ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕಣಕ್ಕಿಳಿಸಿದ್ದ 11ರ ಬಳಗವನ್ನೇ ಆಯ್ಕೆ ಮಾಡಿದೆ. ಕೆಕೆಆರ್ ಕೂಡ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಆರ್ಸಿಬಿ ಗುಂಪು ಹಂತದಲ್ಲಿ 14 ಪಂದ್ಯಗಳಿಂದ 18 ಅಂಕ ಪಡೆದು 3ನೇ ಸ್ಥಾನ ಪಡೆದರೆ, ಕೆಕೆಆರ್ 14 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿತ್ತು.
-
🚨 Toss Update from Sharjah 🚨@RCBTweets have elected to bat against @KKRiders. #VIVOIPL | #RCBvKKR | #Eliminator
— IndianPremierLeague (@IPL) October 11, 2021 " class="align-text-top noRightClick twitterSection" data="
Follow the match 👉 https://t.co/PoJeTfVJ6Z pic.twitter.com/LSP3KP4mtL
">🚨 Toss Update from Sharjah 🚨@RCBTweets have elected to bat against @KKRiders. #VIVOIPL | #RCBvKKR | #Eliminator
— IndianPremierLeague (@IPL) October 11, 2021
Follow the match 👉 https://t.co/PoJeTfVJ6Z pic.twitter.com/LSP3KP4mtL🚨 Toss Update from Sharjah 🚨@RCBTweets have elected to bat against @KKRiders. #VIVOIPL | #RCBvKKR | #Eliminator
— IndianPremierLeague (@IPL) October 11, 2021
Follow the match 👉 https://t.co/PoJeTfVJ6Z pic.twitter.com/LSP3KP4mtL
ತಲಾ 14 ಐಪಿಎಲ್ ಆವೃತ್ತಿಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇದೇ ಮೊದಲ ಬಾರಿಗೆ ನಾಕೌಟ್ನಲ್ಲಿ ಎದುರುಬದುರಾಗುತ್ತಿವೆ. ಎರಡೂ ತಂಡಗಳು ಒಟ್ಟು 28 ಪಂದ್ಯಗಳಲ್ಲಿ ಮುಖಾ ಮುಖಿಯಾಗಿದ್ದು, ಆರ್ಸಿಬಿ 13, ಕೆಕೆಆರ್ 15 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB): ವಿರಾಟ್ ಕೊಹ್ಲಿ (ನಾಯಕ), ದೇವ್ದತ್ ಪಡಿಕ್ಕಲ್, ಕೆ.ಎಸ್.ಭರತ್,ಎಬಿ ಡಿ ವಿಲಿಯರ್ಸ್,ಗ್ಲೇನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್, ಮೊಹಮ್ಮದ್ ಶಹಬಾಜ್ , ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಯುಜುವೇಂದ್ರ ಚಹಲ್.
ಕೋಲ್ಕತ್ತಾ ನೈಟ್ ರೈಡರ್ಸ್(KKR): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ, ಶಿವಂ ಮಾವಿ, ಶಕಿಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ,