ಚೆನ್ನೈ: ಕಳೆದ 5 ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡುತ್ತಿದ್ದ ಚೆಪಾಕ್ನಲ್ಲಿ ಇಂದು ಕೆಕೆಆರ್ ವಿರುದ್ಧ ಮಿಸ್ಟರ್ 360 ಎಬಿಡಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರದ ಪ್ರದರ್ಶನ ತೋರಿ ಅರ್ಧಶತಕ ಬಾರಿಸಿ ಮಿಂಚಿದರು.
2021ರ ಚೆನ್ನೈನಲ್ಲಿ ನಡೆದಿದ್ದ ಪಂದ್ಯಗಳಲ್ಲಿ 187 ಗರಿಷ್ಠ ಮೊತ್ತವಾಗಿತ್ತು. ಆದರೆ ಆರ್‌ಸಿಬಿ ಇಂದು ಕೇವಲ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು 204 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಗ್ಲೆನ್ ಮ್ಯಾಕ್ಸ್ವೆಲ್ ಒತ್ತಡದ ಸನ್ನಿವೇಶದಲ್ಲಿ ಕ್ರೀಸ್ಗೆ ಆಗಮಿಸಿದರೂ, ಲೀಲಾಜಾಲವಾಗಿ ಬ್ಯಾಟ್ ಬೀಸಿ ಟೂರ್ನಿಯಲ್ಲಿ 2ನೇ ಅರ್ಧಶತಕ ಸಿಡಿಸಿದರು. ಅವರು 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 78 ರನ್ಗಳಿಸಿ ಆರ್ಸಿಬಿಗೆ ಭದ್ರ ಬುನಾದಿ ಹಾಕಿದರೆ, ಎಬಿಡಿ ಕೊನೆಯ 3 ಓವರ್ಗಳಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದರು.
ಸ್ಪಿನ್ನರ್ ಮತ್ತು ಪೇಸರ್‌ಗಳೆನ್ನದೆ ದಂಡಿಸಿದ ಅವರು ಕೇವಲ 28 ಎಸೆತಗಳಲ್ಲಿ ಐಪಿಎಲ್‌ನಲ್ಲಿ ತಮ್ಮ 39ನೇ ಅರ್ಧಶತಕ ದಾಖಲಿಸಿದರು. ಒಟ್ಟಾರೆ 34 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿಗಳ ಸಹಿತ ಅಜೇಯ 76 ರನ್ಗಳಿಸಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಟೂರ್ನಿಯಲ್ಲಿ ಚೆಪಾಕ್ನಲ್ಲಿ 200ರ ಗಡಿ ದಾಟಿದ ಮೊದಲ ತಂಡ ಎನಿಸಿಕೊಂಡಿದೆ.
ಚೆಪಾಕ್ನಲ್ಲಿ ನಡೆದಿದ್ದ ಹಿಂದಿನ ಪಂದ್ಯಗಳಲ್ಲಿ ಮುಂಬೈ 159, 152, 150, ಕೋಲ್ಕತ್ತಾ 187 ಮತ್ತು ಆರ್‌ಸಿಬಿ 149 ರನ್ಗಳಿಸಿತ್ತು.
ಇದನ್ನೂ ಓದಿ: ಎಬಿಡಿ, ಮ್ಯಾಕ್ಸ್ವೆಲ್ ಸ್ಪೋಟಕ ಅರ್ಧಶತಕ: ಕೆಕೆಆರ್ಗೆ 205ರನ್ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ