ಮುಂಬೈ: ಜಾಸ್ ಬಟ್ಲರ್(103) ಅವರ ಅಮೋಘ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 217 ರನ್ಗಳನ್ನು ಕಲೆಹಾಕಿದ್ದು, ಕೆಕೆಆರ್ಗೆ ಗೆಲ್ಲಲು 218ರನ್ಗಳ ಬೃಹತ್ ಗುರಿ ನೀಡಿದೆ.
ಬ್ರಬೋರ್ನ್ ಸ್ಟೇಡಿಂಯನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ಗೆ ಬಟ್ಲರ್ ಮತ್ತು ಪಡಿಕ್ಕಲ್ ಮೊದಲ ವಿಕೆಟ್ಗೆ 97 ರನ್ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು. ಇದರಲ್ಲಿ ಪಡಿಕ್ಕಲ್ ಕಾಣಿಕೆ ಕೇವಲ 24(18) ರನ್ . ಕರ್ನಾಟಕ ಬ್ಯಾಟರ್ ಉತ್ತಮ ಆರಂಭ ಪಡೆದರಾದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಮತ್ತೊಮ್ಮೆ ವಿಫಲರಾದರು.
ಪಡಿಕ್ಕಲ್ ವಿಕೆಟ್ ಕಳೆದುಕೊಂಡ ನಂತರವೂ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಬಟ್ಲರ್ 61 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 103 ರನ್ಗಳಿಸಿ ಟೂರ್ನಿಯಲ್ಲಿ 2ನೇ ಶತಕ ಸಾಧನೆ ಮಾಡಿದರು. ಇವರು 2ನೇ ವಿಕೆಟ್ ಜೊತೆಯಾಟದಲ್ಲಿ ಸಾಮ್ಸನ್ ಜೊತೆಗೆ 69 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಸಾಮ್ಸನ್ 19 ಎಸೆತಗಳಲ್ಲಿ 38 ರನ್ಗಳಿಸಿದರೆ, ಹೆಟ್ಮಾಯರ್ 13 ಎಸೆತಗಳಲ್ಲಿ 26 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕರುಣ್ ನಾಯರ್ 3, ಪರಾಗ್ 5 ರನ್ಗಳಿಸಿದರು.
ಕೆಕೆಆರ್ ಪರ ಸುನಿಲ್ ನರೈನ್ 21ಕ್ಕೆ 2 ವಿಕೆಟ್, ರಸೆಲ್ 29ಕ್ಕೆ1, ಪ್ಯಾಟ್ ಕಮಿನ್ಸ್ 50ಕ್ಕೆ1 ಶಿವಂ ಮಾವಿ 34ಕ್ಕೆ 1ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೀ), ಕರುಣ್ ನಾಯರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ವೆಂಕಟೇಶ್ ಅಯ್ಯರ್, ಆರೋನ್ ಫಿಂಚ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್ (ವಿಕೀ), ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ