ETV Bharat / sports

ಅಬುಧಾಬಿಯಲ್ಲಿ ನಡೆಯಲಿದೆ ಮುಂದೂಡಲ್ಪಟ್ಟ ಪಾಕಿಸ್ತಾನ ಸೂಪರ್ ಲೀಗ್ - Pakistan cricket board

ಪಾಕಿಸ್ತಾನ ಸೂಪರ್​ ಲೀಗ್​ನ ಮೊದಲ 14 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದ್ದವು. ಆದರೆ ಬಯೋಬಬಲ್​ನಲ್ಲಿ ಆಟಗಾರರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಮಾರ್ಚ್​ 4ರಂದು ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಉಳಿದ 20 ಪಂದ್ಯಗಳನ್ನು ಅಬುಧಾಬಿಯಲ್ಲಿ ಆಯೋಜಿಸಲು ಪಿಸಿಬಿಗೆ ಯುಎಇ ಸರ್ಕಾರ ಅನುಮತಿ ನೀಡಿದೆ.

ಅಬುಧಾಬಿಯಲ್ಲಿ ನಡೆಯಲಿದೆ ಮುಂದೂಡಲ್ಪಟ್ಟ ಪಾಕಿಸ್ತಾನ್ ಸೂಪರ್ ಲೀಗ್

author img

By

Published : May 20, 2021, 4:57 PM IST

ಲಾಹೋರ್: ಕೋವಿಡ್ ಸಾಂಕ್ರಾಮಿಕದ ಕಾರಣ ಮುಂದೂಡಲ್ಪಟ್ಟಿರುವ ಪಾಕಿಸ್ತಾನ ಸೂಪರ್ ಲೀಗ್​ನ ಮುಂದುವರಿದ ಭಾಗಕ್ಕೆ ಆತಿಥ್ಯವಹಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಸೂಪರ್​ ಲೀಗ್​ನ ಮೊದಲ 14 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದ್ದವು. ಆದರೆ ಬಯೋಬಬಲ್​ನಲ್ಲಿ ಆಟಗಾರರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಮಾರ್ಚ್​ 4ರಂದು ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಉಳಿದ 20 ಪಂದ್ಯಗಳನ್ನು ಅಬುಧಾಬಿಯಲ್ಲಿ ಆಯೋಜಿಸಲು ಪಿಸಿಬಿಗೆ ಯುಎಇ ಸರ್ಕಾರ ಅನುಮತಿ ನೀಡಿದೆ.

ಇಂದು ಪಿಸಿಬಿ ಎಲ್ಲಾ 6 ಫ್ರಾಂಚೈಸಿಗಳ ಮಾಲೀಕರ ಜೊತೆ ಆನ್​ಲೈನ್ ಮೀಟಿಂಗ್ ನಡೆಸಲಿದ್ದು, ಪ್ರಸ್ತುತ ಪ್ರಗತಿ, ಕ್ವಾರಂಟೈನ್​ ಮತ್ತು ಮುಂದಿನ ಯೋಜನೆಗಳ ಕುರಿತು ಚರ್ಚಿಸಲಿವೆ ಎಂದು ತಿಳಿದುಬಂದಿದೆ.

ಜೂನ್​ ತಿಂಗಳಲ್ಲಿ ಟೂರ್ನಿ ಪುನರಾರಂಭಗೊಳ್ಳಲಿದ್ದು, ಜೂನ್ 20ರಂದು ಫೈನಲ್​ ಪಂದ್ಯ ನಿಗದಿಯಾಗಿದೆ. ಪ್ರಸ್ತುತ ಕರಾಚಿ ಕಿಂಗ್ಸ್ ತಂಡ 5 ಪಂದ್ಯಗಳಲ್ಲಿ 3 ಗೆಲುವು ಪಡೆದು 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪೇಶಾವರ್ ಜಾಲ್ಮಿ, ಇಸ್ಲಾಮಾಬಾದ್ ಯುನೈಟೆಡ್​, ಲಾಹೋರ್​ ಕೂಡ 6 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ.

ಇದನ್ನು ಓದಿ: ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ವಿಶ್ವದ ಯಾವ ತಂಡವನ್ನಾದರೂ ಮಣಿಸಬಹುದು: ಪೂಜಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.