ಕೊಲಂಬೊ: ಭಾರತ ತಂಡ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ಗಳ ವಿರೋಚಿತ ಗೆಲುವು ಸಾಧಿಸಿತು. ದೀಪಕ್ ಚಹಾರ್ ಮತ್ತು ಭುವನೇಶ್ವರ್ ಕುಮಾರ್ ಅವರ ಅದ್ಭುತ ಆಟದಿಂದ ಸೋಲಿನ ಸುಳಿಯಲ್ಲಿದ್ದ ಭಾರತ ತಂಡ ಅತ್ಯುತ್ತಮವಾಗಿ ತಿರುಗಿಬಿದ್ದು, ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆ 2-0ಯಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಅತಿಥೇಯ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 7 ವಿಕೆಟ್ ಕಳೆದುಕೊಂಡು ಇನ್ನು 5 ಎಸೆತಗಳು ಇರುವಂತೆ ಗೆಲುವು ಸಾಧಿಸಿತು. ಆದರೆ 115ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್(53), ದೀಪಕ್ ಚಹಾರ್ ಅಜೇಯ 69 ಮತ್ತು ಭುವನೇಶ್ವರ್ ಕುಮಾರ್ ಅಜೇಯ 19 ರನ್ ಗಳಿಸಿ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.
-
From raw emotions to Rahul Dravid's stirring dressing room speech 🗣️🗣️@28anand & @ameyatilak go behind the scenes to get you reactions from #TeamIndia's 🇮🇳 thrilling win over Sri Lanka in Colombo 🔥 👌 #SLvIND
— BCCI (@BCCI) July 21, 2021 " class="align-text-top noRightClick twitterSection" data="
DO NOT MISS THIS!
Full video 🎥 👇https://t.co/j2NjZwZLkk pic.twitter.com/iQMPOudAmw
">From raw emotions to Rahul Dravid's stirring dressing room speech 🗣️🗣️@28anand & @ameyatilak go behind the scenes to get you reactions from #TeamIndia's 🇮🇳 thrilling win over Sri Lanka in Colombo 🔥 👌 #SLvIND
— BCCI (@BCCI) July 21, 2021
DO NOT MISS THIS!
Full video 🎥 👇https://t.co/j2NjZwZLkk pic.twitter.com/iQMPOudAmwFrom raw emotions to Rahul Dravid's stirring dressing room speech 🗣️🗣️@28anand & @ameyatilak go behind the scenes to get you reactions from #TeamIndia's 🇮🇳 thrilling win over Sri Lanka in Colombo 🔥 👌 #SLvIND
— BCCI (@BCCI) July 21, 2021
DO NOT MISS THIS!
Full video 🎥 👇https://t.co/j2NjZwZLkk pic.twitter.com/iQMPOudAmw
ಸೋಲಿನ ಸುಳಿಗೆ ಸಿಲುಕಿದರೂ ಎದೆಗುಂದದೇ ದೃಢ ನಂಬಿಕೆಯಿಂದ ಆಡಿದ್ದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಯುವ ತಂಡವನ್ನು ಚಾಂಪಿಯನ್ ತಂಡವೆಂದು, ಇದೊಂದು ಅದ್ಭುತ ಗೆಲುವು ಎಂದು ಕೊಂಡಾಡಿದ್ದಾರೆ.
ಅವರು(ಶ್ರೀಲಂಕಾ) ಅತ್ಯುತ್ತಮವಾಗಿ ಪ್ರತಿಕ್ರಿಯಿಸಿದರು. ಆದರೆ ನಾವು ಕೂಡ ಅವರಿಗೆ ಅತ್ಯುತ್ತಮವಾಗಿಯೇ ತಿರುಗೇಟು ನೀಡಿ ಚಾಂಪಿಯನ್ ತಂಡ ಎನಿಸಿಕೊಂಡಿದ್ದೇವೆ. ಕಠಿಣ ಸಂದರ್ಭದಲ್ಲೂ ಪ್ರಬಲ ಹೋರಾಟ ತೋರುವ ಮೂಲಕ ಗೆಲುವಿನ ದಾರಿಯನ್ನು ಕಂಡುಕೊಂಡಿದ್ದೇವೆ. ಇದು ಅದ್ಭುತ ಗೆಲುವು ಎಂದು ಬಿಸಿಸಿಐ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ದ್ರಾವಿಡ್ ಪಂದ್ಯದ ನಂತರ ಆಟಗಾರರಿಗೆ ಹೇಳಿದ್ದಾರೆ.
ಈ ವಿಡಿಯೋದಲ್ಲಿ ದ್ರಾವಿಡ್ ಅಲ್ಲದೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಭುವನೇಶ್ವರ್ ಕುಮಾರ್, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಹಾರ್ ಕೂಡ ತಮ್ಮ ಸಂಭ್ರಮದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ದೀಪಕ್ ಚಾಹರ್ ಮೇಲೆ ದ್ರಾವಿಡ್ ನಂಬಿಕೆ... ದೇಶಕ್ಕೆ ಜಯದ ಕಾಣಿಕೆ