ಮುಂಬೈ : ಗ್ಲೋಬಲ್ ಸ್ಪೋರ್ಟ್ಸ್ ಬ್ರ್ಯಾಂಡ್ ಆಗಿರುವ ಪೂಮಾ ಕಂಪನಿಯ ಜೊತೆ ಆರ್ಸಿಬಿಯ ಯುವ ಆಟಗಾರರಾದ ವಾಷಿಂಗ್ಟನ್ ಸುಂದರ್ ಮತ್ತು ದೇವದತ್ ಪಡಿಕ್ಕಲ್ ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಕೆಎಲ್ ರಾಹುಲ್, ಮಹಿಳಾ ತಂಡದ ವಿಕೆಟ್ ಕೀಪರ್ ಸುಷ್ಮಾ ವರ್ಮಾ ಮತ್ತು ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ನಂತರ ಭಾರತದ ಭವಿಷ್ಯದ ತಾರೆಗಳಾದ ವಾಷಿಂಗ್ಟನ್ ಸುಂದರ್ ಮತ್ತು ದೇವದತ್ ಪಡಿಕ್ಕಲ್ರನ್ನು ಪೂಮಾ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಒಪ್ಪಂದ ಮಾಡಿಕೊಂಡಿದೆ.
-
Young. Fast. Fresh. Welcome home @Sundarwashi5 and @devdpd07 pic.twitter.com/VwhReEDLHd
— PUMA Cricket (@pumacricket) April 20, 2021 " class="align-text-top noRightClick twitterSection" data="
">Young. Fast. Fresh. Welcome home @Sundarwashi5 and @devdpd07 pic.twitter.com/VwhReEDLHd
— PUMA Cricket (@pumacricket) April 20, 2021Young. Fast. Fresh. Welcome home @Sundarwashi5 and @devdpd07 pic.twitter.com/VwhReEDLHd
— PUMA Cricket (@pumacricket) April 20, 2021
ಸುಂದರ್ ಭಾರತ ತಂಡದಲ್ಲಿ ಮೂರು ಮಾದರಿಯ ತಂಡದಲ್ಲೂ ಆಡುತ್ತಿದ್ದರೆ, ದೇವದತ್ ಪಡಿಕ್ಕಲ್ ದೇಶೀಯ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಪೂಮಾ ಯುವ ಆಟಗಾರರ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಕುರಿತು ಟ್ವಿಟರ್ನಲ್ಲಿ ಸಂತಸ ವ್ಯಕ್ತಪಡಿಸಿರುವ ವಾಷಿಂಗ್ಟನ್ ಸುಂದರ್, "ವಿಶ್ವದ ಕೆಲವು ಶ್ರೇಷ್ಠ ಕ್ರೀಡಾಪಟುಗಳನ್ನು ಹೊಂದಿರುವ ಪೂಮಾದಂತಹ ಬ್ರ್ಯಾಂಡ್ ಜೊತೆ ಕೈ ಜೋಡಿಸುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಪೂಮಾ ಕ್ರೀಡಾಪಟುಗಳ ಪಯಣಕ್ಕೆ ಸಾಕಷ್ಟು ವಿಶ್ವಾಸರ್ಹತೆ ನೀಡುತ್ತದೆ. ನಾನು ಈ ಬ್ರ್ಯಾಂಡ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
"ನಾನು ಪೂಮಾದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಇದು ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳೊಂದಿಗೆ ಸಂಬಂಧ ಹೊಂದಿದೆ. ಆ ಪರಂಪರೆಯ ಭಾಗವಾಗುತ್ತಿರುವುದು ನನಗೆ ಸಿಕ್ಕಿರುವ ಗೌರವ" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ ಆತ್ಮವಿಶ್ವಾಸವನ್ನ IPLನಲ್ಲೂ ಮುಂದುವರಿಸಿಕೊಂಡು ಹೋಗುವೆ : ವಾಷಿಂಗ್ಟನ್ ಸುಂದರ್