ETV Bharat / sports

ರೋಹಿತ್ ಶರ್ಮಾ 500 ಸಿಕ್ಸರ್.. ಕ್ರಿಸ್​ಗೇಲ್​ ದಾಖಲೆ ಮುರಿಯಲು ಬೇಕು 51 ಸಿಕ್ಸರ್​ - Rohit Sharma sixer

ರೋಹಿತ್​ ಶರ್ಮಾ ಸಿಕ್ಸರ್​ ಬಾರಿಸುವಲ್ಲಿ ಎತ್ತಿದ ಕೈ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಸಿಕ್ಸರ್ ಬಾರಿಸಿದ್ದು, ಭಾರತದ ಮೊದಲ ಮತ್ತು ವಿಶ್ವದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Hitman Rohit Sharma sixer record
ರೋಹಿತ್ ಶರ್ಮಾ 500 ಸಿಕ್ಸರ್
author img

By

Published : Dec 8, 2022, 7:11 AM IST

ಢಾಕಾ(ಬಾಂಗ್ಲಾದೇಶ): ಭಾರತ ತಂಡದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಸಿಕ್ಸರ್​ ಬಾರಿಸಿದ್ದು, ಭಾರತದ ಮೊದಲ ಬ್ಯಾಟರ್​ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ಬರೆದರು. ವೆಸ್ಟ್​ಇಂಡೀಸ್​ನ ದೈತ್ಯ ಬ್ಯಾಟ್ಸ್​​ಮನ್​​ ಕ್ರಿಸ್​ಗೇಲ್​ 553 ಸಿಕ್ಸರ್​ ಸಿಡಿಸಿದ ಮೊದಲಿಗರಾಗಿದ್ದು, ಈ ದಾಖಲೆ ಮುರಿಯಲು ರೋಹಿತ್​​ ಇನ್ನೂ 51 ಸಿಕ್ಸರ್​ ಬಾರಿಸಬೇಕಿದೆ.

ಬಾಂಗ್ಲಾದೇಶದ ವಿರುದ್ಧದ ನಡೆದ 2ನೇ ಏಕದಿನ ಪಂದ್ಯದಲ್ಲಿ ಗಾಯದ ಮಧ್ಯೆಯೂ ಕೊನೆಯಲ್ಲಿ ಮೈದಾನಕ್ಕಿಳಿದ ಹಿಟ್​​ಮ್ಯಾನ್​ 3 ಬೌಂಡರಿ 5 ಸಿಕ್ಸರ್​ ಸಮೇತ ಅಜೇಯ 51 ರನ್​ ಗಳಿಸಿದಾಗ್ಯೂ ಭಾರತ ಪಂದ್ಯ ಸೋಲು ಕಂಡಿತು. ರೋಹಿತ್​ ಪಂದ್ಯದಲ್ಲಿ 3 ನೇ ಸಿಕ್ಸರ್​ ಬಾರಿಸಿದಾಗ 500 ಸಿಕ್ಸರ್​ ದಾಖಲೆ ಬರೆದರು. ಒಟ್ಟಾರೆ 502 ಸಿಕ್ಸರ್​ ರೋಹಿತ್​ ಖಾತೆಯಲ್ಲಿವೆ.

ಸಿಡಿಲಮರಿ ಹೆಸರಲ್ಲಿದೆ ವಿಶ್ವದಾಖಲೆ: ಸಿಕ್ಸರ್​ಗಳ ಸುರಿಮಳೆ ಸುರಿಸಿ ಪಂದ್ಯದ ಗತಿಯನ್ನೇ ಬದಲಿಸುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಪಟ್ಟಿಯಲ್ಲಿ ಮೊದಲಿದ್ದಾರೆ. ಒಟ್ಟು 553 ಬಾರಿ ಚೆಂಡನ್ನು ಗೆರೆಯಾಚೆ ದಾಟಿಸಿದ ವಿಶ್ವದಾಖಲೆ ಕೆರೆಬಿಯನ್​ ಬ್ಯಾಟರ್​ ಹೆಸರಲ್ಲಿದೆ. ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ 476, ನ್ಯೂಜಿಲೆಂಡ್​ನ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್ 398, ಮತ್ತೊಬ್ಬ ಕಿವೀಸ್​ ಬ್ಯಾಟರ್​ ಮಾರ್ಟಿನ್ ಗಪ್ಟಿಲ್ 383 ಸಿಕ್ಸರ್ ಬಾರಿಸಿದ ಮೊದಲ ಐವರಾಗಿದ್ದಾರೆ.

ಓದಿ: ಭಾರತದ ವಿರುದ್ಧ ಸತತ 2 ಏಕದಿನ ಸರಣಿ ಗೆದ್ದ ಬಾಂಗ್ಲಾ; ಫಲ ನೀಡದ ರೋಹಿತ್‌ ವೀರಾವೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.