ಪಾರ್ಲ್(ದಕ್ಷಿಣ ಆಫ್ರಿಕಾ) : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಕೆ ಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುವ ಮೂಲಕ 50 ಓವರ್ಗಳ ಕ್ರಿಕೆಟ್ನಲ್ಲಿ ಹಿಂದೆ ಒಂದೂ ಪಂದ್ಯದಲ್ಲಿ ನಾಯಕನಾಗದೇ ನೇರವಾಗಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ 3ನೇ ಭಾರತೀಯ ಕ್ರಿಕೆಟರ್ ಎನಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಮತ್ತು ವಿಕೆಟ್ ಕೀಪರ್ ಸೈಯದ್ ಕೀರ್ಮಾನಿ ಈ ಹಿಂದೆ ಲಿಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗದೇ ನೇರವಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು.
ಕೊಹ್ಲಿ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಏಕದಿನ ನಾಯಕತ್ವದಿಂದ ಬಿಸಿಸಿಐ ವಜಾಗೊಳಿಸಿ, ಮುಂಬೈಕರ್ ರೋಹಿತ್ ಶರ್ಮಾರನ್ನು ಏಕದಿನ ತಂಡದ ನಾಯಕನಾಗಿ ನೇಮಿಸಲಾಗಿತ್ತು. ಆದರೆ, ರೋಹಿತ್ ಫಿಟ್ ಆಗಿಲ್ಲದ ಕಾರಣ ಕನ್ನಡಿಗ ರಾಹುಲ್ರನ್ನು ಆಯ್ಕೆ ಸಮಿತಿ ನಾಯಕನನ್ನಾಗಿ ನೇಮಿಸಿತ್ತು.
ಕರ್ನಾಟಕ ಬ್ಯಾಟರ್ 50 ಏಕದಿನ ಪಂದ್ಯಗಳನ್ನಾಡದೇ ನಾಯಕತ್ವ ಪಡೆದ 2ನೇ ಭಾರತೀಯ ಎನಿಸಿದರು. ಅವರು 39ನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕನಾದರೆ, 1984ರ ಅಕ್ಟೋಬರ್ನಲ್ಲಿ ಮೋಹಿಂದರ್ ಅಮರ್ನಾಥ್ 35 ಪಂದ್ಯಗಳನ್ನಾಡಿ ಭಾರತ ತಂಡವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ:ಟೆನಿಸ್ ಅಭಿಮಾನಿಗಳಿಗೆ ಶಾಕ್... ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಾನಿಯಾ ಮಿರ್ಜಾ