ETV Bharat / sports

Dhoni ನಂತರ ಸಿಎಸ್​ಕೆ ಕಪ್ತಾನ್​​​​ ಆಗಲಿದ್ದಾರೆ ಈ ಖತರ್ನಾಕ್​ ಪ್ಲೇಯರ್​​.. ಯಾರು ಆ ಆಪತ್ಬಾಂಧವ!?

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್​ ಧೋನಿ ಕೆಳಗಿಳಿದ ಬಳಿಕ ಆ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಅದಕ್ಕೀಗ ಸ್ಪಷ್ಟವಾದ ಉತ್ತರ ಸಿಕ್ಕಿದೆ.

chennai super kings captain
chennai super kings captain
author img

By

Published : Jan 15, 2022, 7:53 PM IST

Updated : Jan 15, 2022, 7:59 PM IST

ಹೈದರಾಬಾದ್​​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​​ಗೋಸ್ಕರ ಎಲ್ಲ ಫ್ರಾಂಚೈಸಿಗಳು ತಮ್ಮಿಷ್ಟದ ಕೆಲ ಆಟಗಾರರಿಗೆ ರಿಟೈನ್​ ಮಾಡಿಕೊಂಡಿವೆ. ಪ್ರಮಖವಾಗಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​​ ಮಹೇಂದ್ರ ಸಿಂಗ್​ ಧೋನಿ ಸೇರಿದಂತೆ ನಾಲ್ವರು ಪ್ಲೇಯರ್ಸ್​ಗೆ ತಂಡದಲ್ಲಿ ಉಳಿಸಿಕೊಂಡಿದೆ.

ಐಪಿಎಲ್​​ನಲ್ಲಿ ಅತಿ ಹೆಚ್ಚು ಸಲ ಚಾಂಪಿಯನ್​ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್​​​ ಪರ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಈ ಸಲ ಕೊನೆ ಐಪಿಎಲ್​ ಆಡಲಿದ್ದು, ನಂತರ ನಿವೃತ್ತಿ ಪಡೆದುಕೊಳ್ಳಲಿದ್ದಾರೆಂಬ ಮಾತು ಕೇಳಿ ಬಂದಿದೆ. ಹೀಗಾಗಿ, ಮುಂದಿನ ಆವೃತ್ತಿಗೆ ನಾಯಕ ಯಾರು ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.

ಖತರ್ನಾಕ್ ಪ್ಲೇಯರ್​ಗೆ ಸಿಎಸ್​ಕೆ ಮಣೆ

Ravindra jadeja may become of CSK captain
ಚೆನ್ನೈ ತಂಡದ ನಾಯಕನಾಗಲಿರುವ ರವೀಂದ್ರ ಜಡೇಜಾ

ಮಹೇಂದ್ರ ಸಿಂಗ್ ಧೋನಿ ನಂತರ ಸಿಎಸ್​ಕೆ ತಂಡದಲ್ಲಿರುವ ಆಲ್​ರೌಂಡರ್ ರವೀಂದ್ರ ಜಡೇಜಾಗೆ ತಂಡ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಈ ಸಲದ ರಿಟೈನ್​ ವೇಳೆ ಧೋನಿಗಿಂತಲೂ ಜಡೇಜಾಗೆ ಹೆಚ್ಚಿನ ಹಣ ನೀಡಿದೆ. ರಿಟೈನ್ ವೇಳೆ ಧೋನಿಗೆ 12 ಕೋಟಿ ರೂ. ನೀಡಿದ್ರೆ, ಆಲ್​ರೌಂಡರ್ ಜಡೇಜಾಗೆ 16 ಕೋಟಿ ರೂ. ನೀಡಲಾಗಿದೆ.

ಅದ್ಭುತ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್​​ನಿಂದಾಗಿ ಹೆಸರುವಾಸಿಯಾಗಿರುವ ಜಡೇಜಾ, ಫೀಲ್ಡಿಂಗ್​​ನಲ್ಲೂ ಮಿಂಚು ಹರಿಸಿದ್ದಾರೆ. 2021ರಲ್ಲಿ ಆರ್​​ಸಿಬಿ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಹರ್ಷಲ್​ ಪಟೇಲ್​ ಎಸೆದ ಓವರ್​ವೊಂದರಲ್ಲಿ ದಾಖಲೆಯ 37ರನ್​ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಐಪಿಎಲ್​​ನಲ್ಲಿ ಇಲ್ಲಿಯವರೆಗೆ 200 ಪಂದ್ಯಗಳಿಂದ 2,386 ರನ್​ಗಳಿಸಿರುವ ಇವರು, 127 ವಿಕೆಟ್​ ಪಡೆದು ಮಿಂಚಿದ್ದಾರೆ.

ಇದನ್ನೂ ಓದಿರಿ: BIG BREAKING: ಟೆಸ್ಟ್​ ತಂಡದ ನಾಯಕತ್ವಕ್ಕೂ ರಾಜೀನಾಮೆ ಘೋಷಿಸಿದ ಕೊಹ್ಲಿ

ನಾಯಕನಾಗುವ ಎಲ್ಲ ರೀತಿಯ ಅರ್ಹತೆ ಹೊಂದಿರುವ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್​​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದ ಅನೇಕ ಸಂದರ್ಭಗಳಲ್ಲಿ ಬಂಡೆಯಾಗಿ ನಿಂತು ಗೆಲುವಿನ ಕಾಣಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸಿಎಸ್​ಕೆ ಮುಂದಿನ ಕೆಲ ವರ್ಷಗಳ ಕಾಲ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಧೋನಿ ಬಳಿಕ ನಾಯಕತ್ವ ಜವಾಬ್ದಾರಿ ನೀಡಲು ಮುಂದಾಗಿದೆ. 2012ರಿಂದಲೂ ಜಡೇಜಾ ಸಿಎಸ್​ಕೆ ತಂಡದಲ್ಲಿ ಆಡುತ್ತಿದ್ದು, ಮೂರು ಸಲ ಟ್ರೋಫಿ ಗೆದ್ದಿದ್ದಾರೆ.

2022ರ ಟೂರ್ನಿಗಾಗಿ ತಂಡ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಇಂಗ್ಲೆಂಡ್​ನ ಮೊಯಿನ್​ ಅಲಿಯನ್ನು ಉಳಿಸಿಕೊಂಡಿದೆ.

Last Updated : Jan 15, 2022, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.