ಸಂವಾದದ ವೇಳೆ ತಿಳಿಸಿದ್ದಾರೆ.
ರೋಹಿತ್ ನಾನು ನೆಟ್ಸ್ನಲ್ಲಿ ಬೌಲಿಂಗ್ ಮಾಡುವುದನ್ನು ನೋಡುತ್ತಿದ್ದರು, ಅವರು ನಾನು ಯಾವ ರೀತಿ ಕೌಶಲ್ಯಗಳನ್ನು ಹೊಂದಿದ್ದೇನೆ ಎನ್ನುವುದನ್ನು ಅವರು ಕಂಡಿದ್ದರು ಮತ್ತು ಹಾಗಾಗಿ ಸದಾ ನನ್ನ ಬೆನ್ನಿಗೆ ನಿಲ್ಲುತ್ತಿದ್ದರು. ಆರಂಭದ ಹಂತದಲ್ಲಿ ನನಗೆ ಅವರು ನಿನ್ನ ಮೇಲೆ ನೀನು ನಂಬಿಕೆಯಿಡು ಎನ್ನುತ್ತಿದ್ದರು. ನನ್ನ ಮೇಲೆ ಅತಿಯಾದ ನಂಬಿಕೆಯಿದ್ದರಿಂದ ನಿರ್ಣಾಯಕ ಓವರ್ಗಳನ್ನು ಬೌಲಿಂಗ್ ಮಾಡುವುದಕ್ಕೆ ನನಗೆ ನೀಡುತ್ತಿದ್ದರು. ಅವರ ನಂಬಿಕೆ ನಾನು ಆ ಕೆಲಸವನ್ನು ಮಾಡಬಲ್ಲೆ ಎನ್ನುವ ವಿಶ್ವಾಸವನ್ನು ಮೂಡಿಸುತ್ತಿತ್ತು" ಎಂದು ಯಾರ್ಕರ್ ಕಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ರಣಜಿ ಟ್ರೋಫಿ: ಮಗಳ ಅಂತ್ಯಕ್ರಿಯೆ ಮುಗಿಸಿ ಬಂದು ಶತಕ ಬಾರಿಸಿದ ಬರೋಡಾ ಕ್ರಿಕೆಟಿಗ