ETV Bharat / sports

ಐಸಿಸಿ ರ‍್ಯಾಂಕಿಂಗ್​: ಟೆಸ್ಟ್​ ಬೌಲರ್‌ಗಳ ಪಟ್ಟಿಯಲ್ಲಿ ಜಿಗಿತ ಕಂಡ ಅಶ್ವಿನ್, ಜಡೇಜಾ - ರೋಹಿತ್ ಶರ್ಮಾ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಐಸಿಸಿ ರ‍್ಯಾಂಕಿಂಗ್​ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ravichandran-ashwin-at-number-two-in-icc-test-bowler-rankings
ಐಸಿಸಿ ರ‍್ಯಾಂಕಿಂಗ್​: ಟೆಸ್ಟ್​ ಬೌಲರ್‌ಗಳ ಪಟ್ಟಿಯಲ್ಲಿ ಜಿಗಿತ ಕಂಡ ಅಶ್ವಿನ್, ಜಡೇಜಾ
author img

By

Published : Feb 15, 2023, 6:16 PM IST

ದುಬೈ: ಐಸಿಸಿ ಏಕದಿನ, ಟೆಸ್ಟ್​ ಮತ್ತು ಟಿ-20 ತಂಡಗಳು ಮತ್ತು ಆಟಗಾರರ ರ‍್ಯಾಂಕಿಂಗ್‌ ಪ್ರಕಟಿಸಿದ್ದು, ಟೆಸ್ಟ್​ ಬೌಲರ್‌ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮತ್ತೊಂದೆಡೆ, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್​ ಬೌಲರ್‌ಗಳ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 16ನೇ ಸ್ಥಾನ ಪಡೆದಿದ್ದಾರೆ.

ನಾಗ್ಪುರದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಮೂರು ವಿಕೆಟ್​ ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್​ಗಳು ಪಡೆದು ಒಟ್ಟಾರೆ ಎಂಟು ವಿಕೆಟ್​ಗಳನ್ನು ಅಶ್ವಿನ್ ಕಬಳಿಸಿದ್ದರು. ಈ ಪ್ರದರ್ಶನದಿಂದ ಟೆಸ್ಟ್​ ಬೌಲರ್‌ಗಳ ರ‍್ಯಾಂಕಿಂಗ್​ನಲ್ಲಿ ಅಶ್ವಿನ್ 846 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನ ಹೊಂದಿದ್ದಾರೆ.

ನಂ.1 ಶ್ರೇಯಾಂಕಕ್ಕೆ ಅಶ್ವಿನ್ ಮರಳುವ ನಿರೀಕ್ಷೆ: ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ 867 ಅಂಕಗಳಿಂದ ಟೆಸ್ಟ್​ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್‌ಗಿಂತ 21 ರೇಟಿಂಗ್ ಪಾಯಿಂಟ್‌ಗಳ ಹಿಂದಿರುವ 36 ವರ್ಷದ ಟೀಂ ಇಂಡಿಯಾದ ಆಫ್‌ಸ್ಪಿನ್ನರ್ 2017ರ ನಂತರ ಮೊದಲ ಬಾರಿಗೆ ನಂ.1 ಶ್ರೇಯಾಂಕಕ್ಕೆ ಮರಳುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಇಂಗ್ಲೆಂಡ್​ನ ಜೇಮ್ಸ್ ಆಂಡರ್ಸನ್ (835) ಮತ್ತು ಒಲ್ಲಿ ರಾಬಿನ್ಸನ್ (805 ) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ, ವೇಗಿ ಜಸ್ಪ್ರೀತ್ ಬುಮ್ರಾ 803 ಅಂಕಗಳೊಂದಿಗೆ ಅಗ್ರ ಐವರಲ್ಲಿ ಹೊಂದಿದ್ದಾರೆ. ಬುಮ್ರಾ ಕಳೆದ ಸೆಪ್ಟೆಂಬರ್‌ನಿಂದ ಬೆನ್ನಿನ ನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ.

ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದಾಗಿ ಸುಮಾರು ಐದು ತಿಂಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಆದರೆ, ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೂಲಕ ಭರ್ಜರಿ ಕಮ್​ಕ್ಯಾಬ್​ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್​, ಎರಡನೇ ಇನ್ನಿಂಗ್ಸ್​ನಲ್ಲಿ ಎರಡು ವಿಕೆಟ್​ ಪಡೆದಿದ್ದ ಜಡೇಜಾ, 70 ಬಾರಿ ಬ್ಯಾಟಿಂಗ್​ನಲ್ಲೂ ಮಿಂಚಿದ್ದರು. ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಜೋಡಿಯು ಮೋಡಿಯಿಂದ ಆಸ್ಟ್ರೇಲಿಯ ವಿರುದ್ಧ ಭಾರತ ಇನ್ನಿಂಗ್ಸ್ ಸಮೇತ 132 ರನ್‌ಗಳಿಂದ ಗೆಲುವು ದಾಖಲಿಸಿತ್ತು.

ಆಸ್ಟ್ರೇಲಿಯ ವಿರುದ್ಧ ಶತಕ ಸಿಡಿಸಿದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ಎರಡು ಸ್ಥಾನ ಮೇಲೇರಿದ್ದಾರೆ. 786 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದಿದ್ದಾರೆ. ತಮ್ಮ ಭೀಕರ ಕಾರು ಅಪಘಾತದಿಂದ ಸದ್ಯ ತಂಡದಿಂದ ಹೊರಗುಳಿದಿರುವ ವಿಕೆಟ್​ ಕೀಪರ್ ರಿಷಬ್ ಪಂತ್ ಅಗ್ರ 10ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, 789 ಅಂಕಗಳೊಂದಿಗೆ ಅವರು ಏಳನೇ ಸ್ಥಾನ ಹೊಂದಿದ್ದಾರೆ.

ಆಲ್‌ರೌಂಡರ್ ಪಟ್ಟಿಯಲ್ಲಿ ಜಡೇಜಾ ಹಾಗೂ ಅಶ್ವಿನ್ ಮೊದಲ ಎರಡು ಅಗ್ರ ಸ್ಥಾನಗಳನ್ನು ಪಡೆದಿದ್ದಾರೆ. 424 ಅಂಕಗಳೊಂದಿಗೆ ಜಡೇಜಾ ನಂಬರ್​ ನಂ.1 ಆಲ್‌ರೌಂಡರ್ ಆಗಿದ್ದರೆ, 358 ಅಂಕಗಳನ್ನು ಹೊಂದಿರುವ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. 254 ಅಂಕಗಳೊಂದಿಗೆ ಟೆಸ್ಟ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಆರು ಸ್ಥಾನಗಳನ್ನು ಮೇಲೇರಿ ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಏಕದಿನ ರ‍್ಯಾಂಕಿಂಗ್‌: ಏಕದಿನ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಪಾಕಿಸ್ತಾನದ ಬಾಬರ್​ ಅಜಂ 887 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಬೌಲಿಂಗ್​ ಶ್ರೇಯಾಂಕದಲ್ಲಿ ಭಾರತದ ಮೊಹಮ್ಮದ್​ ಸಿರಾಜ್​ 729 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಶ್ರೇಯಾಂಕದಲ್ಲಿ ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ 389 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಟಿ-20 ಶ್ರೇಯಾಂಕ: ಟಿ-20 ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ 909 ಅಂಕಗಳೊಂದಿಗೆ ಟೀಂ ಇಂಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್​ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ ಅಫ್ಘಾನಿಸ್ತಾನದ ರಶೀದ್​ ಖಾನ್​ 698 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ 252 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಟೆಸ್ಟ್​, ಏಕದಿನ, ಟಿ-20.. ಮೂರು ಮಾದರಿಯಲ್ಲೂ ಟೀಂ ಇಂಡಿಯಾಗೆ ನಂಬರ್​ ಒನ್​ ಪಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.