ಲಾಹೋರ್(ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನ ತಂಡ ಉತ್ತಮ ಫಲಿತಾಂಶ ಕಂಡಿದೆಯಂತೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ರಮೀಜ್ ರಾಜಾ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ತಂಡದ ಅಧ್ಯಕ್ಷರಾಗಿ ರಮೀಜ್ ರಾಜಾ ಆಯ್ಕೆಯಾದ ಬಳಿಕ ತಂಡದ ನಾಯಕ ಬಾಬರ್ ಆಜಂ ಅವರಿಗೆ ಎಲ್ಲ ರೀತಿಯ ಅಧಿಕಾರ ನೀಡಿದ್ದು, ನಿರ್ಭೀತಿಯಿಂದ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
ಇದರ ಫಲವಾಗಿ ಪಾಕ್ ತಂಡ 9 ಟಿ-20 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದ್ದು, ಬಾಂಗ್ಲಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಜಯಸಿದೆ ಎಂದಿದ್ದಾರೆ. ಇದರಲ್ಲಿ ಐಸಿಸಿ ಟಿ-20 ವಿಶ್ವಕಪ್ನ ಎಲ್ಲ ಗ್ರೂಪ್ ಹಂತದ ಪಂದ್ಯಗಳು ಸೇರಿಕೊಂಡಿದ್ದು, ಟೀಂ ಇಂಡಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಗೆಲುವು ಸೇರಿಕೊಂಡಿವೆ ಎಂದಿದ್ದಾರೆ.
- — Pakistan Cricket (@TheRealPCB) December 10, 2021 " class="align-text-top noRightClick twitterSection" data="
— Pakistan Cricket (@TheRealPCB) December 10, 2021
">— Pakistan Cricket (@TheRealPCB) December 10, 2021
ಕ್ರಿಕೆಟ್ನಲ್ಲಿ ನಾಯಕತ್ವ ಮುಖ್ಯವಾಗಿರುತ್ತದೆ. ನಾಯಕನಾದವನಿಗೆ ಅಧಿಕಾರ ನೀಡಿದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸ್ವತಃ ನಿರ್ಧಾರ ಕೈಗೊಳ್ಳುವುದರಿಂದ ಆತನಲ್ಲಿ ಸ್ಪಷ್ಟತೆ ಹಾಗೂ ನಿಖರತೆ ಇರುತ್ತದೆ ಎಂದು ರಮೀಜ್ ರಾಜಾ ತಿಳಿಸಿದ್ದಾರೆ.
ಇದನ್ನೂ ಓದಿರಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಇಬ್ಬರು ಪೊಲೀಸರು ಹುತಾತ್ಮ
ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಪಂದ್ಯ ಆರಂಭಕ್ಕೂ ಮುಂಚಿತವಾಗಿ ಫಲಿತಾಂಶದ ಬಗ್ಗೆ ಯಾವುದೇ ರೀತಿ ಚಿಂತೆ ಮಾಡದಂತೆ ನಾನು ಬಾಬರ್ಗೆ ಹೇಳಿದ್ದೇನು ಎಂದು ರಮೀಜ್ ರಾಜಾ ತಿಳಿಸಿದ್ದಾರೆ. ಪಾಕಿಸ್ತಾನ ತಂಡ ಬಾಂಗ್ಲಾದೇಶದಲ್ಲಿ ಅದ್ಭುತ ಕ್ರಿಕೆಟ್ ಪ್ರದರ್ಶನ ನೀಡಿದೆ. ಅದಕ್ಕಾಗಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಟಿ-20 ವಿಶ್ವಕಪ್ ವಿಚಾರವಾಗಿ ನಮ್ಮ ತಂಡವನ್ನ ಶ್ಲಾಘಿಸಬೇಕು. ಇದೀಗ ಡ್ರೆಸ್ಸಿಂಗ್ ರೂಂ ವಾತಾವರಣ ಉತ್ತಮವಾಗಿದೆ ಎಂದಿದ್ದಾರೆ. ಇದೇ ವೇಳೆ ನಾನು ವೆಸ್ಟ್ ಇಂಡೀಸ್ ತಂಡವನ್ನ ಪಾಕಿಸ್ತಾನಕ್ಕೆ ಸ್ವಾಗತಿಸುತ್ತೇನೆ ಎಂದಿದ್ದಾರೆ.