ತರೊಬಾ(ವೆಸ್ಟ್ ಇಂಡೀಸ್): ಸ್ಫೋಟಕ ಬ್ಯಾಟಿಂಗ್ನಿಂದ ಹೆಸರುಗಳಿಸಿರುವ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಇದೀಗ ಟಿ-20ಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಕರ್ಷಕ 64ರನ್ ಸಿಡಿಸಿದ ಹಿಟ್ಮ್ಯಾನ್ ಚುಟುಕು ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಈಗಾಗಲೇ 4 ಶತಕ ಸಿಡಿಸಿ ಮಿಂಚಿರುವ ರೋಹಿತ್ ಶರ್ಮಾ ಇಲ್ಲಿಯವರೆಗೆ 129 ಪಂದ್ಯಗಳನ್ನಾಡಿದ್ದು, ಈ ಪೈಕಿ 121 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ 27 ಅರ್ಧಶತಕ ಸೇರಿಕೊಂಡಿದ್ದು, 3,443ರನ್ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
-
Rohit Sharma overtakes Virat Kohli to set a new T20I record as India go 1-0 up against West Indies 👏
— ICC (@ICC) July 30, 2022 " class="align-text-top noRightClick twitterSection" data="
Watch #WIvIND for FREE on https://t.co/MHHfZPyHf9 (in select regions) 📺https://t.co/HCCldnG2en
">Rohit Sharma overtakes Virat Kohli to set a new T20I record as India go 1-0 up against West Indies 👏
— ICC (@ICC) July 30, 2022
Watch #WIvIND for FREE on https://t.co/MHHfZPyHf9 (in select regions) 📺https://t.co/HCCldnG2enRohit Sharma overtakes Virat Kohli to set a new T20I record as India go 1-0 up against West Indies 👏
— ICC (@ICC) July 30, 2022
Watch #WIvIND for FREE on https://t.co/MHHfZPyHf9 (in select regions) 📺https://t.co/HCCldnG2en
ಎರಡನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಮಾರ್ಟಿಲ್ ಗಪ್ಟಿಲ್ ಇದ್ದು, ಅವರು 116 ಪಂದ್ಯಗಳಿಂದ 2 ಶತಕ, 20 ಅರ್ಧಶತಕ ಸೇರಿದಂತೆ 3,399ರನ್ಗಳಿಕೆ ಮಾಡಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಾವು ಆಡಿರುವ 99 ಪಂದ್ಯಗಳಿಂದ 3,308ರನ್ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ ಆ ಸ್ಥಾನವನ್ನು ರೋಹಿತ್ ಶರ್ಮಾ ಅಲಂಕರಿಸಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 68ರನ್ಗಳ ಗೆಲುವು ದಾಖಲಿಸಿದ್ದು, ಈ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿರಿ: WI vs Ind,1st T20:ಸ್ಪಿನ್ ಬಲೆಗೆ ಬಿದ್ದ ಕೆರೆಬಿಯನ್ನರು..ಭಾರತಕ್ಕೆ 68 ರನ್ಗಳ ಜಯ