ETV Bharat / sports

ಐಸಿಸಿ ಟಿ-20 ರ‍್ಯಾಂಕಿಂಗ್‌ : 4ರಲ್ಲಿ ರಾಹುಲ್​, 10ರಲ್ಲಿ ಕೊಹ್ಲಿ ತಟಸ್ಥ; ODI ಶ್ರೇಯಾಂಕದಲ್ಲಿ ಅಯ್ಯರ್-ಪಂತ್ ಏರಿಕೆ

author img

By

Published : Feb 16, 2022, 4:02 PM IST

ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ-20 ಶ್ರೇಯಾಂಕದಲ್ಲಿ ಭಾರತದ ಯಾವುದೇ ಬೌಲರ್​ ಅಗ್ರ 10 ಸ್ಥಾನಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. 21 ನೇ ಸ್ಥಾನದಲ್ಲಿರುವ ವೇಗಿ ಭುವನೇಶ್ವರ್​ ಕುಮಾರ್​ ಭಾರತದ ಶ್ರೇಷ್ಠ ಶ್ರೇಯಾಂಕ ಹೊಂದಿರುವ ಬೌಲರ್​ ಆಗಿದ್ದಾರೆ..

ICC  rankings
ಕೆಎಲ್ ರಾಹುಲ್ ಬ್ಯಾಟಿಂಗ್ ಶ್ರೇಯಾಂಕ

ದುಬೈ : ಭಾರತ ತಂಡದ ಆರಂಭಿಕ ಬ್ಯಾಟರ್​ ಕೆ ಎಲ್ ರಾಹುಲ್​ ಐಸಿಸಿ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ಮಾಜಿ ನಾಯಕ ವಿರಾಟ್​ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ-20 ಶ್ರೇಯಾಂಕದಲ್ಲಿ ಭಾರತದ ಯಾವುದೇ ಬೌಲರ್​ ಅಗ್ರ 10 ಸ್ಥಾನಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. 21ನೇ ಸ್ಥಾನದಲ್ಲಿರುವ ವೇಗಿ ಭುವನೇಶ್ವರ್​ ಕುಮಾರ್​ ಭಾರತದ ಶ್ರೇಷ್ಠ ಶ್ರೇಯಾಂಕ ಹೊಂದಿರುವ ಬೌಲರ್​ ಆಗಿದ್ದಾರೆ.

ಪಾಕಿಸ್ತಾನದ ಬ್ಯಾಟರ್​ಗಳಾದ ಬಾಬರ್​ ಅಜಮ್(805) ಮತ್ತು ಮೊಹಮ್ಮದ್​ ರಿಜ್ವಾನ್​(798) ಅಗ್ರ 2 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ11ನೇ ಸ್ಥಾನದಲ್ಲಿದ್ದಾರೆ.

👑 New number one T20I bowler
🚀 Rohan Mustafa launches into the top-10
⏫ Josh Hazlewood climbs four spots after an incredible performance against Sri Lanka

Some big movements in the latest @MRFWorldwide ICC Men's Player Rankings for T20Is.

Details 👉 https://t.co/YrLa53Ls5E pic.twitter.com/otGbDw3B0r

— ICC (@ICC) February 16, 2022

ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆಸೀಸ್​ ವೇಗಿ 4 ಸ್ಥಾನ ಮೇಲೇರಿ 2ಕ್ಕೆ ಬಡ್ತಿ ಪಡೆದರೆ, ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾ ಆಲ್​ರೌಂಡರ್​ ವನಿಡು ಹಸರಂಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್​ ತಬ್ರೈಜ್ ಶಮ್ಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್​ರೌಂಡರ್​ ರ‍್ಯಾಂಕಿಂಗ್​​ನಲ್ಲಿ ಆಫ್ಘಾನಿಸ್ತಾನದ ಮೊಹಮ್ಮದ್ ನಬಿ(265) ಅಗ್ರಸ್ಥಾನದಲ್ಲಿದ್ದಾರೆ.

ಏಕದಿನ ಶ್ರೇಯಾಂಕದಲ್ಲಿ ವಿರಾಟ್​-ರೋಹಿತ್ 2-3ರಲ್ಲಿ ತಟಸ್ಥ : ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್​ ಅಜಮ್​ ಅಗ್ರಸ್ಥಾನ ಪಡೆದಿದ್ದಾರೆ.

ವಿಂಡೀಸ್​ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 64 ರನ್​ಗಳಿಸಿದ್ದ ಸೂರ್ಯ ಅಗ್ರ 100ಕ್ಕೆ ಎಂಟ್ರಿಕೊಟ್ಟರೆ, ಕೊನೆಯ ಪಂದ್ಯದಲ್ಲಿ 80 ರನ್​ಗಳಿಸಿದ್ದ ಶ್ರೇಯಸ್​ ಅಯ್ಯರ್​ 13 ಸ್ಥಾನ ಏರಿಕೆ ಕಂಡು 61ರಲ್ಲಿದ್ದಾರೆ. ವಿಕೆಟ್ ಕೀಪರ್ ಪಂತ್ 6 ಸ್ಥಾನ ಮೇಲೇರಿ 71ರಲ್ಲಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಗೆ ಆಘಾತಕಾರಿ ಸುದ್ದಿ ನೀಡಿದ ಗ್ಲೇನ್​ ಮ್ಯಾಕ್ಸ್​ವೆಲ್

ದುಬೈ : ಭಾರತ ತಂಡದ ಆರಂಭಿಕ ಬ್ಯಾಟರ್​ ಕೆ ಎಲ್ ರಾಹುಲ್​ ಐಸಿಸಿ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ಮಾಜಿ ನಾಯಕ ವಿರಾಟ್​ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ-20 ಶ್ರೇಯಾಂಕದಲ್ಲಿ ಭಾರತದ ಯಾವುದೇ ಬೌಲರ್​ ಅಗ್ರ 10 ಸ್ಥಾನಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. 21ನೇ ಸ್ಥಾನದಲ್ಲಿರುವ ವೇಗಿ ಭುವನೇಶ್ವರ್​ ಕುಮಾರ್​ ಭಾರತದ ಶ್ರೇಷ್ಠ ಶ್ರೇಯಾಂಕ ಹೊಂದಿರುವ ಬೌಲರ್​ ಆಗಿದ್ದಾರೆ.

ಪಾಕಿಸ್ತಾನದ ಬ್ಯಾಟರ್​ಗಳಾದ ಬಾಬರ್​ ಅಜಮ್(805) ಮತ್ತು ಮೊಹಮ್ಮದ್​ ರಿಜ್ವಾನ್​(798) ಅಗ್ರ 2 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ11ನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆಸೀಸ್​ ವೇಗಿ 4 ಸ್ಥಾನ ಮೇಲೇರಿ 2ಕ್ಕೆ ಬಡ್ತಿ ಪಡೆದರೆ, ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾ ಆಲ್​ರೌಂಡರ್​ ವನಿಡು ಹಸರಂಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್​ ತಬ್ರೈಜ್ ಶಮ್ಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್​ರೌಂಡರ್​ ರ‍್ಯಾಂಕಿಂಗ್​​ನಲ್ಲಿ ಆಫ್ಘಾನಿಸ್ತಾನದ ಮೊಹಮ್ಮದ್ ನಬಿ(265) ಅಗ್ರಸ್ಥಾನದಲ್ಲಿದ್ದಾರೆ.

ಏಕದಿನ ಶ್ರೇಯಾಂಕದಲ್ಲಿ ವಿರಾಟ್​-ರೋಹಿತ್ 2-3ರಲ್ಲಿ ತಟಸ್ಥ : ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್​ ಅಜಮ್​ ಅಗ್ರಸ್ಥಾನ ಪಡೆದಿದ್ದಾರೆ.

ವಿಂಡೀಸ್​ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 64 ರನ್​ಗಳಿಸಿದ್ದ ಸೂರ್ಯ ಅಗ್ರ 100ಕ್ಕೆ ಎಂಟ್ರಿಕೊಟ್ಟರೆ, ಕೊನೆಯ ಪಂದ್ಯದಲ್ಲಿ 80 ರನ್​ಗಳಿಸಿದ್ದ ಶ್ರೇಯಸ್​ ಅಯ್ಯರ್​ 13 ಸ್ಥಾನ ಏರಿಕೆ ಕಂಡು 61ರಲ್ಲಿದ್ದಾರೆ. ವಿಕೆಟ್ ಕೀಪರ್ ಪಂತ್ 6 ಸ್ಥಾನ ಮೇಲೇರಿ 71ರಲ್ಲಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಗೆ ಆಘಾತಕಾರಿ ಸುದ್ದಿ ನೀಡಿದ ಗ್ಲೇನ್​ ಮ್ಯಾಕ್ಸ್​ವೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.