ಲಖನೌ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 37 ರನ್ಗಳಿಸುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಸಿಡಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ 122 ಪಂದ್ಯಗಳಿಂದ 3263 ರನ್ಗಳಿಸಿದ್ದರು. ಈ ಪಂದ್ಯದಲ್ಲಿ 9ನೇ ಓವರ್ನಲ್ಲಿ ವಾಂಡರ್ಸೆ ಬೌಲಿಂಗ್ನಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಕಿವೀಸ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ರನ್ನು ಹಿಂದಿಕ್ಕಿ ಈ ವಿಶ್ವ ದಾಖಲೆಗೆ ಪಾತ್ರರಾದರು.
ಗಪ್ಟಿಲ್ 112 ಪಂದ್ಯಗಳಿಂದ 2 ಶತಕಗಳ ಸಹಿತ 3299 ರನ್ಗಳಿಸಿದ್ದರು. ರೋಹಿತ್ ತಮ್ಮ 123ನೇ ಪಂದ್ಯದಲ್ಲಿ 3307ರನ್ಗಳಿಸಿ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿ ಬ್ಯಾಟರ್ ಎನಿಸಿಕೊಂಡಿದ್ದಾರೆ. 3ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 97 ಪಂದ್ಯಗಳಲ್ಲಿ 30 ಅರ್ಧಶತಕಗಳ ಸಹಿತ 3296 ರನ್ಗಳಿಸಿದ್ದಾರೆ. ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ 2776, ಆಸ್ಟ್ರೇಲಿಯಾ ಆ್ಯರೋನ್ ಫಿಂಚ್ 2686ರನ್ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ ಈ ಪಂದ್ಯದಲ್ಲಿ 32 ಎಸೆತಗಳಲ್ಲಿ 44 ರನ್ಗಳಿಸಿ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕ ಸಿಡಿಸಿದ ಸಚಿನ್ ವಿಶ್ವದಾಖಲೆಗೆ 12 ವರ್ಷದ ಸಂಭ್ರಮ