ETV Bharat / sports

ವಿಶ್ವಕಪ್​ಗೂ ಮೊದಲೇ ಭಾರತಕ್ಕೆ ಆಘಾತ.. ತಾರಾ ಆಲ್​ರೌಂಡರ್​ ಟಿ20 ವಿಶ್ವಕಪ್​ಗೆ ಮಿಸ್​ ಸಾಧ್ಯತೆ - ಕೋಚ್​ ದ್ರಾವಿಡ್​ ಪ್ರತಿಕ್ರಿಯೆ

ವಿಶ್ವಕಪ್​ಗೂ ಮೊದಲೇ ಭಾರತಕ್ಕೆ ಆಘಾತ ಎದುರಾಗಲಿದೆ. ಗಾಯಗೊಂಡು ಏಷ್ಯಾ ಕಪ್​ನಿಂದ ಹೊರಬಿದ್ದಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ, ವಿಶ್ವಕಪ್​ಗೂ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಪಾಕ್​ ತಂಡದ ಶಹನವಾಜ್​ ದಹಾನಿ ಗಾಯಗೊಂಡಿದ್ದು, ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ravindra-jadeja-likely-to-miss-t20-world-cup
ತಾರಾ ಆಲ್​ರೌಂಡರ್​ ವಿಶ್ವಕಪ್​ಗೆ ಮಿಸ್​ ಸಾಧ್ಯತೆ
author img

By

Published : Sep 3, 2022, 9:49 PM IST

ದುಬೈ: ಗಾಯಗೊಂಡು ಏಷ್ಯಾಕಪ್​ನಿಂದ ಹೊರಬಿದ್ದಿರುವ ಭಾರತದ ತಾರಾ ಆಲ್‌ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್​ 16 ರಿಂದ ನಡೆಯುವ ಟಿ-20 ವಿಶ್ವಕಪ್​ ಅನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ನಾಕೌಟ್​ ಹಂತದ ಹಾಂ​ಕಾಂಗ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಬಿದ್ದು ರವೀಂದ್ರ ಜಡೇಜಾ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ಜಡೇಜಾಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಇದರಿಂದ ಅವರಿಗೆ ದೀರ್ಘ ಸಮಯದ ವಿಶ್ರಾಂತಿ ಅಗತ್ಯವಿರುವ ಕಾರಣ ವಿಶ್ವಕಪ್​ ಮಿಸ್​ ಆಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಏಷ್ಯಾ ಕಪ್​ನಿಂದ ಹೊರಬಿದ್ದಿರುವ ಜಡೇಜಾ ಸದ್ಯ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಇವರ ಬದಲಾಗಿ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ದಿಗ್ವಿಜಯದಲ್ಲಿ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದರು. 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಜಡ್ಡು ಅಮೂಲ್ಯ 35 ರನ್​ ಚಚ್ಚಿದರು. ಇನ್ನೊಬ್ಬ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಕೋಚ್​ ದ್ರಾವಿಡ್​ ಪ್ರತಿಕ್ರಿಯೆ: ರವೀಂದ್ರ ಜಡೇಜಾ ಗಾಯದ ಕುರಿತಾಗಿ ಮಾತನಾಡಿದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​, ಜಡೇಜಾ ಸದ್ಯಕ್ಕೆ ವೈದ್ಯಕೀಯ ನಿಗಾದಲ್ಲಿದ್ದಾರೆ. ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ಗಾಯ ತೀವ್ರತೆ ಮೇಲೆ ಅವರು ವಿಶ್ವಕಪ್​ಗೆ ಲಭ್ಯರಾಗಲಿದ್ದಾರೆ, ಇಲ್ಲವೇ ಎಂಬ ಬಗ್ಗೆ ತಿಳಿದು ಬರಲಿದೆ ಎಂದರು.

ವಿಶ್ವಕಪ್​ಗೆ ಇನ್ನೂ 6 ವಾರಗಳು ಬಾಕಿ ಇವೆ. ಈಗಲೇ ಏನನ್ನೂ ಹೇಳಲು ಬರುವುದಿಲ್ಲ. ಗುಣಮುಖರಾಗಿ ಬರುವ ಸಾಧ್ಯತೆ ಇದೆ. ಸದ್ಯಕ್ಕೆ ಅವರು ಏಷ್ಯಾಕಪ್​ನಿಂದ ದೂರವಾಗಿದ್ದಾರೆ ಎಂದರು.

ಪಾಕಿಸ್ತಾ​ನ ತಂಡಕ್ಕೂ ಆಘಾತ: ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಶಾಕ್​ ಉಂಟಾಗಿದೆ. ವೇಗದ ಬೌಲರ್ ಶಾನವಾಜ್ ದಹಾನಿ ಮೊಣಕೈ ಗಾಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ವೇಗದ ಬೌಲರ್​ ಶಾಹೀನ್​ ಆಫ್ರಿದಿ, ಮೊಹಮದ್​ ವಾಸಿಂ ಗಾಯಗೊಂಡು ಟೂರ್ನಿಯಲ್ಲಿ ಭಾಗವಹಿಸಿಲ್ಲ. ಇದೀಗ ಮೂರನೇ ಬೌಲರ್​ ಕೂಡ ಔಟ್​ ಆಗಿರುವುದು ತಂಡವನ್ನು ಚಿಂತೆಗೀಡು ಮಾಡಿದೆ.

ಶಹನವಾಜ್ ದಹಾನಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಮೊಣಕೈಗೆ ಗಾಯವಾಗಿದೆ. ಇದರಿಂದ ಭಾರತ ವಿರುದ್ಧದ ಸೂಪರ್​ 4 ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ(ಪಿಸಿಬಿ) ಹೇಳಿಕೆ ಬಿಡುಗಡೆ ಮಾಡಿದೆ.

ಓದಿ: ಏಷ್ಯಾ ಕಪ್ ಟೂರ್ನಿಯಿಂದ ಆಲ್​ರೌಂಡರ್ ರವೀಂದ್ರ ಜಡೇಜಾ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.