ಹೈದರಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಯುಗಾರಂಭವಾಗಿದೆ. ಇದೇ ವಿಚಾರವಾಗಿ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting) ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ (Team India Coach Rahul Dravid) ಸೇರಿಕೊಂಡಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ ಎಂದಿರುವ ಪಾಂಟಿಂಗ್, ರಾಹುಲ್ ದ್ರಾವಿಡ್ ಚಿಕ್ಕ ಕುಟುಂಬ ಬಿಟ್ಟು ಭಾರತ ತಂಡದ ಮುಖ್ಯ ಕೋಚ್ ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಅಂಡರ್-19 ತಂಡದ ಕೋಚ್ ಆಗಿದ್ದ ವೇಳೆ ದ್ರಾವಿಡ್ ತುಂಬಾ ಖುಷಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಭಾರತೀಯ ಕ್ರಿಕೆಟ್ ಮಂಡಳಿ (BCCI) ಉತ್ತಮ ವ್ಯಕ್ತಿಗೆ ಮಣೆ ಹಾಕಿದೆ ಎಂದರು.
ಇದನ್ನೂ ಓದಿ: Mushtaq Ali Trophy: ಬೆಂಗಾಲ್ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದ ಕರ್ನಾಟಕದ ಆಟ 'ಸೂಪರ್'
'ನನಗೂ ಆಫರ್ ಬಂದಿತ್ತು'
ಟೀಂ ಇಂಡಿಯಾ ಪುರುಷ ತಂಡದ ಕೋಚ್ ಆಗುವಂತೆ ನನಗೂ ದುಬೈನಲ್ಲಿ ಸಂಪರ್ಕ ಮಾಡಲಾಗಿತ್ತು ಎಂದು ರಿಕಿ ಪಾಂಟಿಂಗ್ (Former Australia skipper Ricky Ponting) ಹೇಳಿದ್ದಾರೆ. ದುಬೈನಲ್ಲಿ 14ನೇ ಆವೃತ್ತಿ ಐಪಿಎಲ್ (IPL) ಆಯೋಜನೆಗೊಂಡಾಗ ಬಿಸಿಸಿಐನ ಕೆಲವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಕೆಲವು ಕಾರಣಗಳಿಗಾಗಿ ನಾನು ಹುದ್ದೆ ನಿರಾಕರಿಸಿದೆ ಎಂದು ಹೇಳಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಪಾಂಟಿಂಗ್, ಆಸ್ಟ್ರೇಲಿಯಾದಲ್ಲಿ ಅರೆಕಾಲಿಕ ಕ್ರಿಕೆಟ್ ಪರಿಣಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.