ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ವೇಗಿ ಪಂಕಜ್​ ಸಿಂಗ್

ಈ ದಿನ ನನ್ನ ಪಾಲಿಗೆ ಕಠಿಣ ದಿನವಾಗಿದೆ. ಆದರೂ ಇಂದು ನಾನು ಕೃತಜ್ಞತೆ ತಿಳಿಸುವ ದಿನವೂ ಕೂಡ ಆಗಿದೆ. ಆರ್​ಸಿಎ, ಬಿಸಿಸಿಐ, ಐಪಿಎಲ್ ಮತ್ತು ಸಿಎಪಿ ಪರ ಆಡಿರುವುದು ನನಗೆ ದೊಡ್ಡ ಗೌರವವಾಗಿದೆ..

ಪಂಕಜ್ ಸಿಂಗ್ ನಿವೃತ್ತಿ
ಪಂಕಜ್ ಸಿಂಗ್ ನಿವೃತ್ತಿ
author img

By

Published : Jul 10, 2021, 4:23 PM IST

Updated : Jul 10, 2021, 6:42 PM IST

ಜೈಪುರ : ಭಾರತ ತಂಡದ ಮಾಜಿ ವೇಗಿ ಪಂಕಜ್​ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಶನಿವಾರ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ವೇಗಿ ಭಾರತ ತಂಡದ ಪರ 2 ಟೆಸ್ಟ್​ ಮತ್ತು ಒಂದು ಏಕದಿನ ಪಂದ್ಯವನ್ನಾಡಿದ್ದರು. 2010ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪಂಕಜ್,​ 2014ರಲ್ಲಿ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದ ಪಂಕಜ್​ ದೇಶಿ ಕ್ರಿಕೆಟ್​ನಲ್ಲಿ ರಾಜಸ್ಥಾನ ತಂಡ 2010-11ಮತ್ತು 2011-12ರಲ್ಲಿ ರಣಜಿ ಟ್ರೋಫಿ ಗೆಲ್ಲುವುದಕ್ಕೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರು 117 ಪ್ರಥಮ ದರ್ಜೆ ಪಂದ್ಯಗಳಿಂದ 472 ವಿಕೆಟ್​ ಪಡೆದಿದ್ದಾರೆ. ಐಪಿಎಲ್​ನಲ್ಲಿ 17 ಪಂದ್ಯಗಳನ್ನಾಡಿದ್ದು, ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿದ್ದರು.

"ಈ ದಿನ ನನ್ನ ಪಾಲಿಗೆ ಕಠಿಣ ದಿನವಾಗಿದೆ. ಆದರೂ ಇಂದು ನಾನು ಕೃತಜ್ಞತೆ ತಿಳಿಸುವ ದಿನವೂ ಕೂಡ ಆಗಿದೆ. ಆರ್​ಸಿಎ, ಬಿಸಿಸಿಐ, ಐಪಿಎಲ್ ಮತ್ತು ಸಿಎಪಿ ಪರ ಆಡಿರುವುದು ನನಗೆ ದೊಡ್ಡ ಗೌರವವಾಗಿದೆ" ಎಂದು ಪಂಕಜ್​ ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ನಾನು ಆರ್​ಸಿಎ(ರಾಜಸ್ಥಾನ್ ಕ್ರಿಕೆಟ್​ ಮಂಡಳಿ) ಪರ 15 ವರ್ಷ ಆಡಿದ್ದು, ಹಲವು ಮೈಲುಗಲ್ಲನ್ನು ತಲುಪಿದ್ದೇನೆ. ಆರ್​ಸಿಬಿ ನೆರಳಲ್ಲಿ ಅಪಾರ ಅನುಭವಗಳಿಸಿಕೊಂಡಿದ್ದೇನೆ. ಆರ್​ಸಿಎ ಜೊತೆಗಿನ ನನ್ನ ಪಯಣ ಸದಾ ನೆನಪಿನಲ್ಲಿರುತ್ತದೆ. ನಿವೃತ್ತಿ ನಿರ್ಧಾರ ಸುಲಭವಲ್ಲದಿದ್ದರೂ, ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲಿ ಈ ದಿನ ಬಂದೇ ಬರುತ್ತದೆ. ತುಂಬು ಹೃದಯದಿಂದ ಮತ್ತು ಮಿಶ್ರ ಭಾವನೆಗಳಿಂದ ಇಂದು ನಾನು ಎಲ್ಲಾ ಸ್ವರೂಪದ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದು ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಹರ್ಭಜನ್ ಸಿಂಗ್‌-ಗೀತಾ ಬಸ್ರಾ ದಂಪತಿಗೆ 2ನೇ ಮಗು ಜನನ.. ಪುತ್ರನ ಆಗಮನಕ್ಕೆ Turbanator ಖುಷ್..

Last Updated : Jul 10, 2021, 6:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.