ETV Bharat / sports

ಶತಕ ಸಿಡಿಸಿ 6 ಲಕ್ಷ ಮೌಲ್ಯದ ಅವಾರ್ಡ್ ಪಡೆದ ಕನ್ನಡಿಗ ಕೆಎಲ್​ ರಾಹುಲ್​ಗೆ 24 ಲಕ್ಷ ರೂ. ದಂಡ!

ಪಂದ್ಯದಲ್ಲಿ ರಾಹುಲ್​ ಶತಕಗಳಿಸಿದ್ದಕ್ಕೆ ಪಂದ್ಯಶ್ರೇಷ್ಠ, ಹೆಚ್ಚು ಬೌಂಡರಿ, ಹೆಚ್ಚು ಸಿಕ್ಸರ್​, ಡ್ರೀಮ್​ ಇಲೆವೆನ್ ಗೇಮ್ ಚೇಂಜರ್​, ಸ್ಟ್ರೈಕ್​ರೇಟ್​ ಸೇರಿದಂತೆ ಈ ಪಂದ್ಯದಲ್ಲಿ ಅವರು 6 ಪ್ರಶಸ್ತಿಗಳನ್ನು ಪಡೆಯುವ ಮೂಲಕ 6 ಲಕ್ಷ ರೂ.ಗಳನ್ನು ಜೇಬಿಗಿಳಿಸಿದ್ದರು. ಆದರೆ, ಚೇಸಿಂಗ್ ವೇಳೆ ಸ್ಲೋ ಓವರ್​ ರೇಟ್​ ಕಾಯ್ದುಕೊಂಡಿದ್ದಕ್ಕೆ 24 ಲಕ್ಷ ರೂಗಳನ್ನು ದಂಡವಾಗಿ ತೆರುವಂತಾಗಿದೆ.

author img

By

Published : Apr 25, 2022, 3:15 PM IST

Rahul fined Rs 24 lakh for second over rate offence
ಕೆಎಲ್ ರಾಹುಲ್​ಗೆ 24 ಲಕ್ಷ ರೂ ದಂಡ

ಮುಂಬೈ: ಭಾನುವಾರ ಮುಂಬೈ ಇಂಡಿಯನ್ಸ್​ ವಿರುದ್ಧ ವಾಂಖೆಡೆಯಲ್ಲಿ ನಡೆದ 15ನೇ ಐಪಿಎಲ್​ ಆವೃತ್ತಿಯ 37ನೇ ಪಂದ್ಯದಲ್ಲಿ ನಿಧಾನಗತಿ ಓವರ್​ ಪ್ರದರ್ಶನಕ್ಕಾಗಿ ಲಖನೌ ಸೂಪರ್​ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್​ಗೆ ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರೂಗಳ ದಂಡ ವಿಧಿಸಿದೆ.

ಭಾನುವಾರ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಾಯಕ ಕೆಎಲ್ ರಾಹುಲ್​ ಅಜೇಯ ಶತಕದ ನೆರವಿನಿ 20 ಓವರ್​ಗಳಲ್ಲಿ 168 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲಾಗದೇ ಮುಂಬೈ ಕೇವಲ 132 ರನ್​ಗಳಿಸಿ 36 ರನ್​ಗಳ ಸೋಲು ಕಂಡಿತು.

ಪಂದ್ಯದಲ್ಲಿ ರಾಹುಲ್​ ಶತಕಗಳಿಸಿದ್ದಕ್ಕೆ ಪಂದ್ಯಶ್ರೇಷ್ಠ, ಹೆಚ್ಚು ಬೌಂಡರಿ, ಹೆಚ್ಚು ಸಿಕ್ಸರ್​, ಡ್ರೀಮ್​ ಇಲೆವೆನ್ ಗೇಮ್ ಚೇಂಜರ್​, ಸ್ಟ್ರೈಕ್​ರೇಟ್​ ಸೇರಿದಂತೆ ಈ ಪಂದ್ಯದಲ್ಲಿ ಅವರು 6 ಪ್ರಶಸ್ತಿಗಳ ಪಡೆಯುವ ಮೂಲಕ 6 ಲಕ್ಷ ರೂ.ಗಳನ್ನು ಜೇಬಿಗಿಳಿಸಿದ್ದರು. ಆದರೆ, ಚೇಸಿಂಗ್ ವೇಳೆ ಸ್ಲೋ ಓವರ್​ ರೇಟ್​ ಕಾಯ್ದುಕೊಂಡಿದ್ದಕ್ಕೆ 24 ಲಕ್ಷ ರೂಗಳನ್ನು ದಂಡವಾಗಿ ತೆರುವಂತಾಗಿದೆ.

ರಾಹುಲ್​ ಈ ಬಾರಿಯ ಐಪಿಎಲ್​ನಲ್ಲಿ ನಿಧಾನಗತಿ ಓವರ್​ ಕಾಯ್ದುಕೊಂಡಿರುವುದಕ್ಕೆ 2ನೇ ಬಾರಿಗೆ ದಂಡ ಕಟ್ಟುತ್ತಿದ್ದಾರೆ. ಮೊದಲು ಕೂಡ ಮುಂಬೈ ವಿರುದ್ಧದ ಪಂದ್ಯದಲ್ಲೇ 12 ಲಕ್ಷ ದಂಡಕಟ್ಟಿದ್ದರು. ಇದೀಗ 2ನೇ ಬಾರಿ 20 ಓವರ್​ಗಳನ್ನು ನಿಗದಿತ ಸಮಯದಲ್ಲಿ ಮುಗಿಸದಿದ್ದಕ್ಕೆ ದಂಡ ಕಟ್ಟಿದ್ದಾರೆ. ತಂಡದ ಇತರ ಸದಸ್ಯರಿಗೂ ಕೂಡ 6 ಲಕ್ಷರೂ ಅಥವಾ ಪಂದ್ಯ ಸಂಭಾವನೆಯ ಶೇ.25ರ ಷ್ಟನ್ನು ತಂಡ ವಿಧಿಸಲಾಗಿದೆ.

ಒಂದು ವೇಳೆ ಲೀಗ್​ನಲ್ಲಿ ಮತ್ತೊಮ್ಮೆ ಇದೇ ತಪ್ಪನ್ನು ಲಖನೌ ತಂಡ ಮಾಡಿದರೆ ರಾಹುಲ್ ಐಪಿಎಲ್ ನಿಯಮಾವಳಿಗಳ ಪ್ರಕಾರ​ ಒಂದು ಪಂದ್ಯ ನಿಷೇಧದ ಶಿಕ್ಷೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:ಫಾರ್ಮ್​ ಸಮಸ್ಯೆ ಸಾಮಾನ್ಯ ನನಗೂ ಎದುರಾಗಿತ್ತು, ಕೊಹ್ಲಿ ಶೀಘ್ರವೇ ರಾರಾಜಿಸ್ತಾರೆ: ಪೀಟರ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.