ETV Bharat / sports

2021ರ ಟಾಪ್ ಸ್ಕೋರರ್:​ ಟೆಸ್ಟ್, ಟಿ-20ಯಲ್ಲಿ ರೋಹಿತ್, ಏಕದಿನದಲ್ಲಿ ಶಿಖರ್ ಧವನ್​ಗೆ ಅಗ್ರಸ್ಥಾನ - ರಿಷಭ್ ಪಂತ್

ರೋಹಿತ್ ಶರ್ಮಾ 11 ಟೆಸ್ಟ್​ ಪಂದ್ಯಗಳಲ್ಲಿ 906 ರನ್​ಗಳಿಸಿ 11 ಟಿ-20 ಪಂದ್ಯಗಳಿಂದ 424 ರನ್​ಗಳಿಸಿ ಭಾರತದ ಪರ 2021ರಲ್ಲಿ ಹೆಚ್ಚು ರನ್​ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿದ್ದಾರೆ.

Rohit sharma
ರೋಹಿತ್ ಶರ್ಮಾ
author img

By

Published : Dec 29, 2021, 9:47 PM IST

ಮುಂಬೈ: ಭಾರತ ತಂಡದ ಸೀಮತ ಓವರ್​ಗಳ ನಾಯಕ ರೋಹಿತ್ ಶರ್ಮಾ 2021ರಲ್ಲಿ ಟಿ-20 ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಅಧಿಕ ರನ್​ ಗಳಿಸಿದ ಭಾರತದ ಬ್ಯಾಟರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ ಅನುಭವಿ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ ಹೆಚ್ಚು ರನ್​ಗಳಿಸಿದ್ದಾರೆ.

2021ರಲ್ಲಿ ರೋಹಿತ್ ಶರ್ಮಾ 11 ಪಂದ್ಯಗಳಲ್ಲಿ 906 ರನ್​ಗಳಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇವರ ನಂತರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 12 ಪಂದ್ಯಗಳಿಂದ 748, ಚೇತೇಶ್ವರ್​ ಪೂಜಾರ 14 ಪಂದ್ಯಗಳಿಂದ 702, ವಿರಾಟ್​ ಕೊಹ್ಲಿ 11 ಪಂದ್ಯಗಳಿಂದ 536 ರನ್​ ಮತ್ತು ಅಜಿಂಕ್ಯ ರಹಾನೆ 13 ಪಂದ್ಯಗಳಿಂದ 478 ರನ್​ಗಳಿಸಿದ್ದಾರೆ.

ಕನ್ನಡಿಗ ಕೆಎಲ್ ರಾಹುಲ್​ ಕೇವಲ 5 ಪಂದ್ಯಗಳಿಂದ 461 ರನ್​ಗಳಿಸಿ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ರೋಹಿತ್ ಶರ್ಮಾ(2) ಜೊತೆಗೆ ಹೆಚ್ಚು ಶತಕ ಸಿಡಿಸದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಟಿ-20 ಕ್ರಿಕೆಟ್​ನಲ್ಲೂ ರೋಹಿತ್ ಶರ್ಮಾ ಗರಿಷ್ಠ ಸ್ಕೋರರ್​

ರೋಹಿತ್ ಶರ್ಮಾ 2021ರಲ್ಲಿ 11 ಟಿ-20 ಪಂದ್ಯಗಳನ್ನಾಡಿದ್ದು, 424 ರನ್​ಗಳಿಸಿದ್ದಾರೆ. 2ನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಇದ್ದು, 10 ಪಂದ್ಯಗಳಿಂದ 299, ರಾಹುಲ್ 11 ಪಂದ್ಯಗಳಿಂದ 289, ಸೂರ್ಯಕುಮಾರ್ ಯಾದವ್​ 244 ರನ್​ ಹಾಗೂ ಪಂತ್ 13 ಪಂದ್ಯಗಳಿಂದ 213 ರನ್​ಗಳಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಶಿಖರ್ ಧವನ್

2021ರಲ್ಲಿ ಭಾರತ ತಂಡ ಕೇವಲ 6 ಏಕದಿನ ಪಂದ್ಯಗಳನ್ನಾಡಿದೆ. ಅದರಲ್ಲಿ 3 ಪಂದ್ಯಗಳನ್ನು ಭಾರತ ದ್ವಿತೀಯ ದರ್ಜೆ ತಂಡ ಶ್ರೀಲಂಕಾ ಪ್ರವಾಸದಲ್ಲಿ ಆಡಿದೆ. ಉಳಿದ ಮೂರು ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಮಾರ್ಚ್​ನಲ್ಲಿ ಆಡಿತ್ತು. 6 ಪಂದ್ಯಗಳಲ್ಲಿ ಆಡಿದ್ದ ಶಿಖರ್​ ಧವನ್​ 297 ರನ್​ಗಳಿಸಿದ್ದಾರೆ. 3 ಪಂದ್ಯಗಳನ್ನಾಡಿದ ರಾಹುಲ್​177 ರನ್​ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಮುಂದುವರಿದ ವಿರಾಟ್​ ವೈಫಲ್ಯ: ಸತತ 2ನೇ ವರ್ಷವೂ ಶತಕವಿಲ್ಲದೇ ಕೊನೆಗೊಳಿಸಿದ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.