ETV Bharat / sports

IPLಗೆ ರಿಎಂಟ್ರಿ ಕೊಟ್ಟ ಯಾರ್ಕರ್ ಕಿಂಗ್: ರಾಜಸ್ಥಾನ ರಾಯಲ್ಸ್​​ ಪಾಳಯ ಸೇರಿದ ಮಲಿಂಗ

author img

By

Published : Mar 11, 2022, 4:00 PM IST

ಯಾರ್ಕರ್​ ಬೌಲಿಂಗ್​​ನಿಂದಲೇ ಎದುರಾಳಿ ಬ್ಯಾಟರ್​ಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಲಿಂಗ ಇದೀಗ ರಾಜಸ್ಥಾನ ರಾಯಲ್ಸ್​​​ ಪಾಳಯ ಸೇರ್ಪಡೆಯಾಗಿದ್ದಾರೆ.

Lasith Malinga as fast bowling coach
Lasith Malinga as fast bowling coach

ಮುಂಬೈ: ಯಾರ್ಕರ್​​​​ ಸ್ಪೆಷಲಿಸ್ಟ್​, ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಲಿಂಗ ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಮರುಪ್ರವೇಶ ಕೊಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಬೌಲಿಂಗ್ ಕೋಚ್​​ ಆಗಿ ಅವರು ಸೇರ್ಪಡೆಯಾಗಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್​​ 5 ಬಾರಿ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಿಂಗ ರಾಜಸ್ಥಾನ ತಂಡ ಸೇರಿಕೊಳ್ಳಲಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಫ್ರಾಂಚೈಸಿ ಅಧಿಕೃತ ಮಾಹಿತಿ ತಿಳಿಸಿದೆ. ಈಗಾಗಲೇ ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಇದ್ದು, ಅವರಿಗೆ ಮಲಿಂಗ ಸಾಥ್ ನೀಡಲಿದ್ದಾರೆ.

*𝐤𝐢𝐬𝐬𝐞𝐬 𝐭𝐡𝐞 𝐛𝐚𝐥𝐥*

Lasith Malinga. IPL. Pink. 💗#RoyalsFamily | #TATAIPL2022 | @ninety9sl pic.twitter.com/p6lS3PtlI3

— Rajasthan Royals (@rajasthanroyals) March 11, 2022

ಇದನ್ನೂ ಓದಿ: ಮಹಿಳಾ ಕ್ರಿಕೆಟ್​ಗೆ ಪ್ರೋತ್ಸಾಹ: 1.5 ಮಿಲಿಯನ್ ಯುರೋ ಹೂಡಿಕೆ ಮುಂದಾದ ಐರ್ಲೆಂಡ್

38 ವರ್ಷದ ಮಲಿಂಗ ಐಪಿಎಲ್​​ನಲ್ಲಿ 122 ಪಂದ್ಯಗಳನ್ನಾಡಿದ್ದು, 170 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಇವರು, ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಬೌಲಿಂಗ್​ ಸ್ಟ್ರಾಟಜಿ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಮುಂಬೈ ಇಂಡಿಯನ್ಸ್ ಪರ ಮಲಿಂಗ 122 ಪಂದ್ಯಗಳನ್ನಾಡಿ 170 ವಿಕೆಟ್ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ ಎನ್ನುವ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.

15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಮಾರ್ಚ್ 26ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಸಲ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ಸೆಣಸಾಡಲಿವೆ.

ಮುಂಬೈ: ಯಾರ್ಕರ್​​​​ ಸ್ಪೆಷಲಿಸ್ಟ್​, ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಲಿಂಗ ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಮರುಪ್ರವೇಶ ಕೊಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಬೌಲಿಂಗ್ ಕೋಚ್​​ ಆಗಿ ಅವರು ಸೇರ್ಪಡೆಯಾಗಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್​​ 5 ಬಾರಿ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಿಂಗ ರಾಜಸ್ಥಾನ ತಂಡ ಸೇರಿಕೊಳ್ಳಲಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಫ್ರಾಂಚೈಸಿ ಅಧಿಕೃತ ಮಾಹಿತಿ ತಿಳಿಸಿದೆ. ಈಗಾಗಲೇ ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಇದ್ದು, ಅವರಿಗೆ ಮಲಿಂಗ ಸಾಥ್ ನೀಡಲಿದ್ದಾರೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟ್​ಗೆ ಪ್ರೋತ್ಸಾಹ: 1.5 ಮಿಲಿಯನ್ ಯುರೋ ಹೂಡಿಕೆ ಮುಂದಾದ ಐರ್ಲೆಂಡ್

38 ವರ್ಷದ ಮಲಿಂಗ ಐಪಿಎಲ್​​ನಲ್ಲಿ 122 ಪಂದ್ಯಗಳನ್ನಾಡಿದ್ದು, 170 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಇವರು, ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಬೌಲಿಂಗ್​ ಸ್ಟ್ರಾಟಜಿ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಮುಂಬೈ ಇಂಡಿಯನ್ಸ್ ಪರ ಮಲಿಂಗ 122 ಪಂದ್ಯಗಳನ್ನಾಡಿ 170 ವಿಕೆಟ್ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ ಎನ್ನುವ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.

15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಮಾರ್ಚ್ 26ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಸಲ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ಸೆಣಸಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.