ETV Bharat / sports

ICC Test Rankings: ರವೀಂದ್ರ ಜಡೇಜಾಗೆ ನಂಬರ್​ 1 ಆಲ್​ರೌಂಡರ್ ಪಟ್ಟ - ರಿಷಭ್ ಪಂತ್ ಬ್ಯಾಟಿಂಗ್ ರ್‍ಯಾಂಕಿಂಗ್

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಹೋಲ್ಡರ್​ 28 ರೇಂಟಿಂಗ್ ಪಾಯಿಂಟ್ಸ್ ಕಳೆದುಕೊಂಡಿದ್ದರಿಂದ ಜಡೇಜಾ ನಿರಾಯಾಸವಾಗಿ ಅಗ್ರಸ್ಥಾನಕ್ಕೇರಿದ್ದಾರೆ. 2017ರ ನಂತರ ಜಡೇಜಾ ಮತ್ತೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
author img

By

Published : Jun 23, 2021, 4:46 PM IST

ದುಬೈ: ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಟೆಸ್ಟ್​ ಆಲ್​ರೌಂಡರ್​ ರ್‍ಯಾಂಕಿಂಗ್​ನಲ್ಲಿ ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ ಅಗ್ರಸ್ಥಾನಕ್ಕೇರಿದ್ದಾರೆ. 386 ರೇಟಿಂಗ್ ಅಂಕಗಳನ್ನು ಪಡೆದಿರುವ 32 ವರ್ಷ ಜಡ್ಡು, ವೆಸ್ಟ್​ ಇಂಡೀಸ್​ನ ಮಾಜಿ ನಾಯಕ ಜೇಸನ್ ಹೋಲ್ಡರ್​ ಅವರನ್ನು ಹಿಂದಿಕ್ಕಿದ್ದಾರೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಹೋಲ್ಡರ್​ 28 ರೇಂಟಿಂಗ್ ಪಾಯಿಂಟ್ಸ್ ಕಳೆದುಕೊಂಡಿದ್ದರಿಂದ ಜಡೇಜಾ ನಿರಾಯಾಸವಾಗಿ ಅಗ್ರಸ್ಥಾನಕ್ಕೇರಿದ್ದಾರೆ. 2017ರ ನಂತರ ಜಡೇಜಾ ಮತ್ತೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಆರ್ ಅಶ್ವಿನ್ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಪ್ರಸ್ತುತ ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆಡುತ್ತಿದ್ದಾರೆ.

ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿ ತಟಸ್ಥವಾಗಿದ್ದಾರೆ. ಇವರ ಜೊತೆ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಟಾಪ್​ 10ರಲ್ಲಿದ್ದಾರೆ. ಇಬ್ಬರು ತಲಾ 747 ಅಂಕಗಳನ್ನು ಹೊಂದಿದ್ದು, ಜಂಟಿ 6ನೇ ಸ್ಥಾನದಲ್ಲಿದ್ದಾರೆ.

ವೆಸ್ಟ್​ ಇಂಡೀಸ್ ವಿರುದ್ಧ 2-0ಯಲ್ಲಿ ಟೆಸ್ಟ್​ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕ್ವಿಂಟನ್ ಡಿಕಾಕ್(10) 2 ಸ್ಥಾನ ಮೇಲೇರಿ ಟಾಪ್ 10ಕ್ಕೆ ಪ್ರವೇಶಿಸಿದ್ದಾರೆ.

ಇದನ್ನು ಓದಿ:ಟೀಂ​ ಇಂಡಿಯಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಮುತ್ತಿಕ್ಕಿ ಇಂದಿಗೆ 8 ವರ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.