ETV Bharat / sports

ಆರ್​ಸಿಬಿ ಆಟಗಾರರ ಮುಡಿಗೆ ಸೇರಿದ ಆರೆಂಜ್, ಪರ್ಪಲ್ ಕ್ಯಾಪ್... ಪಾಯಿಂಟ್ ಪಟ್ಟಿಯಲ್ಲಿ ಕೊಹ್ಲಿ ಪಡೆ ದರ್ಬಾರ್​

ಸತತ ಎರಡು ಅರ್ಧಶತಕ ಸೇರಿದಂತೆ ಮೂರು ಪಂದ್ಯಗಳಿಂದ 176 ರನ್​ ಸಿಡಿಸಿರುವ ಗ್ಲೇನ್ ಮ್ಯಾಕ್ಸ್​ವೆಲ್ ಆರಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಅವರು ಮೊದಲ ಪಂದ್ಯದಲ್ಲಿ 39, 2ನೇ ಪಂದ್ಯದಲ್ಲಿ 59 ಹಾಗೂ ಒಂದು 78 ರನ್​ ಗಳಿಸಿದ್ದಾರೆ.

ಆರ್​ಸಿಬಿ ದಾಖಲೆ
ಆರ್​ಸಿಬಿ ದಾಖಲೆ
author img

By

Published : Apr 18, 2021, 8:31 PM IST

ಚೆನ್ನೈ: 2021ರ ಐಪಿಎಲ್​ನಲ್ಲಿ 11 ಪಂದ್ಯಗಳು ಅಂತ್ಯಗೊಂಡಿದ್ದು, ಆರ್​ಸಿಬಿ ತಂಡ ಅತಿ ಹೆಚ್ಚು ಗೆಲುವು ಪಡೆದ ತಂಡವಾದರೆ, ಇದೇ ತಂಡದ ಆಟಗಾರರು ಹೆಚ್ಚು ರನ್​ ಮತ್ತು ಹೆಚ್ಚು ವಿಕೆಟ್ ಪಡೆದು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಆರ್​ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 2 ವಿಕೆಟ್​ಗಳಿಂದ ಗೆದ್ದಿದ್ದ ಕೊಹ್ಲಿ ಪಡೆ, ನಂತರ 2ನೇ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ 6 ರನ್​ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಕೆಕೆಆರ್ ವಿರುದ್ಧ 38 ರನ್​ಗಳ ಸುಲಭ ಜಯ ಸಾಧಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತನ್ನ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರವಾಗಿದೆ.

ಗ್ಲೇನ್ ಮ್ಯಾಕ್ಸ್​ವೆಲ್
ಗ್ಲೇನ್ ಮ್ಯಾಕ್ಸ್​ವೆಲ್

ಇನ್ನು ಸತತ ಎರಡು ಅರ್ಧಶತಕ ಸೇರಿದಂತೆ ಮೂರು ಪಂದ್ಯಗಳಿಂದ 176 ರನ್​ ಸಿಡಿಸಿರುವ ಗ್ಲೇನ್ ಮ್ಯಾಕ್ಸ್​ವೆಲ್ ಆರಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಅವರು ಮೊದಲ ಪಂದ್ಯದಲ್ಲಿ 39, 2ನೇ ಪಂದ್ಯದಲ್ಲಿ 59 ಹಾಗೂ ಒಂದು 78 ರನ್ ​ಗಳಿಸಿದ್ದಾರೆ.

ಹರ್ಷಲ್ ಪಟೇಲ್
ಹರ್ಷಲ್ ಪಟೇಲ್

ಇನ್ನು ಆರ್​ಸಿಬಿಯ ಪ್ರಧಾನ ಡೆತ್​ ಬೌಲರ್​ ಆಗಿರುವ ಹರ್ಷಲ್ ಪಟೇಲ್ 3 ಪಂದ್ಯಗಳಿಂದ 9 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಅವರು ನಂತರದ 2 ಪಂದ್ಯಗಳಲ್ಲಿ ತಲಾ 2 ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.